ಪುಟ:ಸ್ವಾಮಿ ಅಪರಂಪಾರ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ అ55oవారి ౧లశి ಕೊನೆಯ ಯೋಚನೆಯೇ ಸರಿ-ಎಂದುಕೊಂಡ ಶಂಕರಪ್ಪ, ಗೂಢಚಾರರ ಸುಳಿವು ಹತ್ತದಂತೆ ತನ್ನ ಸಂಸಾರವನ್ನು ಮಡಕೇರಿಯಿಂದ ಕರೆದು ತರುವುದಕ್ಕೆ ಮುನ್ನ, ಹೊಸಳ್ಳಿಗೆ ಶಂಕರಪ್ಪ ಹೋಗುವುದು ಅಗತ್ಯವಿತು, ಮಲ್ಲಪ್ಪನ ಸಾವನ್ನು ಕುರಿತು ಅಕ್ಕವ್ವನಿಗೆ ಹೇಳಬೇಕಲ್ಲ? 'ನನ್ನ ಆಸೆ ಇನ್ನು ಬಿಟ್ಟುಬಿಡು' ಎಂದು ತನ್ನ ಹೆಂಡತಿಗಾದರೂ ಹೇಳಬಹುದು: 'ನಿನ್ನ ಗಂಡ ತೀರಿಹೋದ' ಎಂದು ಇನ್ನೊಬ್ಬನ ಹೆಂಡತಿಗೆ ಹೇಳುವುದಕ್ಕಾಗದು. ಅಕ್ಕವ್ವನನ್ನು ಕಾಣುವ ಸನ್ನಿವೇಶವನ್ನು ಚಿತ್ರಿಸಿಕೊಂಡಾಗ లేల్ల ఆచేనిగే భయువాగుక్మిలేు. ಆದರೆ ವಾಸ್ತವದಲ್ಲಿ ಅದು ಅಷ್ಟೊಂದು ಭಯಾನಕವಾಗಿರಲಿಲ್ಲ, ಮಿಾಸೆ ಬೋಳಿಸಿ ಕೊಂಡು ವರ್ತಕನಂತೆ ವೇಷ ಮರೆಸಿಕೊಂಡು ಶಂಕರಪ್ಪ ಕೊಡಗನ್ನು ಪ್ರವೇಶಿಸಿದ. ಹೊಸಳ್ಳಿ ಯನ್ನು ತಲಪಿ. ಅಕ್ಕವ್ವನನ್ನು ಕಂಡ. "ಅಕಾ, ನಾನು ಯಾವ ಪಾಪ ಮಾಡಿದೇನೋ ಏನೋ ? ಒಬ್ಬನೇ ಬಂದಿದೀನಿ." ಅಕ್ಕವ್ವ ತನ್ನ ಹಣೆಯೊರೆಸಿಕೊಂಡಳು. ಕರಿಮಣಿಸೂತ್ರವನ್ನು ಕಿತ್ತಳು. ಅಪರಂಪಾರ ಸ್ವಾಮಿಗೆ ವಿಧಿಸಲಾದ ಶಿಕ್ಷೆಯ ಬಗೆಗೆ ಹೇಳಿದಾಗ ಮಾತ್ರ ಅವಳ ಅಳಲಿನ ಕಟ್ಟೆಯೊಡೆ (మిలేు. ಚೇತರಿಸಿಕೊಂಡ ಮೇಲೆ, ಮಲ್ಲಪ್ಪಗೌಡನ ಕೊನೆಯ ದಿನಗಳ ಸಾಹಸದ ಕಥೆಯನ್ನು ತನ್ನ ಮುಂದಿನ ದಾರಿಯ ಬುತ್ತಿಯಾಗಿ ಆಕೆ ಸ್ವೀಕರಿಸಿದಳು. ...ಶಂಕರಪ್ಪ ಮಡಕೇರಿಗೆ ಬಂದು ಹೋದ ಬಳಿಕ ಅವನ ಹೆಂಡತಿ ಬಹಿರಂಗವಾಗಿ ನಾಲ್ಕು ಜನರೆದುರು ಅಂದಳು : - “ನಮಗಿನ್ನು ಯಾರೂ ದಿಕ್ಕಿಲ್ಲ, ಮಕ್ಕಳ ಜತೆ ಮೈಸೂರಿಗೆ ಹೋಗಿ ಏನಾದರೂ ಚಾಕರಿ ಮಾಡಿಕೊಂಡು ಬದುಕಿರತೇನೆ." ఒందాని దినో యొ85ుబండిగాళు చేుಸೂರಿನ ಕಡೆ ಹೊರಟಾಗ ಶಂಕರಪ್ಪನ ಸಂಸಾರವೂ ಮಡಕೇರಿಯನ್ನು ತ್ಯಜಿಸಿತು. - ಅವರಿಗಾಗಿ ಶಂಕರಪ್ಪ ಮೈಸೂರಲ್ಲಿ ಕಾದಿದ್ದ, ಆತ ಅವರನ್ನುಬೆಂಗಳೂರಿಗೆ ಕರೆದೊಯ್ದ. ಅಲ್ಲಿ ಊರಿನ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಅವರು ವಾಸಿಸತೊಡ ಗಿದರು. ಶಂಕರಪ್ಪ ಕಡಲೆಪುರಿ ಚಿಲ್ಲರೆ ವಾಪಾರವನ್ನು ಕೈಗೊಂಡ. ದೊಡ್ಡವರಾಗಿದ್ದ ಶಂಕರಪ್ಪನ ಮಕ್ಕಳಿಬ್ಬರೂ, ತಾವು ಶಿವಮೊಗ್ಗಿ ಕಡೆಯವರೆಂದು ಹೇಳಿಕೊಂಡು, ಮಂಡಿ ಪೇಟೆಯಲ್ಲಿ ವರ್ತಕರ ಬಳಿ ಊಳಿಗಕ್ಕೆ ನಿಂತರು. 米 米 米 ದೇವಮಾಜಿ ಅಪ್ಪಂಗಳದಲ್ಲಿ ತಾಯಿಯಾದಳು. ಹುಟ್ಟಿದು ಹೆಣ್ಣು. “ಹಾಲೇರಿ ವಂಶದಲ್ಲಿ ಹೆಣ್ಣೆ ಜಾಸ್ತಿ, ನಾ ಅರಸನಾಗಿದ್ದಿದ್ದರೆ ನನ್ನ ಮಗಳಿಗೆ ಒಬ್ಬ ಕೊಡವ ಗಂಡನ್ನ ತರತಿದ್ದೆ, ಅರಸಲ್ಲವಲ್ಲ!" ಎಂದು ಚನ್ನಬಸಪ್ಪ ಮೂದಲಿಸಿದ. ಮುಂದಿನ ವರ್ಷವೆ ದೇವಮಾಜಿ ಒಂದು ಗಂಡನ್ನು ಹೆತ್ತಳು. ಮಗು ಬಡವಾಗಿತು. "ಅಯ್ಯೋ! ಅರಸಾಗುವ ಲಕ್ಷಣ ಕಾಣಿಸತದಾ ಇದರ ಮುಖದಲ್ಲಿ ?” ಎಂದು జన్నెబస్చ్చె రేటు క్తి యూడిదా. - - ತನ್ನ ದುಃಖ ತೋಡಿಕೊಳ್ಳಲು ದೇವಮಾಜಿಗಿದುದೊಂದೇ ಆಸರೆ–ರಾಜಮಾಜಿ.