ಪುಟ:ಸ್ವಾಮಿ ಅಪರಂಪಾರ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ

ಮಡಕೇರಿಯ ಅರಮನೆಯಿಂದ ತಂದಿದ್ದ ಅಮೂಲ್ಯ ಆಭರಣಗಳ, ಅನರ್ಘ ರತ್ನ ವಜ್ರ ವೈಡೂರಗಳ, ಸಂಪತ್ತೊಂದು ಚಿಕವೀರರಾಜನ ವಶವಿತು. ಆ ಸಂದೂಕಕ್ಕೆ ರಾಣಿ ಗೌರಮ್ಮನೇ ಒಡತಿ. ಅರಸ ಅಂತರ್ಮುಖಿಯಾಗಿ ದಿನಕಳೆದರೆ, ಗೌರಮ್ಮ-ತನ್ನನ್ನು ಅನಾರೋಗ್ಯ ಪದೇಪದೇ ಪೀಡಿಸುತ್ತಿದ್ದರೂ-ಅರಮನೆಯ ಯಾಜಮಾನ್ಯ ವಹಿಸಿ ಎಲ್ಲ ವನ್ನೂ ಸರಿತೂಗಿಸಿಕೊಂಡು ಹೋಗುತ್ತಿದ್ದಳು. ರಾಣಿಯ ವಿಷಯದಲ್ಲಿ ಚಿಕವೀರರಾಜನಿ ಗಿದ್ದ ಪ್ರೇಮವಿಶ್ವಾಸ ಎಂದೂ ಕುಗ್ಗಲಿಲ್ಲ.

ಅವನ ವಿಶೇಷ ಒಲವಿಗೆ ಪಾತ್ರಳಾಗಿದ್ದವಳು ರಾಜಕುಮಾರಿ. ಅವಳೀಗ ಯುವತಿ. ತಾನಲ್ಲದೆ ಹೋದರೆ ಇವಳಾದರೂ ಕೊಡಗಿನ ಸಿಂಹಾಸನವೇರಬೇಕು ಎಂಬ ಬಯಕೆ ಚಿಕವೀರರಾಜನಿಗೆ ಇಂಗ್ಲೆಂಡಿನಲ್ಲಿ ವಿಕ್ಟೋರಿಯಾ ರಾಣಿ ಆಳತೊಡಗಿದ್ದಳು. ಸ್ತ್ರೀಯೊಬ್ಬಳು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿನಿಯಾಗಬಲ್ಲಳಾದರೆ. ವೀರ ಸಂತಾನವಾದ ತನ್ನ ಪತ್ರಿ ಕೊಡಗನ್ನು ಆಳಬಾರದೆ?
ರಾಜಕುಮಾರಿಯನ್ನು ಎಲ್ಲರೂ ಕಿರಿಯ ರಾಣಿ ಎಂದೇ ಕರೆಯುತ್ತಿದ್ದರು. 

"ಇವಳು ಕಿರಿಯ ಗೌರಮ್ಮ, ಎನ್ನುತ್ತಿದ್ದ ಅರಸ, ರಾಣಿಯೊಡನೆ ಅಪರೂಪದ ಸರಸ ಸಲಾಪದಲ್ಲಿ ತಾನು ಮಗ್ನನಾದಾಗ.

ಕಿರಿಯ ಗೌರಮ್ಮನಿಗೆ ಶಿಕ್ಷಣ ಕೊಡಿಸುವುದಕ್ಕಾಗಿ ಆಂಗ್ಲ ಮಹಿಳೆಯೊಬ್ಬಳನ್ನು ಚಿಕವೀರರಾಜ ನೇಮಿಸಿದ. ಬದಲಾಗುತ್ತಿದ್ದ ಲೋಕದಲ್ಲಿ ಪಾಶ್ಚಾತ್ಯರ ವಿಚಾರಗಳನ್ನೂ ಸಾಧನೆಗಳನ್ನೂ ತಿಳಿದಿರುವುದು ಅಗತ್ಯವೆಂದು ಅವನಿಗೆ ಅನಿಸಿತ್ತು.
ಈಸ್ಟ್ ಇಂಡಿಯಾ ಕಂಪೆನಿಯ ಪ್ರಮುಖ ಅಧಿಕಾರಿಗಳು ಹಲವರು ಚಿಕವೀರರಾಜನೆಡೆಗೆ ಆಕರ್ಷಿತರಾದರು.ಹತು ವರ್ಷಗಳಿಗೆ ಹಿಂದೆ ತಾವು ಪದಚುತಗೊಳಿಸಿದ ಅರಸ ಈತಎಂಬುದನ್ನು ಮರೆತು, ಲಾರ್ಡ್ ಎಲೆನ್ಬರೋ, ಗವರ್ನರ್ ಜನರಲನ ಏಜೆಂಟನಾದ  ಲೆಫ್ಫಿನೆ೦ಟ್ ಕನ್ರಲ್ ಕಾಪ್ರೆಂಟರ್,ಅವನ ಆನ೦ತರ ఆ ಸ್ಥಾನಕ್ಕೆ బంದ ಮೆಕ್ ಗ್ರಿಗೊರ್–ಇವರೆಲ್ಲ ಚಿಕವೀರರಾಜನ ಮಿತ್ರರಾದರು.
ಅರಸನ ದೊಡ್ಡಪ್ಪ ದೊಡ್ಡ ವೀರರಾಜೇಂದ್ರ ಅಸ್ವಸ್ಥನಾಗಿದ್ದಾಗ ಮದರಾಸಿನಿಂದ ಬಂದು ಆತನಿಗೆ ಚಿಕಿತ್ಸೆ ಮಾಡಿದ್ದ ಆಂಗ್ಲ ವೈದ್ಯನೊಬ್ಬನಿದ್ದ-ಡಾಕ್ಟರ್ ಮೇಗ್ಲಿಂಗ್. ಕೊಡಗಿನ ಜನ ಅವನನ್ನು ಆತ್ಮೀಯತೆಯಿಂದ ಮೇಗ್ಲಿಂಗ ಎಂದು ಕರೆದದುಂಟು. ಚಿಕವೀರರಾಜನ ರಾಜ್ಯಭಾರದ ಮೊದಲ ವರ್ಷಗಳಲ್ಲಿ ಮೇಗ್ಲಿಂಗ್ ಒಂದೆರಡು ಸಾರಿ ಮಡಕೇರಿಗೆ ಬಂದಿದ್ದ. ಮುಂದೆ ಅವನಿಗೆ ಕಲಕತ್ತೆಗೆ ವರ್ಗವಾಯಿತು. ವಯಸಾದ ಮೇಲೆ, ಉದ್ಯೋಗದಿಂದ ನಿವೃತ್ತನಾಗಿ ತಾಯಾಡಿಗೆ ಮರಳಲು ಆತ ತೀರ್ಮಾನಿಸಿದ. ಹಾಗೆ ಹೊರಡುವುದಕ್ಕೆ ಮುನ್ನ ಚಿಕವೀರರಾಜೇಂದ್ರನನ್ನು ಕಂಡು ಹೋಗಲೆಂದು ಅವನು ಕಾಶಿಗೆ ಬ೦ದ. ಆರಸನೆಂದ :
"ಬನ್ನಿ ಮೇಘಲಿಂಗರೇ, ಕುಶಾಲು ತೋಪುಗಳನ್ನು ಹಾರಿಸಿ ವೈಭವದ ಸ್ವಾಗತ ನೀಡಲು ಈಗ ನಾನು ಅಶಕ್ತ, ಇದು ಬಡವನ ಆತಿಥ್ಯ, ಸ್ವೀಕರಿಸಬೇಕು."
ಚಿಕವೀರರಾಜನನ್ನೂ ಅವನ ಸಂಸಾರವನ್ನೂ ಆಗಿನ ಇರುವಿಕೆಯಲ್ಲಿ ಕಂಡು ಮೇಗ್ ಲಿಂಗನ ಹೃದಯ ತುಡಿಯಿತು: