ಪುಟ:ಸ್ವಾಮಿ ಅಪರಂಪಾರ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ "ನೀನು ಅನ್ನಿ."

ಚಿಕವೀರರಾಜನಿಗೆ ದುಃಖ ಒತ್ತರಿಸಿ ಬಂತು. ಗೊಗ್ಗರ ಧ್ವನಿಯಲ್ಲಿ ಅವನೆಂದ:
"ಹ್ಮ ಚಿನ್ನ."

"ಓಂಕಾರೇಶ್ವರನಿಗೆ ನನ್ನ ಹೆಸರಿಲೆ ವರ್ಷ ವರ್ಷ ಸೇವೆ ಆಗೂ ಹಾಗೆ ಮಾಡತೀರಾ?”

ಅವಳೀಗ ತನ್ನ ರಾಜ್ಯದ ರಾಜಧಾನಿಯನ್ನು ತಲಪಿದ್ದಳು.

"ಮಾಡತೀನಿ ಚಿನ್ನ."

"ಇಷ್ಟೆ, ಬೇರೆ ಯಾವ ಆಸೇನೂ ನನಗಿಲ್ಲ."

ಧ್ವನಿ ಇಂಗಿತು. ಗಂಟಲಲ್ಲಿ ಗೊರಗೊರ ಸಪ್ಪಳವಾಯಿತು.

ಕಾತರನಾದ ಅರಸ ಏರಿದ ಧ್ವನಿಯಲ್ಲಿ ಅಂದ:

"ಮಗೂ, ಗಂಗೋದಕತಾ !"

ರಾಜಕುಮಾರಿ ಕೊಠಡಿಯಿಂದ ಹೊರಕ್ಕೆ ಧಾವಿಸಿ ಗಂಗೆಯ ನೀರಿನೊಡನೆ ಬಂದಳು.

ಗವಿಯ ಆಳದಿಂದ ಗೌರಮ್ಮನ ಧ್ವನಿ ಕೇಳಿಸಿತು:

"ಆ-ಪ್ಪ-ಣೆ-ಕೂ-ಡಿ..."

ಬ೦ದು ಗುಟುಕು ನೀರು.

"ಮ-ಹಾ-ದೇ-ವ ಮ-ಹಾ-ದೇ-ವ."

ಗೌರಮ್ಮನ ಕೊನೆಯುಸಿರು ಆಕೆಯ ಶರೀರವನ್ನು ಬಿಟ್ಟ ಹೂಯಿತು.

ಅರಸನ ತೊಡೆಯ ಮೇಲಿದ್ದ ಅವಳ ತಲೆ ಒಂದು ಮಗುಲಿಗೆ ಹೊರಳಿತು.

"ಅಮಾ!" ಎಂದು ಚೀರುತ್ತ ರಾಜಕುಮಾರಿ ತನ್ನ ತಾಯಿಯ ದೇಹದ ಮೇಲೆ ಬಿದ್ದಳು. ಚಿಕವೀರರಾಜ ಗಾಳಿಗೆ ಸಿಲುಕಿದ ತರಗೆಲೆಯಾದ.

ಮೃತು ತನಗೆ ಕೈಕೊಟ್ಟದನ್ನು ಕಣಾರೆ ಕಾಣಲು ವೈದ್ಯ ಒಳ ಬಂದ.


ಕೊಡಗಿನಿಂದ ವರ್ಷ ವರ್ಷವೂ ಯಾತಾರ್ಥಿಗಳಾಗಿ ಯಾರಾದರೂ ಕಾಶಿಗೆ ಬರುತ್ತಿ ದ್ದರು. ಬಂದವರು ಚಿಕವೀರರಾಜನ ಮನೆಯಲ್ಲೆ ಬಿಡಾರ ಹೂಡುತ್ತಿದ್ದರು.

ಈ ಸಲ ತಂಡ ಬಂದಾಗ, ರಾಣಿ ಗೌರಮ್ಮನ ಹೆಸರಲ್ಲಿ ವರ್ಷಂಪ್ರತಿ ಓಂಕಾರೇಶ್ವರನಿಗೆ ಸೇವೆ ನೆಡೆಸಲು ಬೇಕಾಗುವಷ್ಟು ಹೊನ್ನನ್ನು ಮಡಕೇರಿಯ ದೇವಾಲಯಕ್ಕೆ ಚಿಕವೀರರಾಜ ಕಳುಹಿಸಿಕೊಟ್ಟ.

ಅದು ಸಾವಿರದ ಎಂಟುನೂರ ಐವತ್ರನೆಯ ವರ್ಷ.

ಮಕ್ಕಳ ವಿದ್ಯಾಭ್ಯಾಸಕ್ಕೆ ಸ೦ಬ೦ಧಿಸಿ ಏಪ್ರಟು ಮಾಡುವುದಕ್ಕೋಸ್ಕರ ಇಂಗ್ಲೆಂಡಿಗೆ ಹೋಗಬಯಸುವುದಾಗಿಯೂ ಇದಕ್ಕೆಅನುಮತಿ ನೀಡಬೇಕೆಂದೂ ಚಿಕವೀರರಾಜ ಗವರ್ನರ್ ಜನರಲನಿಗೆ ಮನವಿ ಸಲ್ಲಿಸಿದ.

ಕಂಪೆನಿ ಸರಕಾರ ಒಪ್ಪಿಗೆ ಕೊಡಲು ಎರಡು ವರ್ಷ ಹಿಡಿಯಿತು.


ಹಿಂದೂಸ್ಥಾನದಿಂದ ಹೊರಟ ಹಾಯಿ ಹಡಗು ಆರು ತಿಂಗಳ ದೀರ್ಘ ಪ್ರವಾಸದ ಬಳಿಕ ಸಾವಿರದ ಎಂಟುನೂರ ಐವತ್ತೆರಡರ ವಸಂತ ಮಾಸದಲ್ಲಿ ಇಂಗ್ಲೆಂಡನ್ನು ತಲಪಿ