ಪುಟ:ಸ್ವಾಮಿ ಅಪರಂಪಾರ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೯೭ ಮೇಲೆ ನಿಂತು, ಪರಕೀಯರಿಗೆ ಪ್ರತಿಭಟಿಸಿ ತೋರಿದ ಆ ಘಟನೆ ಅಭೂತಪೂರ್ವವಾಗಿತ್ತು. ಆದರೂ ಆಂಗ್ಲರು ಗೆದ್ದರು! ಮಹಾಪೂರದಲ್ಲಿ ಕೊಚ್ಚಿಹೋಗುತ್ತೇವೆ, ಎಂದಿದ್ದರು ಅವರು. ಆದರೆ ಒಮ್ಮೆಲೆ ಬಿರು ಗಾಳಿ ನಿಂತು, ನೀರಿಳಿದು, ದೋಣಿ ಕಿಲಕಿಲನೆ ನಕ್ಕಿತು.

 ಭಾರತೀಯರಲ್ಲಿ ಏಕೀಕೃತ ನಾಯಕತ್ವವಿರಲಿಲ್ಲ; ಸಮರ ಸಂಯೋಜನೆ ಇರಲಿಲ್ಲ; ಸಂಘಟನಾ ಸಾಮರ್ಥ್ಯವಿರಲಿಲ್ಲ, ಹಲವರು ಹೋರಾಡಿದರು. ಹೋರಾಡಿದವರು ಹುತಾತ್ಮ ರಾದರು. ಅಲ್ಲಿಗಾಯಿತು.
ಇಂಗ್ಲೆಂಡು, ತನ್ನ ಸಾಮಾಜ್ಯದ ಗತಿ ಏನಾಗುವುದೋ ಎಂದು ಗಾಬರಿಗೊಂಡಿತ್ತು.                                   ಗಂಡಾಂತರ ಕಳೆದಾಗ ಅದು ಸಮಾಧಾನದ ನಿಟ್ಟುಸಿರನ್ನು ಬಿಟ್ಟಿತು.
ವಿಕ್ಟೋರಿಯಾ ರಾಣಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಹಿಂದುಸ್ಥಾನದ ಆಡಳಿತಾಧಿ ಕಾರವನ್ನು ತಾನೇ ವಶಪಡಿಸಿಕೊಂಡಳು.
ಸಾವಿರದ ಎಂಟುನೂರ ಐವತ್ತೆಂಟರ ಕೊನೆಯಲ್ಲಿ ಆಕೆಯ ಘೋಷಣೆ ಹೊರಟಿತು; "ಅವರ ಸುಖ ಸಮೃದ್ಧಿಯಲ್ಲಿ ನಮ್ಮ ಬಲವಿರುತ್ತದೆ; ಅವರ ಸಂತೃಪ್ತಿಯಲ್ಲಿ ನಮ್ಮ ಭದ್ರತೆ ಇರುತ್ತದೆ; ಅವರ ಕೃತಜ್ಞತೆಯೇ ನಮಗೆ ದೊರೆಯುವ ಶ್ರೇಷ್ಟ ಪ್ರತಿಫಲ.”

ಉದಾತ್ತ ವಿಚಾರಗಳು! ಆ ಎಲ್ಲ ಅವಸ್ಥಾಂತರಗಳ ನಡುವೆ ಚಿಕವೀರರಾಜನ ಮೊರೆಯನ್ನು ಯಾರು ಕೇಳ ಬೇಕು ? -

 ದಿಲ್ಲೀಶ್ವರ ಬಹಾದ್ದೂರ್ ಷಹನೇ ಆಂಗ್ಲರ ಸೆರೆಯಾಳಾಗಿ ನಿರ್ವಾಸಿತನಾದ ಮೇಲೆ ಕೊಡಗಿನ ಚಿಕವೀರರಾಜ ಯಾವ ಲೆಕ್ಕ?

ಛಾನ್ಸರಿಯ ವ್ಯವಹರಣೆಯಲ್ಲಿ ಅವನು ಗೆಲ್ಲಲಿಲ್ಲ, ಶಸ್ತ್ರಾಸ್ತ್ರಗಳ ಯುದ್ಧದಲ್ಲಿ ಸೋತಿದ್ದ ವನು ಕಾನೂನುಗಳ ಕಾಳಗದಲ್ಲೂ ಪರಾಜಿತನಾದ. ಹಿಂದೂಸ್ಥಾನಕ್ಕೆ ಹೊರಡು-ಎನ್ನಲು ಈಸ್ಟ್ ಇಂಡಿಯಾ ಕಂಪೆನಿ ಈಗಿರಲಿಲ್ಲ. ಆದರೆ, ತನ್ನ ಜೀವಮಾನದಲ್ಲಿ ಎಷ್ಟೋ ಜನರಿಗೆ ಜಹಗೀರುಗಳನ್ನು ಕೊಟ್ಟಿದ್ದ ಕೊಡಗಿನ ದೊರೆಗೆ, ಬ್ರಿಟಿಷ್ ಸಾಮ್ರಾಜ್ಞೆ ಒಂದೇ ಒಂದು ಜಹಗೀರನ್ನೂ ವಯಪಾಲಿಸಲಿಲ್ಲಿ. -

-ಕೊಡಗಿನ ರಾಜಕುಮಾರಿ ವಿಕ್ಟೋರಿಯಾ ಗೌರಮ್ಮ ಆಂಗ್ಲ ಕ್ಯಾಪ್ಟನೊಬ್ಬನನ್ನು ಮದುವೆಯಾದಳು. -

'ಒಳ್ಳೇ ವರನ ನೋಡಿ ಮದುವೆ ಮಾಡಿಸಿ' ಎಂದಿದ್ದಳು ರಾಣಿ ಗೌರಮ್ಮ, ಮರಣ ಶಯ್ಕೆಯಲ್ಲಿ ಮಲಗಿದಾಗ.

ಒಳ್ಳೆಯ ವರ ಹೌದೋ ಅಲ್ಲವೋ. ಗೌರಮ್ಮ ಬದುಕಿದ್ದರೆ ಒಪ್ಪುತ್ತಿದ್ದಳೋ ಇಲ್ಲವೋ. ಚಿಕವೀರರಾಜ ಹೆಚ್ಚಿನ ಯೋಚನೆ ಮಾಡದೆ ಮಾವನಾದ. ಆತ ನೀಡಿದ ಭೋಜನಕೂಟಕ್ಕೆ              'ದೇವಮಾತೆ' ಬಂದಿರಲಿಲ್ಲವಾದರೂ ಲಂಡನ್ ನಗರದ ಪ್ರತಿಷ್ಠಿತರು ಸಹಸ್ರಗಟ್ಟಲೆಯಲ್ಲಿ ఆಗಮಿಸಿದರು.
ತನ್ನಲ್ಲಿ ಇನ್ನೂ ಉಳಿದಿದ್ದ ನವರತ್ನಗಳನ್ನೆಲ್ಲ ಚಿಕವೀರರಾಜ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟ.