ಪುಟ:ಸ್ವಾಮಿ ಅಪರಂಪಾರ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಅಪರ೦ಪಾರ ○ F○ ಒಂದು, ಲಾರ್ಡ್ ಎಲೆನ್ಬರೋ ೧೮೪೧ರಲ್ಲಿ ಹಿಂದೂಸ್ಥಾನದಲ್ಲಿದ್ದಾಗ ಚಿಕವೀರರಾಜ ನಿಗೆ ಬರೆದುದು : "...ತಮ್ಮ ವೈಯಕ್ತಿಕ ಪರಿಚಯ ಲಾಭದ ಅದೃಷ್ಟವಿದ್ದ ನನ್ನ ದೇಶಬಾಂಧವರೆಲ್ಲ ತಮ್ಮ ಗುಣಗಳನ್ನು ಕುರಿತು, ಕಾಶಿಯ ವಾಸ್ತವ್ಯದಲ್ಲಿ ತಾವು ನಡೆದುಕೊಂಡಿರುವ ರೀತಿ ಯನ್ನು ಕುರಿತು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯ ಸಹಾನುಭೂತಿಯ ನನ್ನ ಭಾವನೆಗಳನ್ನು ಬಹಳವಾಗಿ ಬಲಪಡಿಸಿದೆ. ತಮಗೆ ತೃಪ್ತಿಕರವೂ ಘನತೆವೆತ್ರ ತಮ್ಮ ವಂಶಕ್ಕೆ ಗೌರವೋಚಿತವೂ ಆದ ಪಾಯೋಗಿಕವಾದ ಏರ್ಪಾಟೊಂದನ್ನು ಮಾಡುವುದು ಸಾಧ್ಯವಾಗಬೇಕೆಂಬುದು ನನ್ನ ತೀವ್ರ ಬಯಕೆಯಾಗಿದೆ." : ಚಿಕವೀರರಾಜನಿಗೆ ೧೮೪೮ರಲ್ಲಿ ಕಾರ್ಪೆಂಟರ್ ಬರೆದುದು: "ಕೊಡಗಿನ ಶ್ರೀಮನ್ಮಹಾರಾಜರಿಗೆ ವಿದಾಯ ಹೇಳುವ ಈ ಸಂದರ್ಭದಲ್ಲಿ ನನ್ನಲ್ಲಿ ಅವರು ಉಂಟುಮಾಡಿರುವ ಮಧುರ ಭಾವನೆಗಳನ್ನು ಕುರಿತು ನಾನೊಂದು ಪ್ರಮಾಣ ಪತ್ರವನ್ನು ಕೊಡದಿರಲಾರೆ. ನಮ್ಮ ಪರಿಚಯದ ಹದಿನಾಲ್ಕು ವರ್ಷಗಳ ದೀರ್ಘಾವಧಿ ಯಲ್ಲಿ ಅವರು ತೋರಿದ ಶಾಂತ, ಸ್ನೇಹಪರ ಹಾಗೂ ಅತುತ್ಕೃಷ್ಟ ನಡತೆಯ ಬಗೆಗೆ ಇಲ್ಲಿ ಬರೆಯಲು ನನಗೆ ಬಹಳ ಸಂತೋಷವೆನಿಸುತ್ತಿದೆ." ಮೆಕ್ ಗ್ರಿಗರ್'ನಿಂದ, ೧೮೪೯ರಲ್ಲಿ: "ತಾವು ಶಾಂತ ಹಾಗೂ ಸರಳ ನಡತೆಯಿಂದ, ಎಲಾ ಸಂದರ್ಭಗಳಲ್ಲವೂ ಸರಿಯಾದ ವರ್ತನೆಯಿಂದ, ನನ್ನ ಸದಭಿಪ್ರಾಯವನ್ನೂ ಗೌರವವನ್ನೂ ಸಂಪೂರ್ಣವಾಗಿ ಸಂಪಾದಿಸಿ ద్విరి." ಹಾಗೆ ತಮ್ಮವರಿಂದಲೇ ಬಣ್ಣಿಸಲ್ಪಟ್ಟ ವ್ಯಕ್ತಿಯನ್ನು ಆಂಗ್ಲ ಪ್ರಮುಖರು ಈಗ ಕಣಾರೆ ಕಂಡರು : ಸಮಾಧಾನಪಟ್ಟರು. పాలగాలింగా? ఆచారిండారాు : "ನಿಮ್ಮ ಮಿತ್ರರಿಗೆ ಅನಾಯವಾಗಿದೆ. ಒಪ್ಪತೇವೆ. ಆದರೆ ಈಸ್ಟ್ ಇಂಡಿಯಾ ಕಂಪೆನಿಯ ನಿರ್ಧಾರಗಳನ್ನು ಬದಲಿಸುವುದು ಸಾಧ್ಯವೆ? ರಾಜಕೀಯವಾಗಿ ಪ್ರಯತ್ನ ಗಳನ್ನು ಮಾಡುವುದಕ್ಕೆ ಮುಂಚೆ ಬೇರೆ ದಾರಿಗಳೇನಿವೆಯೋ ನೋಡಬೇಕು." ಅವರ ಮುಂದೆ ಒಂದು ದೃಷಾಂತವಿತು, ದುಲೀಪ್ ಸಿಂಗನದು. ಪಂಜಾಬಿನ ಸಿಂಹ ರಣಜಿತ್ ಸಿಂಗನನ್ನು ಇಂಗ್ಲಿಷರು ಸೋಲಿಸಿದಾಗ, ಪಟ್ಟಕ್ಕೆ ಹಕ್ಕುದಾರನಾದ ಅವನ ಪತ್ರ ಎಳೆಯ ಮಗು. ಆತ ಒಂಬತು ವರ್ಷದವನಾದಾಗ ತಾಯಿಯಿಂದ ಅವನನ್ನು ಬೇರ್ಪಡಿಸಿ ಇಂಗ್ಲಿಷರು ತಮ್ಮ ದೇಶಕ್ಕೆ ಕರೆದೊಯ್ದರು. ವಿದ್ಯಾಭಾಸ ಕೊಡಿಸಿದರು. ಆತ ಕ್ರಿಸ್ತ ಮತಾವಲಂಬಿಯಾದ, ಎಲ್ಲರ ಪ್ರೀತಾದರಗಳಿಗೆ ಪಾತ್ರನಾಗಿ ಬೆಳೆದ. ಅವರೆಂದರು : - "ಕೊಡಗಿನ ರಾಜ ತಮ್ಮ ಮಗಳನ್ನು ಚಕ್ರವರ್ತಿನಿಯವರ ರಕ್ಷಣೆಗೆ ಒಪ್ಪಿಸಲಿ. ದುಲೀಪ್ಸಿಂಗ್ ನಾಳೆ ಪಂಜಾಬಿನ ಅರಸನಾಗುವುದು ಹೇಗೆ ಸಾಧ್ಯವೋ ಹಾಗೆಯೇ ಆ ರಾಜಕುಮಾರಿ ಕೊಡಗಿನ ರಾಣಿಯಾಗುವುದೂ ಸಾಧ್ಯ." ಸ್ವತಃ ಮೇಗ್ಲಿಂಗನೇ ಈ ಯೋಚನೆಯನ್ನು ಮಾಡಿರಲಿಲ್ಲ ಎಂದಲ್ಲ, ಆದರೆ ಅಪ್ರಿಯ