ಪುಟ:ಸ್ವಾಮಿ ಅಪರಂಪಾರ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೧೭೪

ಸ್ವಾಮಿ ಅಪರಂಪಾರ

ವವರು ಕಾಣಿಸಿದರೆ ಸಾಕು, ಕೈದಿಗಳು ಸಾಮಾನ್ಯವಾಗಿ ಜರೆಯುವುದಕ್ಕೂ ಜಗಳಾಡುವು
ದಕ್ಕೆ ಆರಂಭಿಸುವುದು ಪದ್ಧತಿ, ಉಣ್ಣಲಾಗದ, ಆದರೆ ತಿನ್ನದೆ ಇರಲಾಗದ, ಅನ್ನ, ತಟ್ಟೆ
ಗಳನ್ನು ಹಲವರು ಬಾಗಿಲಿಗೆ ಬಡೆಯುತ್ತಿದ್ದರು, ಚೀರುತ್ತಿದ್ದರು. ಅವಾಚ್ಯ ಪದಗಳನ್ನಾಡು
ತಿದ್ದರು.
ಮೊದಲೆಷ್ಟೋ ದಿವಸ ಅಪರಂಪಾರ ಅನ್ನ ಪಡೆದಿರಲಿಲ್ಲ, ಪಡೆದರೂ ತಿಂದಿರಲಿಲ್ಲ.
ನೀರೊಂದೇ ಅವನಿಗೆ ಸಾಕಾಗುತ್ತಿತ್ತು.
“ಇದು ಪ್ರಸಾದ ; ಸ್ವೀಕರಿಸದೇ ಹೇಗಿರಲಿ ?” ಎಂದುಕೊಂಡ ಕೊನೆಗೆ,
ಕಡಾಯಿಯನ್ನು ಯಾವುದಾದರೊಂದು ಕೋಣೆಯ ಮುಂದಿಡುತ್ತಿದ್ದರು. ಕೈದಿಗೂ
ಅಕ್ಕಪಕ್ಕದವರಿಗೂ ಅಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಪುನಃ ತುಸು ದೂರ ಸಾಗಿ
ಕಡಾಯಿಯನ್ನು ಕೆಳಗಿಡುತ್ತಿದ್ದರು.
ಈ ದಿನವೂ ಅಪರಂಪಾರನಿಗೆ ಕಲರವ ಕೇಳಿಸಿತು.
ತನ್ನ ಕೊಠಡಿಯ ಬಳಿಗೆ ಕಡಾಯಿ ಬಂದಾಗ ಅಪರಂಪಾರ ತಟ್ಟೆಯನ್ನು ಮುಂದಕ್ಕೆ
ಹಿಡಿದು, ಅಂದ :
“ತುಸ ಸಾಕಪ್ಪಾ.”
ಬಡಿಸುವವನು ಗದರಿದ :
“ತುಸ ಅಂತೆ ! ಉಪವಾಸ ಬಿದ್ದು ಸತ್ತು ಹೋದೀಯಾ ! ತಿನ್ನು.”
ಅನ್ನದ ಕಡಾಯಿ ಮುಂದುವರಿಯಿತು; ನೀರು ಬರುವುದು ತಡವಾಯಿತು.
ಕೆಲ ಕೈದಿಗಳು ಕೂಗಾಡಿದರು:
“ನೀರು ! ನೀರು !”
ಕಡೆಗೊಮ್ಮೆ ನೀರಿನವನು ಬಂದ.
ಕೈದಿಗಳು ಬಗೆಬಗೆಯಾಗಿ ಅಂದರು :
“ಬಾವಿ ತೋಡಿ ಸೇದ್ಯೋಂಡು ಬಂದೆಯೇನೋ ಕಳ್ಳ ಸೂ-ಮಗನೇ !”
“ದಾರಿ ಸಿಗಲಿಲ್ಲೇನೋ ಚಂಡಾಲ !”
“ನಿನ್ನಮ್ಮನ...”
“ನಿನ್ನೂ ಇಲ್ಲೇ ಮಡಕೋತೀವಿ ನೋಡು.”
ಇಬ್ಬರು ಮೂವರು ಒಟ್ಟಾಗಿ ಅಂದರು:
“ಇವನು ಹೊಸಬ !”
ಹೊಸ ಆಳು ಅಪರಂಪಾರನ ಕೊಠಡಿಯ ಮುಂದೆ ನಿಂತ, ಅಪರಂಪಾರನ ಲೋಟಕ್ಕೆ
ನಿಧಾನವಾಗಿ ನೀರನ್ನು ಬಗ್ಗಿಸುತ್ತ ಆತನ ಕಡೆ ನೋಡಿ ಮುಗುಳುನಕ್ಕ, ಗಿರಿಜಾಮಿಾಸೆಯ
ಮರೆಯಲ್ಲಿದ್ದರೂ ಮುಖ ಪರಿಚಿತವಾಗಿತ್ತು, ಅಪರಂಪಾರನ ಪಾತ್ರೆಗೆ ನೀರು ಸುರಿಯು
ತಿದ್ದಂತೆ ಪಿಸುದನಿಯಲ್ಲಿ ಅವಸರ ಅವಸರವಾಗಿ ಆ ಮನುಷ್ಯನೆಂದ :
“ಸ್ವಾಮಿಯೋರೇ, ರಾತ್ರೆ ಅನ್ನೆರಡು ಒಡಿಯೋ ವೇಳೆಗೆ ಮಲ್ಲಪ್ಪ ಕೀಲಿ ತೆಗೀತಾನೆ.
ಅವನು ಓದಮ್ಯಾಕೆ ಕ್ಷಣ ಬಿಳ್ಕೊಂಡು ನೀವು ಒರಡಿ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ
ಅಲ್ಲಿಂದ ನೇರ-ಪ್ರಾಕಾರಕ್ಕೆ, ಅಲ್ಲಿ ಮಲ್ಲಪ್ಪ ಕಾದಿರತಾನೆ. ಆಚೆ ಕಡೆ ನಾ ಸಿದ್ದವಾಗಿರ
ತೀನಿ, ನೆಪ್ಪಿರಲಿ. ರಾತ್ರೆ ಅನ್ನೆರಡಕ್ಕೆ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ.”