ಪುಟ:ಹಗಲಿರುಳು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ... - - * * ವರಿಯಲಿಕ್ಕಿರುವ ಚಿಕ್ಕವರಿಗೆ, ಲೋಕವ್ಯವಹಾರಗಳನ್ನು, ಕೈಗನ್ನಡಿಯಾಗುವಂತೆ, ತಿಳಿಸುವುದೆಂದರೆ, ಹೀಗೆಯೆ. ಆದರೆ, ಆಬೆಳಕುಗಳ ಹುಟ್ಟು, ಯಾರಿಂದ?-ನೋಡೋ ಣ-ಅವುಗಳು ತರತರವಾಗಿವೆ. ಅದರಿಂದ, ಅವುಗಳ ತಾಯಿಮನೆಯೂ, ಒಂದಲ್ಲ, ಎರಡಲ್ಲ ಹತ್ತಲ್ಲ, ಹಲವು; ಎಂದು ಕೆಲವರು ಹೇಳಬಹುದು, ಅದು ಸರಿಯಲ್ಲ. ಸೂರ್ಯಚಂದ್ರ ಅಗ್ನಿ ಮೊದಲಾದ, ಹಲವು ತೇಜೋರಾಶಿಗಳೂ, ಅಲ್ಪ ಸ್ವಲ್ಪ ತಾರ ತಮ್ಯವುಳ್ಳ ಮಕ್ಕಳಂತೆ, ಒಂದೆ ತಾಯಿಯ ಮಕ್ಕಳು. ಆ ತಾಯಿಯೆ, ಯೋಗಿಗಳು ಸೇವಿಸುವ ಬ್ರಹ್ಮವಿದ್ಯೆ, ಅವಳ ನಾಡೆ, ಆನಂದಸಾಮ್ರಾಜ್ಯವು, ಹಲವರು ಆ ವಿದ್ಯೆಯನ್ನೂ, ಅದರ ಅಂಗಗಳಾದ ಕಳಾಶಾಸ್ತ್ರಗಳನ್ನೂ ಅಭ್ಯಾಸಮಾಡಿ, ತಿಳಿದು ಕೊಳ್ಳುತ್ತಾರೆ. ಆದರೇನು ? ಅವರ ಮನಸ್ಸು ನೆಲೆಗೊಳ್ಳದಿರುವುದರಿಂದ, ಹದ ವಾಗದ ಹಿಟ್ಟು, ಕಚ್ಚಾ ಯಕ್ಕೆ ಬಾರದೆ, ಅರುಚಿಗೂ, ಅಜೀರ್ಣಕ್ಕೂ, ಆಮೂಲಕ, ರೋಗಕ್ಕೂ ಕಾರಣವಾಗುವಂತೆ, ಲೋಕಕಂಟಕರೆ ಆಗುತ್ತಾರೆ. ಅದಿರಲಿ, ಆ ಆನಂದಸಾಮ್ರಾಜ್ಯದಲ್ಲಿ ಆರ್ಯ (ಸೂರ್ಯ)ನೆ ದೊರೆ, ಉಳಿ ದವರೆಲ್ಲ ರೂ, ಅವನ ಕಿರಿಯರು. ಆರ್ಯನು ಇದಿರುಬಂದೊಡನೆ, ಎಲ್ಲರೂ ಕೈಮುಗಿದು ವಿಧೇಯತೆಯನ್ನು ಪ್ರಕಟಿಸುತ್ತಾರೆ. ಆದರೆ, ಆ ಒಳಗಿನವರು, ಅವ ನಲ್ಲಿ ಹೊಟ್ಟೆಗಿಚ್ಚು ಪಡುತ್ತಿದ್ದರೆ, ಅಲ್ಲವೆ, ಅವನು ಉದ್ಧ ತನಾಗಿ ಕಂಡವರ ತಲೆ ಯಲ್ಲಿ ಪಾದವಿಡುವುದಾದರೆ, ಅದು ಅಪಾಯಕರವೆ, ಇರಲಿ, ಒಳಗೊಳಗಿನ ಎಣಿಕೆ ಗಳನ್ನು, ಹೊರಹೊರಗಿಂದ ಕಂಡುಹಿಡಿವುದೆಂದರೆ, ಬಹಳ ಬಾರಿ ನಿಪ್ಪಲವೆ ಆಗುವುದು. ಆಯಾ ಅಭಿಪ್ರಾಯಗಳನ್ನು, ಅವರವರ ಕೆಲಸಗಳಿಂದಲೆ ಅಲ್ಲಿಂದಲ್ಲಿಗೆ ಅಚ್ಚುಗಟ್ಟಾಗಿ ಗೊತ್ತು ಹಚ್ಚಬೇಕು, ಅನುಮಾನಕ್ಕಿಂತಲೂ ಪ್ರತ್ಯಕ್ಷವೆ ಉತ್ತಮವಲ್ಲವೆ ? ಇನ್ನು (ಕತ್ತಲೆಯೆಂದರೇನು?” ಎಂಬುದೊಂದು ಪ್ರಶ್ನವಿದೆ. ಅದಕ್ಕೆ, ಹಿರಿ ಯರ ಹೇಳಿಕೆ ಹೀಗೆ ಕತ್ತಲೆಯೆಂಬುದೊಂದು, ಬೇರೆ ಪದಾರ್ಥವಲ್ಲ. ಬೆಳಕಿಲ್ಲದುದೇ ಅದು. ಅದನ್ನು 'ತೇಜಸ್ಸಿನ ಅಭಾವ'ವೆಂದು ಕರೆಯುತ್ತಾರೆ. ಪ್ರಬಲವಾದ, ಯಾವುದಾದ ರೊಂದು ತೇಜಸ್ಸು ಬಯಲಿಗೆ ಬಂದೊಡನೆ, ಅದು ಮಾಯವಾಗುವುದೆ, ಇದಕ್ಕೆ ಸಾಕ್ಷಿ ಮಾಯಾದೇವಿಯೆಂದರೆ, ಹೇಗೆ ಅಜ್ಞಾನ ಸ್ವರೂಪವೊ, ಹಾಗೆಯೆ ಇದೂ ಅದರ ರೂಪಾಂತರವು. ೧. ಕೈ = ಹಸ್ತ, ಪ್ರಕಾಶ, ೨, ಪಾದ = ಚರಣ, ಕಿರಣ.