ಪುಟ:ಸ್ವಾಮಿ ಅಪರಂಪಾರ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೭ ಸ್ವಾಮಿ ಅಪರಂಪಾರ

 ಇಷ್ಟಾದ ಮೇಲೆ, ಅನಾರೋಗ್ಯ ಬಾಗಿಲು ತಟ್ಟಿ, 'ನನ್ನನ್ನು ಸತ್ಕರಿಸು' ಎಂದಿತು.
 ಮಾತೃಭೂಮಿ ದೂರದಿಂದ ಅವನನ್ನು ಕರೆಯುತ್ತಿತ್ತು.
 ಮಕ್ಕಳಲ್ಲಿ ಹಿರಿಯವನಾದ ಸೋಮಶೇಖರ, "ಅಪಾಜಿ ಅಕ್ಕನನ್ನು ಕರಕೊಂಡು ವಾಪಸು ಬನ್ನಿ" ಎಂದು ಹಲವಾರು ಸಲ ಬರೆದಿದ್ದ.
 ಕಾಶಿಗೆ ಹೋಗಬೇಕು, ತನ್ನ ಮಕ್ಕಳ-ಪರಿವಾರದ ಸುಖ ದುಃಖ ವಿಚಾರಿಸಬೇಕು ಎನಿಸುತ್ತಿತ್ತು అరునిಗೆ.
ಆದರೆ ಆಸ್ವಾಸ್ಥ್ಯ , "నిನ್ನನ್ನು ಬಿಡಲೊಲ್ಲೆ ఎందిತು.
ಮೇಗ್ಲಿಂಗ್ ಪ್ರಖ್ಯಾತ ವೈದ್ಯರ ಜತೆಗೂಡಿ ಚಿಕವೀರರಾಜನನ್ನು ಪರೀಕ್ಷಿಸಿದ. ಹೊತ್ತು ಹೊತ್ತು ಔಷಧಿ ಸೇವನೆ, ಪಥ್ಯ...
 ತನ್ನ ತಂದೆಯೊಂದು ಎಳೆಯ ಮಗು ಎನ್ನುವಂತೆ ಗೌರಮ್ಮ ಆರೈಕೆ ಮಾಡಿದಳು.
 ಯಾವ ಯತ್ನವೂ ಫಲಕಾರಿಯಾಗದೆ. ಕೊನೆಯ ಘಳಿಗೆ ಸಮಿಾಪಿಸಿತು. ಮೇಗ್ ಲಿಂಗ್ ದುಃಖಿತನಾಗಿ, "ತಮ್ಮನ್ನು ಇಲ್ಲಿಗೆ ಕರೆಸಿ ತಪ್ಪು ಮಾಡಿದೆ. ನಾನು ಒಂದೆಣಿಸಿದರೆ ದೈವ ಬೇರೆಯೇ ಬಗೆಯಿತು" ಎಂದ.
 ಇಂಥ ಮಾತು ಆಡಬಾರದು, ಎನ್ನುವಂತೆ ಅರಸ ಕೈಸನ್ನೆ ಮಾಡಿದ.
 ಅಳಿಯ ಕ್ಯಾಪ್ಟನ್, ಒಬ್ಬ ಪಾದ್ರಿಯನ್ನು ಕರೆತಂದ :
 “ಮಾವ, ಸಾಯುವುದಕ್ಕೆ ಮುಂಚೆ ಇದಿಷ್ಟು ಮಾಡಿಸಿಕೋತೀರಾ ?"
 ಚಿಕವೀರರಾಜ ಪಾದ್ರಿಯನ್ನು ದಿಟ್ಟಿಸಿ ನೋಡಿ,ಶಾಂತವಾಗಿ ಅಂದ :      
  "ಕ್ಷಮಿಸಿ,ಒಲ್ಲೆ."
   ಗೌರಮ್ಮನ ಕಡೆ ಹೊರಳಿ ಅರಸ ಅಂದ:                                  "ನಿನ್ನ ನಾ ಚೆನಾಗಿ ನೋಡ್ಕೊಳ್ಳಿಲ್ಲ."

“ಹಾಗನ್ನಬೇಡಿ, ಅಪ್ಪಾಜಿ." "ಸೋಮಶೇಖರನನ್ನು ಕರೆಸಿಕೋ, ಕಂದ." "ಕರೆಸಿಕೊತೀನಿ, ಅಪ್ಪಾಜಿ.

ಕೆಲ ನಿಮಿಷಗಳು ಮೌನವಾಗಿ ಕಳೆದುವು.                           "ಗಂಗೆಯೋದಕ ತಾ..."

ಎಂಟು ವರ್ಷಗಳ ಹಿಂದೆ ಕಾಶಿಯಿಂದ ತಂದಿದ್ದ ಗಂಗಾಜಲ ಆ ಘಳಿಗೆಗಾಗಿ ಕಾದಿತ್ತು. ಪ್ರಯಾಸದಿಂದ ಒಂದು ಗುಟುಕನ್ನು ಸ್ವೀಕರಿಸಿ ಚಿಕವೀರರಾಜ ಕೈಗಳನ್ನು ಮೇಲಕ್ಕೆ ಎತ್ತಲೆತ್ನಿಸಿದ. "ಮಹಾ-ದೇವ...ಮಹಾ–' ಕೈಗಳು ಕಾಸಿದುಬಿದ್ದುವು. ಅರುವತ್ತು ತುಂಬಿದ್ದ ಅರಸ ಚಿರಶಾಂತಿಯಲ್ಲಿ ಮಲಗಿದ... ...ಚಿಕವೀರರಾಜನ ಶವವನ್ನು ಕೆನ್ಸಾಲ್ ಗ್ರೀನ್ ಸ್ಮಶಾನದಲ್ಲಿ ದಫನ್ ಮಾಡಿದರು.

                  * * *
 ಮಾರನೆಯ ವರ್ಷ ಸೋಮಶೇಖರ ರಾಜೇಂದ್ರ,ಒಡೆಯ ಕಾಶಿಯಿಂದ ಲಂಡನ್ನಿಗೆ

ಬಂದು ತಲಪಿದ.