ಪುಟ:ಸ್ವಾಮಿ ಅಪರಂಪಾರ.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರ೦ಪಾರ ೧೭೭

 ರಪ್ ರಪ್ ಸದ್ದು ನಿಂತಿತು. ಮರಳಿ ಬಂದ ಕಡೆಗೇ ಆತ ತಿರುಗಿರಬಹುದು. ತಾನಿನ್ನು ತಡಮಾಡಬಾರದು.
 ಅಪರಂಪಾರ ಜರ್ರೆಂದು ಬಾಗಿಲನ್ನು ತಳ್ಳಿದ. ಸಪ್ಪಳ ಕರ್ಣಕಠೋರವಾಗಿತ್ತು, ಹೊರಳಿ ನೋಡದೆ ಆತ ಧಾವಿಸಿದ-ಎಡಕ್ಕೆ, ಮತ್ತೆ ಎಡಕ್ಕೆ,
 "ನಿಲ್ಲು ! ನಿಲ್ಲು !
 " ಶಿಳ್ಳು  ಪುನಃ.
 ಶಿಳ್ಳಿಗೆ ಪ್ರತ್ಯುತ್ತರವಾಗಿ ಮತ್ತೊಂದು ಶಿಳ್ಳು ಕೇಳಿಸಿತು, ದೂರದಿಂದ. 
 ಘಂಟೆ ಬಾರಿಸಿತು-ಅಪಾಯದ ಘಂಟೆ.
 “ನಿಲ್ಲು! ನಿಲ್ಲು !" 
 ಧಡ್ ಧಡ್ ಧಡ್.
 ಓಡುವ ಸದ್ದು.
 ಎಚ್ಚೆತ್ತ ಕೈದಿಯೊಬ್ಬ ಕೂಗಿಕೊಂಡ :
 “ಭಲೆ ಬಹಾದ್ದುರ್ !"
 ಕತ್ತಲಲ್ಲೂ ಅಪರಂಪಾರಸ್ವಾಮಿ ನೇರವಾಗಿ ಓಡಿದ್ದ. ಪ್ರಾಕಾರದ ಬುಡದಲ್ಲಿ ಮಲ್ಲಪ್ಪ ನಿಂತಿದ್ದ: 
 "ಹತ್ತಿ ಸ್ವಾಮಿಯೋರು, ಹಗ್ಗ ಇಳಿಬಿಟ್ಟಿದೆ!"
 ಬಲವಾದ ಹಗ್ಗ, ಮಲ್ಲಪ್ಪ ಅದನ್ನು ಅಪರಂಪಾರನ ಕೈಗಿತ್ತ.
 "ಏರಿಹೋಗಿ !"
  ಹತ್ತಿರದಿಂದಲೇ ಕೇಳಿಸಿತು :
  “ಗುಂಡು ಹಾರಿಸ್ತೀನಿ, ನಿಲ್ಲು !" 
  ಮಲ್ಲಪ್ಪ, ಎವೆಮುಚ್ಚಿ ತೆರೆಯುವುದರೊಳಗೆ ಅಪರಂಪಾರನಿಗೆ ಅಡ್ಡವಾಗಿ ನಿಂತಿದ್ದ.
  ಬಂದೂಕನ್ನೆತ್ತಿ, ಧ್ವನಿಬಂದ ಕಡೆಗೆ ಆತ ಗುರಿಯಿಟ್ಟ.
  ಇನ್ನು ಹಾರಿಸಬೇಕು.
  "ಢಂ!"
  ಅದು ಬಂದುದು ಎದುರುಗಡೆಯಿಂದ. ಬಡೆದುದು ಮಲ್ಲಪ್ಪನ ಎದೆಗೆ.
  "ಹಾ!"
  "ಏನಾಯ್ತು ಮಲ್ಲಪ್ಪಣ್ಣ ? ಮಲ್ಲಪ್ಪಣ್ಣ-"
  ಅಪರಂಪಾರ ಹಗ್ಗವನ್ನು ಬಿಟ್ಟು ಕೆಳಗುರುಳಿದ ಮಲ್ಲಪ್ಪನನ್ನು ಹಿಡಿದುಕೊಂಡ.
  "ಆಯ್ ! ಸ್ವಾಮಿಯೋರೆ. .ನಾ...ಹೋಗತೇನಿ...ಶಿವ ಶಿವ-"
  'ಮಲ್ಲಪ್ಪಣ್ಣ ! ಮಲ್ಲಪ್ಪಣ್ಣ!"
   ಅಪರಂಪಾರ ಧ್ವನಿ ತೆಗೆದು ಅತ್ತ :
   “ಅಣ್ಣ ! ಏನಾಗ್ಹೋಯ್ತಪೋ !"
   ಕಾವಲುಗಾರ ಬಂದ :ಕಂದೀಲುಗಳೊಡನೆ ಸಿಪಾಯಿಗಳು ಬಂದು ತಲಪಿದರು.
   "ಹಿಡಿಯಿರಿ ಅವನನ್ನು!"

12