ಪುಟ:ಸ್ವಾಮಿ ಅಪರಂಪಾರ.pdf/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ೮೦        ಸ್ವಾಮಿ ಅಪರಂಪಾರೆ
             ೨೫
 ಅಪರಂಪಾರ ಮಡಕೇರಿಗೆಂದು ಕೈಗೊಂಡ ಕಾಲ್ನಡಿಗೆಯ ಪ್ರವಾಸ ಆ ಜಂಗಮನ ಜೈತ್ರಯಾತ್ರೆಯಾಯಿತು.ದಾರಿಯುದ್ದಕ್ಕೂ ಜನ ಆ ಭವ್ಯಕಾಯನ ಅಡಿಗಳಿಗೆ ಎರಗಿದರು. ದಾಸೋಹಕ್ಕೆ ಆತನನ್ನು ಕರೆದರು. ಅವನಾಡಿದ ವಚನಗಳಿಗೆ ಕಿವಿಗೊಟ್ಟರು.
 ಮೂಗ್ರೆಬೆಟ್ಟವನ್ನು ಬಳಸಿ ತಪ್ಪಲಿನ ದಾರಿಯಾಗಿ ಅಪರಂಪಾರ ನಡೆದ.ಹಾರಂಗಿ ನದಿ ಯನ್ನು ದಾಟಿದ. ಆ ಕ್ಷಣ ಮಾದಕವಾದುದೇನನ್ನೋ ತಾನು ಆಘ್ರಾಣಿಸಿದಂತೆ ಆತನಿಗೆ ಭಾಸವಾಯಿತು. ಪಾರಮಾರ್ಥಿಕ ಚಿಂತನೆ ಮನಸ್ಸಿನಿಂದ ದೂರ ಸರಿದು,ಲೌಕಿಕವಿಷಯ ಗಳ ನೆನಪು ಅವನನ್ನು ಕಾಡತೊಡಗಿತು.
ಹಾಲೇರಿಗೆ ಹತ್ತಿರವಾಗುತ್ತಿದ್ದೇನೆ-ಎಂದುಕೊಂಡ ಅಪರಂಪಾರ, ಅಲ್ಲಿಗೆ ಹೋಗಲೆ ತಾನು? ಯಾಕೆ?
 "ಕಾಯವೆಂಬ ಢಕ್ಕೆಯ ಮೇಲೆ,ಜೀವವೆಂಬ ಹಿಡಿಚೆಂಡು ಬೀಳೆ,ತ್ರಿವಿಧವ ತಾ, ತಾ ಎಂಬಾಸೆ ಹಿಂ.ಡಿ,ಡಿಂ,ಡಿ ಎನ್ನುತ್ತಿದೆ."   
 ಅದಕ್ಕೇನು ಮಾಡಬೇಕು?       
 “...ಹೊಲಬುದಪ್ಪದೆ ಗೆಲಬೇಕು ಕಾಲವೆಂಬ ಮಾರಿಯ, ಕಾಲಾಂತರ ಭೀಮೇಶ್ವರ ಲಿಂಗವನರಿಯಬಲ್ಲಡೆ!"
ಗತಜನ್ಮದ ತನ್ನ ಪೂರ್ವಜ ಬೇರೂರಿದ ತಾಣ ಹಾಲೇರಿ. ಅಲ್ಲೀಗ ತನಗೇನು ಕೆಲಸ? ಹಾಲೇರಿ ಅರಮನೆಯ ಮಾಡದ ಕೆಳಗಿರುವ ಹತ್ತಿರದ ದೂರದ ರಾಜಸಂಬಂಧಿ ಗಳನ್ನು ಕಾಣಲೆ? ಅವರ ಸುಖದುಃಖ ವಿಚಾರಿಸಲೆ? ಹಾಗೆ ಮಾಡುವುದರಿಂದ ಸಾಧಿಸಿ ದಂತಾಗುವುದೇನು ?
ಅಪರಂಪಾರ ತನ್ನಷ್ಟಕ್ಕೆ ನಕ್ಕ, ಹಾಲೇರಿಯ ಕಡೆಗೆ ಹೊರಳಿದ್ದ ಪಾದಗಳನ್ನು ತಡೆದ. ನೇರವಾಗಿ ನಡೆದರೆ ಸೂರ್ಯಾಸ್ತಕ್ಕೆ ನಾಲ್ಕೈದು ಘಳಿಗೆ ಇದ್ದಾಗಲೇ ಆತ ಮಡಕೇರಿ ಯನ್ನು ತಲಪಬಹುದು. ಆದರೆ ಪಾದಗಳು ಅವನೊಡನೆ ಕಣ್ಣುಮುಚ್ಚಾಲೆಯಾಡಿದುವು. ಅಡ್ಡದಾರಿಯೊಂದನ್ನು ಹಿಡಿದುವು.
 ಆ ಹಾದಿ ಕೊನೆಗಂಡುದು ಅಪ್ಪಂಗಳದಲ್ಲಿ.  
 ಹಿರಿಯರು ಬಿತ್ತಿದ ಬೀಜ ಮೊಳಕೆಯೊಡೆದು ಸಸಿಯಾದ ಜಾಗ, 'ಗತಜನ್ಮ'ದಲ್ಲಿ  ಅದು ತನ್ನ ಬಾಲ್ಯದ ಆಡುಂಬೊಲ. ಅಗ್ಗಿಷ್ಟಿಕೆಯಾಗಿದೆಯಲ್ಲ ಮೆದುಳು? ಅಪ್ಪಂಗಳದ ಜಹಗೀರಿನ ಹೊರಗೆ ನಿಂತು ಆ ಹಸುರನ್ನೊಮ್ಮೆ ಮನದಣಿಯೆ ನೋಡಿದೆನೆಂದರೆ ಮನಶಾಂತಿ ದೊರೆಯುವುದೇನೋ?
 "ಎತ್ತ ಸುತ್ತಿಬಂದರೂ ಊರಿಗೆ ಬಪ್ಪುದು ತಪ್ಪದು..."       ಹೊರವಲಯದಲ್ಲಿ ನಿಲ್ಲದೆ ಒಳಗೆ ಅರಮನೆಯ ಕಡೆಗೇ ಅಪರಂಪಾರನ ಪಾದಗಳು ನಡೆದುವು.
 “ಯಾರ ಮನೆಯಾದೊಡೇನು ತಿರುಪೆ ಎತ್ತುವವಗೆ ?"             ಮುಚ್ಚಂಜೆಯ ಹೊತು, ಜಂಗಮರು ಫಕೀರರು ಸನ್ಯಾಸಿಗಳು ಅಪ್ಪಂಗಳಕ್ಕೆ ಬರುವು ದರಲ್ಲಿ ಅಸ್ವಾಭಾವಿಕವಾದುದೇನೂ ಇರಲಿಲ್ಲ.ಆಳುಗಳು ಈ ಸ್ವಾಮಿಯನ್ನು ನೋಡಿದರು.   ಅರಮನೆಯ ಹೆಬ್ಬಾಗಿಲಲ್ಲಿ ವಯಸ್ಸಾದ ಸ್ತ್ರೀಯೊಬ್ಬಳು ನಿಂತಿದ್ದಳು, ಗಂಗಮ್ಮ,