ಪುಟ:ಸ್ವಾಮಿ ಅಪರಂಪಾರ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಆಪರಂಪಾರ

  ಆ ಮನುಷ್ಯ ಮೂಟೆಯನ್ನು ಕೆಳಕ್ಕೆ ಕುಕ್ಕಿ, ಜಂಗಮನ ಪಾದಗಳನ್ನು ಹಿಡಿದು ಕೊಂಡು, ನಿರ್ಲಜ್ಜ ಆನಂದಾಶ್ರುವನ್ನು ಸುರಿಸುತ್ತ, "ಸ್ವಾಮಿಯೋರೆ! ಸ್ವಾಮಿಯೋರೆ!" ఎంದು బాರಿ బారిಗೂ ఆంದ.
  ಅ೦ಬಾ ಎ೦ದು ತಾಯಿಯ ಬಳಿಗೆ ಓಡಿಬ೦ದ ಕರು..
 ಅಪರಂಪಾರ ಬಾಗಿ, ಗೋಗರೆಯುತ್ತಿದ್ದವನ ಮೈದಡವಿದ.
 "ಏಳು, ಶಂಕರಪ್ಪ!"
 "ಬಂದಿರಾ ಸ್ವಾಮಿಯೋರೆ?"
 "ಹ ಶಂಕರಪ್ಪ, ಬಂದಿದೇವೆ."
 ಥರಥರ ಕಂಪಿಸುತ್ತಿದ್ದ ಶಂಕರಪ್ಪನೆದ್ದು, ಅಪರಂಪಾರನ ಎಡಗೈಯನ್ನು ಹಿಡಿದು ಕೊಂಡ. 
 ಸಿಪಾಯರನ್ನು ಕುರಿತು ಅಪರಂಪಾರನೆಂದ:
 "ನೀವಿನ್ನು ಹೋಗಬಹುದು."
 ಒಬ್ಬ ಸಿಪಾಯಿಯೆಂದ :
 “ಮಠಕ್ಕೆ ಮುಟ್ಟಿಸು ಅಂತ ಆಡ್ರಾಗಿತ್ತು."
 “ನಮಗೀಗ ದಾರಿ ಕಾಣುತದೆ. ಕಣ್ಣುಗಳು ಬಂದಿವೆ."
 ಸಿಪಾಯರು, ಬಹಳ ಕಾಲ ತಾವು ಕೈದಿಯಾಗಿ ಕಂಡಿದ್ದ ಮನುಷ್ಯನಿಗೆ ಕೈಜೋಡಿಸಿ ನಮಿಸಿ, ಸೆರೆಮನೆಯ ದಾರಿ ಹಿಡಿದರು.
 ಶಂಕರಪ್ಪ ಕೇಳಿದ್ದು ಸುಳ್ಳಾಗಿರಲಿಲ್ಲ. ಕುರುಡನಾದರೇನು? ಕುಂಟನಾದರೇನು? ಅವನ ಸ್ವಾಮಿ, అವನ ಸ್ವಾಮಿಯೇ.
 "ನನ್ನ ಮನೆಗೆ ಹೋಗೋಣವಾ, ಸಾಮಿಯೋರೆ?"
 “ಇಲ್ಲಿ ಮನೆ ಮಾಡಿದೀಯಾ?"
 "ಹೌದು. ನಮ್ಮಪ್ಪ."
 “ನಡೆ...ಹಾಗೇ, ದಾರಿಯಲ್ಲಿ ಈಶ್ವರ ಗುಡಿ ಇದ್ದರೆ ಅವನಿಗಿಷ್ಟು ಕೈಮುಗಿಯಬೇಕಲ್ಲ?"
 “ಕರಕೊಂಡು ಹೋಗುತ್ತೇನೆ, ಸ್ವಾಮಿಯವರೆ."
 “ಅದೇನೋ ಕೆಳಕ್ಕಿಟ್ಟೆ..."
 "ಕಡಲೆ ಪ್ರರಿ."
 “ವ್ಯಾಪಾರ ಮಾಡುತೀಯಾ?"
 "ಹೊಟ್ಟೆಪಾಡಿಗೇನಾದರೂ ಬೇಕಲ್ಲ. ನಮ್ಮಪ್ಪ."
 "నిಜ, ಮೂಟಿ ಎತ್ತಿಕೊ."
 ಶಂಕರಪ್ಪ ಚೀಲವನ್ನೆತ್ತಿಕೊಂಡು ಬೆನ್ನಿಗೇರಿಸಿದ. ತನ್ನ ಬಲಗೈಯಿಂದ ಅಪರಂಪಾರನ ಎಡಗೈಯನ್ನು ಹಿಡಿದುಕೊಂಡ.
 ನಡೆಯತೊಡಗುತ್ತ, ನೆರೆದಿದ್ದ ಜನರನ್ನುದ್ದೇಶಿಸಿ, "ದಾರಿ ಬಿಡಿ! ದಾರಿ ಬಿಡಿ!” ಎಂದ ಆತ. 
'ಮಹಾಸ್ವಾಮಿಯವರು ಬಿಜಯಂಗೈಯುತಿದಾರೆ. ಹೋಷಿಯಾರ್!' ಎಂಬ ದನಿ ಯಿತ್ತು ಶಂಕರಪ್ಪ ನುಡಿದ ಮಾತಿನಲ್ಲಿ. 

14