ಪುಟ:ಸ್ವಾಮಿ ಅಪರಂಪಾರ.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೬ ಸಾವಿು ಅಪರಂಪಾರ ಆತ ನಂಬಿರುವ ಹಕ್ಕನ್ನು ಪಡೆಯದಂತೆ ಅಡ್ಡಿ ಮಾಡುವುದಕ್ಕೆ ಅನುಮೋದನೆ ಕೊಡುತ್ತೇನೆ" -ಎಂದು ಸಾರುವಿರಾ?

 "ಒಬ್ಬೊಬ್ಬರಾಗಿ ನೀವು ಧಿಕ್ಕರಿಸುವಂಥದನ್ನು ಸಾಂಘಿಕವಾಗಿ ಅನುಮೋದಿಸುವಿರಾ?                                "ವಿಸ್ತಾರವಾದ ಶಕ್ತಿಯುತವಾದ ಸಾಮ್ರಾಜ್ಯದ ಒಡೆಯರೆಂದಲ್ಲ. 'ನೀನು ನಿನ್ನ ಬಗ್ಗೆ ಇತರರಿಂದ ಯಾವ ವರ್ತನೆಯನ್ನು ಅಪೇಕ್ಷಿಸುತ್ತೀಯೋ ಅದೇ ವರ್ತನೆಯನ್ನು ಇತರರ ವಿಷಯದಲ್ಲಿ ತೋರು' ಎಂಬ ಕ್ರಿಸ್ತೀಯ ಭಾವನೆಯಿಂದ, ನನ್ನ ಪರಿಸ್ಥಿತಿಯನ್ನು ಗಮನಿಸ ಬೇಕೆಂದು ಕೇಳುತ್ತಿದ್ದೇನೆ."
ಕಂಪೆನಿಯ ಸಂಚಾಲಕರು 'ನಾವು ಕಿವುಡರು' ಎಂದರು.                          ನಾಯಸ್ಥಾನ ಪ್ರಸಂಗವನ್ನು ಗಮನಿಸಿ 'ವ್ಯವಹರಣೆ ಮುಗಿಯುವ ತನಕ ಫ಼ಿರ್ಯಾದಿಯು ಇಲ್ಲಿಯೇ ಇರಲಿ' ಎಂದಿತು.
ಕಂಪೆನಿ, 'ವಿಶ್ರಾಂತಿ ವೇತನ ಮಾತ್ರ ನಾಸ್ತಿ' ಎಂದು ಸ್ಪಷ್ಟಪಡಿಸಿತು.                        ವ್ಯವಹರಣೆ ಮುಗಿಯುತ್ತ ಬಂದಾಗ ಚಿಕವೀರರಾಜ ವಿಕ್ಟೋರಿಯಾ ರಾಣಿಗೇ ಒಂದು ಮನವಿಯನ್ನು ಸಲ್ಲಿಸಿದ.
ಪದಚ್ಯುತನಾಗಿ ಈ ಇಪ್ಪತ್ತನಾಲ್ಕು ವರ್ಷಗಳ ಕಾಲ ತನ್ನನ್ನು ಕೈದಿಯಾಗಿ ಪರಿಗಣಿ ಸಿದ್ದಾಯಿತು. ಇನ್ನಾದರೂ ವೈಯಕ್ತಿಕ ಸ್ವಾತಂತ್ರವನ್ನು ತನಗೆ ಕೊಡಬೇಕು. ಹಿಂದೂ ಸ್ಥಾನಕ್ಕೆ ಮರಳುವಂತೆ ಒತ್ತಾಯಿಸಬಾರದು. ಅಲ್ಲಿಗೆ ಹೋಗುವ ಇರಾದೆ ತನಗಿದೆ. ತನ್ನ ಉಳಿದ ಮಕ್ಕಳೊಡನೆ, ಅವರಿಗೆ ಶಿಕ್ಷಣ ಕೊಡಿಸುವುದಕ್ಕಾಗಿ, ಇಲ್ಲಿಗೆ ತಾನು ಹಿಂತಿರುಗುತ್ತೇನೆ. ಈ ದೇಶ ಹಾಗೂ ಹಿಂದೂಸ್ಥಾನಗಳ ನಡುವೆ ಸಂಚರಿಸುವ ಸ್ವಾತಂತ್ರವನ್ನು ತನಗೆ ನೀಡ ಬೇಕು. ವಿಶ್ರಾಂತಿ ವೇತನದ ಬದಲು ತನ್ನ ಮುಂದಿನ ಪೀಳಿಗೆ ಗೌರವದಿಂದ ಬಾಳಲು ಅನುಕೂಲವಾಗುವಂತೆ ಜಹಗೀರು ದಯಪಾಲಿಸಬೇಕು                                  _ಎಂದು ಆ ಮನವಿಯಲ್ಲಿ ಅವನು ಯಾಚಿಸಿದ.

ಆದರೆ ಆತ ಕೈ ಜೋಡಿಸಿ ನಿಂತ ಆ ಘಳಿಗೆ ಅತ್ಯಂತ ಕ್ರೂರವಾಗಿತ್ತು!

                       ೬೯
ಸಾವಿರದ ಎಂಟುನೂರ ಐವತ್ತೇಳು, ಹಿಂದೂಸ್ಥಾನದ ಪಾಲಿಗೆ ಮುಂದೆಂದೂ ಮರೆಯ ಲಾಗದ ವರ್ಷ.
ರಾಷ್ಟ್ರೀಯ ಚೇತನ ಸಿಡಿದೆದ್ದು, ಪರಕೀಯ ಸುಲಿಗೆಯನ್ನು ತಡೆಗಟ್ಟಲೆತ್ನಿಸಿತು. ಅಲ್ಲಲ್ಲಿ ಅಸಂತೋಷದ ಹೊಗೆಯಾಡುತ್ತಿದ್ದೆಡೆಗಳಲ್ಲಿ ಬೆಂಕಿ ಭುಗಿಲ್ಲೆಂದಿತು. -
ಆಂಗ್ಲರ ಚಾಕರರಾಗಿ ಹಲವು ಹೋರಾಟಗಳನ್ನು ಜಯಿಸಿ ಕೊಟ್ಟಿದ್ದ ದೇಶೀಯ ಸಿಪಾಯರೇ ತಮ್ಮ ಒಡೆಯರ ವಿರುದ್ಧ ದಂಗೆ ಎದ್ದರು. ಆಂಗ್ಲರು ನೀಡಿದ್ದ ಬಂದೂಕು ಗಳು ಅವರಿಗೇ ಇದಿರಾದುವು.
ಏಕ ರಾಷ್ಟ್ರ ಕಲ್ಪನೆಯಿಂದ ಬಂಡಾಯಗಾರರು ಪ್ರೇರಿತರಾಗಿರಲಿಲ್ಲವಾದರೂ, ಅವರ ವರ್ತನೆ ಭಾರತೀಯರ ಸುಪ್ತ ದೇಶಾಭಿಮಾನವನ್ನು ಜಾಗೃತಗೊಳಿಸಿತು. ತಾವು ಅಜೇಯರು, ಜಗಜ್ಜೇತರು-ಎಂದೆಣಿಸಿದ್ದ ಆಂಗ್ಲರು ದಾರಿಕಾಣದಾದರು. -
 ರಾಜರು ಪ್ರಜೆಗಳು, ಹಿಂದೂಗಳು ಮುಸಲ್ಮಾನರು, ಎಲ್ಲರೂ ಒಂದೇ ತಳಹದಿಯ