ಪುಟ:ಸ್ವಾಮಿ ಅಪರಂಪಾರ.pdf/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಸ್ವಾಮಿ ಅಪರಂಪಾರ ೭೯

 ಒಂದರ್ಧ ಕ್ಷಣ ನಿಂತಿತ್ತು. ಅರ್ಧವೇ ಕ್ಷಣ.
    'ಮರುಳೆ!' ಎಂದು ತನ್ನ ಮನಸ್ಸನ್ನು ಕಟುವಾಗಿ ಜರೆದು, ರಾಯಸವನ್ನು ಆತ ತೆರೆದಿದ್ದ.
   ಓದಿದಾಗ, ‘ಶಿವ ಅಗ್ನಿಪರೀಕ್ಷೆಯೊಡ್ಡುತಿರುವನಲ್ಲಾ' ಎಂದು ವಿಸ್ಮಯವಾಯಿತು.
   ಆ ವಿಸ್ಮಯ ಭಾವವನ್ನು ತಡವಿಲ್ಲದೆ ತೊಡೆದುಹಾಕಿತು, ತಾನು ಮುಂದಿಡಬೇಕಾದ ಹೆಜ್ಜೆಯನ್ನು ಕುರಿತು ತೀರ್ಮಾನ ಕೈಕೊಂಡ.
 ಗಂಭೀರವಾಗಿ ಆತ ಕೇಳಿದ:
 “ನಿನ್ನ ಹೆಸರೇನು?”
 "ಶಂಕರಪ್ಪ, ಚಾವಡಿಕಾರ."
 ಅಪರಂಪಾರನ ಒಳಗಿನದೊಂದು ಸೂಕ್ಷ್ಮ ತಂತಿಯನ್ನು ಸ್ಪಂದಿಸಿತು. ದೂತರ ಮುಖ್ಯಸ್ಥನ ಉತ್ತರ. ಗವಿಯ ಆಳದಲ್ಲಿ ಹೆಪ್ಪುಗಟ್ಟಿದ ನೆನಪೊಂದು ಮಿಸುಕಿತು.
 ನಿಧಾನವಾಗಿ ಆತನೆ೦ದ :
 "ಶಂಕರಪ್ಪ...ಶಂಕರ. ಆಪದ್ಬಾಂಧವ. ದೇವರ ಹೆಸರು."
 ಸಮಸ್ಯೆಗಳು ಬಗೆಹರಿದಿದ್ದ ಆ ಸಂದರ್ಭದಲ್ಲಿ. ಅಪರಂಪಾರನ ನುಡಿಯುವ ಪ್ರತಿಕ್ರಿಯೆ ಯನ್ನೂ ಶಂಕರಪ್ಪನಲ್ಲಿ ಉಂಟುಮಾಡಲಿಲ್ಲ.
 ಅವನೆಂದ :
 "ಅಯ್ಯನವರಿಗೆ ಯಾವಾಗ ಅನುಕೂಲವಾಗತದೊ__"
 ಅಪರಂಪಾರನ ಹುಬ್ಬಗಳು ಗಂಟಿಕ್ಕಿದುವು.
 “ಬರತೇವೆ. ಅಕ್ಷತೃತೀಯೆ ದಾಟಿದಮೇಲೆ ನಮಗೆ ಮನಸಾದಾಗ ಬರತೇವೆ."
 "ಇಲ್ಲಿ ಮೇನೆ ಇಲ್ಲದ ಪಕ್ಷದಲ್ಲಿ ಮಡಕೇರಿಯಿಂದ ಕಳಿಸತಾರೆ.” 
 "ಮೇನೆ! ನಮಗೆ ? ಹರ ತನ್ನ ಭಕ್ತರ ತಿರಿವಂತೆ ಮಾಡುವ, ನಾವು ನಡೆದು

ಬರುತೇವೆ."

  "ತಮ್ಮ ಮೈಗಾವಲಿಗೆ..."
  "ಮೈಗಾವಲು? ಹಹ್ಹ...ನಾವೇನು ದೊರೆಗಳೆ?"
  "ದಾರಿ ತೋರಿಸೋದಕ್ಕಾದರೂ__" 
  "ಮಹದೇವನಿರತಾನೆ. ದಾರಿ ಕಾಣೆನಲ್ಲಾ ಅಂದರೆ, ಹೀಗೆ ಬಾ ಅನ್ನುತಾನೆ.ಎಡವಿ 

ದರೆ ಕೈಹಿಡಿದು ಎತ್ತುತಾನೆ."

 ಇದು ಎರಡರ್ಥಗಳ ಮಾತು ಎಂಬುದನ್ನು ಶಂಕರಪ್ಪ ಗ್ರಹಿಸದಾದ. ನೆರೆದ ಇತರರ ಅರಿವಿಗಂತೂ ಅದು ದೂರವಾದದ್ದು. ಅವರು ಏಕಕಂಠದಿಂದ ಅಂದರು :
 "ಸಾಜ, ಸಾಜ." 
  ದೂತರನ್ನು ಕುರಿತು ಅಪರಂಪಾರನೆಂದ:
 "ಇನ್ನು ವಿರಮಿಸಿಕೊಳ್ಳಿ. ಇಷ್ಟ ಬಂದಾಗ ನೀವು ಹೊರಡಬಹುದು. ನಾವು ಬೇಗನೆ ಬರತೇವೆ ಅಂತ ಕೊಡಗಿನ ಅರಸರಿಗೆ ತಿಳಿಸಿರಿ."
 ರಾಜನ ಅನುಜ್ಞೆಯನ್ನು ಬಹುಮಟ್ಟಿಗೆ ತಾನು ಈಡೇರಿಸಿದಂತಾಯಿತೆಂದು ಶಂಕರಪ್ಪ

ನಿಗೆ ಸಂತೋಷವಾಯಿತು.