ಪುಟ:ಹಗಲಿರುಳು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಇದಕ್ಕೂ, ಕೆಲವು ಆಕ್ಷೇಪಗಳುಂಟು, ಹೇಗೆಂದರೆ--ಕತ್ತಲೆಯ ಅಭಾವವೆ ತೇಜಸ್ಸೆಂದು, ಯಾಕೆ ಹೇಳಕೂಡದು ? ಪ್ರಬಲವಾದ ಕತ್ತಲೆ ಕವಿದರೆ, ಆತೇಜಸ್ಥ ತಲೆಯೆತ್ತುವುದಿಲ್ಲ ವಷ್ಟೆ, ಕೆಲವು ಚಿಕ್ಕಚಿಕ್ಕ ರತ್ನಗಳ ಮಿಣುಕೂ, ಕಗ್ಗ ತಲೆಯಲ್ಲಿ ಕಾಣುವುದಿಲ್ಲ, ಹಾಗೆಯೆ, ಅಶಕ್ತವಾದ ಕತ್ತಲೆಯ, ಪ್ರಬಲವಾದ ತೇಜಸ್ಸಿನ ಜಳ ಪದ ಎದುರಲ್ಲಿ, ಅಡಗುತ್ತದೆ. ಮಡಿಕೆ ಮೊದಲಾದುವುಗಳಲ್ಲಿ, ಕಪ್ಪಾಗಿ ನೆಲೆನಿಂತ ಕತ್ತಲೆ, ಬೆಳಕಿಗೆ ಅಳುಕುವುದೆ? ರಾತ್ರಿಯ ರಂಗಿನಂತಿರುವ ಅಬಲವಾದ ಕತ್ತಲೆಯನ್ನು ಮಾತ್ರ, ತೇಜಸ್ಸು ಚದರಿಸುವುದು.” ಇದು ಸರಿಯಲ್ಲ. ವಸ್ತು ವಿಲ್ಲದೆ, ಅದರ ಬಣ್ಣವೂ ಇಲ್ಲವೆಂಬುದು ಸರ್ವ ಸಮ್ಮತವು, ಎಂದಮೇಲೆ, ಹಗಲಿನಲ್ಲಿ, ರಾತ್ರಿ ಇಲ್ಲದಿರುವುದರಿಂದ, ಅದರ ಬಣ್ಣ ವೆಂದು ಕರೆಯಲ್ಪಡುವ ಕತ್ತಲೆಯೂ ಇಲ್ಲವೆಂದಾಯಿತು. ಆದರೆ, ಹಗಲಿನಲ್ಲಿ, ಕೋಣೆಕೊಟ್ಟಡಿಗಳಲ್ಲೂ, ಕಾಡುಗವಿಗಳಲ್ಲೂ ಕತ್ತಲೆಯನ್ನು ನೋಡುವುದು ಪ್ರತ್ಯಕ್ಷಸಿದ್ದವು. ಇದರಿಂದ, ಮೇಲಿನ ತರ್ಕವು ವ್ಯರ್ಥವೆಂಬುದು ನಿಶ್ಚಯವಾಗಿ, ಕತ್ತಲೆಯೆಂದರೆ, ಕಣ್ಣುಗಟ್ಟುವ ಮಾಯಕದ ಮಂಕುಮಸಿಯೆಂದು, ಗೊತ್ತಾಗುವುದು. ಕೆಲವು ರತ್ನಗಳ ಹೊಳಪು, ಗಣಿಗಳಲ್ಲಿ ಮಿಣುಕದಿರುವುದೂ, ಅವುಗಳ ಅಶಕ್ತಿ ಯಿಂದಲೆ. ಎಳ್ಳಷ್ಟಾದ ಜ್ಞಾನವು, ಅಜ್ಞಾನಪುಂಜದಲ್ಲಿ ಹೊಳೆಯುವುದೆ ? ಅದ ರಿಂದ, ಅನಾಸ್ತಿತ್ವದ ಕತ್ತಲೆಗೆ, ಅಸ್ತಿತ್ವದ ತೇಜಸ್ಸಿನ ಮನ್ನಣೆ ಸಿಕ್ಕಲಾರದು. ನಿಜ ಸ್ಥಿತಿ, ಹೇಗಿದ್ದರೇನು ? ಈಗ ಈ ಉಭಯಮತಗಳಲ್ಲಿ ಯ, ಜಗಳವು ಹುರಿಯೆ ರುತ್ತಿದೆ. ಇಂತಹ ಸಂದರ್ಭಗಳಲ್ಲಿ, ಮಧ್ಯಸ್ಥನಾಗುವುದೆಂದರೆ ಬಹಳ ಕಷ್ಟವು. ಆಗಲಿ, ನಡೆವವನಿಗೆ, ಮಳೆಬಿಸಿಲುಗಳ ಕಲ್ಲು ಮುಳ್ಳುಗಳ ಕಾಟವು, ಕಟ್ಟಿಟ್ಟ ಗಂಟೇ ಸರಿ, ಆದರೂ, ಕೆರವನ್ನೂ ಕೊಡೆಯನ್ನೂ ಒದಗಿಸಿಕೊಂಡರೆ, ಹೇಗಾದರೂ ಸಾಗ ಬಹುದು, ಹಾಗೆಯೇ, ಭೂತಭವಿಷ್ಯತ್ಕಾಲಗಳನ್ನು, ಕೆಳಗೂ ಮೇಲೂ ವಿಸ್ತರಿಸಿ ಕೊಂಡು, ಅವುಗಳಿಗೆ ಅನುಸಾರವಾಗಿ, ನಾನೂ ವರ್ತಿಸುತ್ತಿರಬೇಕು. (ಆಕಾಶದಲ್ಲಿ - ಕಂದ | ಕಾಲಗತಿ ಹೇಗೆ? ನಮ್ಮಯ ಪಾಲಕನಾರ್ಯ ನಿಗೆ ಮುಪ್ಪು ಮೀರುತ ಬಂತಾ | ಮೇಲೆ ಕತ್ತಲೆಯು ತನ್ನಯ ಕಾಲೂರುವುದಂತೆ ಎಮ್ಮವಸ್ಥೆಯೆ) ಕಾ ಕಾ! ಎಂದು, ಕಾಗೆ ಮೊದಲಾದ ಪಕ್ಷಿಗಳು ಹಾರುತ್ತಿರುವುವು.) || ೧ || 0, ಕಾ ಕಾ = ಎಂಥದೋ ಎಂಥದೋ, ಕಾ ಕ' ಎಂಬ ಕೂಗು.