ವಿಷಯಕ್ಕೆ ಹೋಗು

ಪುಟ:ಹಗಲಿರುಳು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕನ್ನಡ ಕೋಗಿಲೆ, ಎಪ್ರಿಲ್ ೧೯೧೮.

 ಓಹೋ ! ಹೊತ್ತು ಹೋಯಿತು. ಇನ್ನು, ವಿಮರ್ಶೆಗೆ ಎಡೆ ಇಲ್ಲ, ಆರ್ಯನಿಗೆ, ಮುಪ್ಪು ಮೀರಿದೆ. ಕತ್ತಲೆಯ ಭೇದೋಪಾಯವು, ಎತ್ತೆತ್ತಲೂ ತಲೆ ದೋರಹತ್ತಿದೆ. ಅದೊ ! ಆರ್ಯನ ಪಕ್ಷದವರೆಲ್ಲ, ಕಾರ್ಯವಿಮುಖರಾಗಿ, ಚಲಿಸ ತೊಡಗಿದ್ದಾರೆ. ಮಾತ್ರವಲ್ಲ, ಅವರು ನನ್ನ ವಿಷಯದಲ್ಲಿ, ಸಂಶಯಪಡುತ್ತಾರೆಂದು, ಧ್ವನಿಪ್ರಧಾನವಾದ, ಅವರ ಮಾತೇ ಸೂಚಿಸುವುದು. ಇನ್ನು, ನಾನೂ, ಅತ್ತ ಕಡೆಯ ವಿಚಾರವನ್ನು ಮಾಡದಿದ್ದರೆ, ಅಪವಾದಕ್ಕೆ ಬಲಿಬೀಳಬೇಕಾದೀತು. ಲೋಕಾಪವಾದಾದ್ಭಯಂ' ಎಂದಲ್ಲವೆ ಎಚ್ಚರಿಕೆಯ ಮಾತು ?

ಇಂತು ಪ್ರಸ್ತಾವನೆ.

ಒ೦ ದ ನೆ ಯ ಅ೦ ಕ.

(ಮುಚ್ಚಂಜೆಯ ಹೊತ್ತು. ವೃದ್ದನಾದ ಆರ್ಯನು (ಸೂರ್ಯನು) ಕಾಲನ ರಥದೊಳಗಿನ ಕೆಂಬಿಸಿಲ ಪೀತಾಂಬರದ ಹಾಸಿಗೆ ಹಿಡಿದಿರುತ್ತಾನೆ.)

ಆರ್ಯ:-(ಮೋರೆಯೆತ್ತಿ, ಮುಂದಿನ ಪ್ರಜೆಗಳನ್ನು ನೋಡಿ) ಪ್ರಜೆಗಳೆ, “ನೀವೆಂದರೆ, ನನ್ನನ್ನು ಮನಮುಟ್ಟಿ ಪೂಜಿಸುತ್ತ, ಆಜ್ಞಾಧಾರಕರಾಗಿರುವವರು' ಎಂಬು ದನ್ನು ಚೆನ್ನಾಗಿಬಲ್ಲೆ ನು. (ಅರಸಿಂಗಂ ಪ್ರಜೆಯೆ ದೈವಂ' ಎಂಬ ಮಾತು, ನಿಮಗೇ। ಸಲ್ಲು ವುದು. ಆದರೆ, ಅದಕ್ಕಾಗಿ, ಮುಖಸ್ತುತಿಮಾಡುವುದು ಸರಿಯಲ್ಲ. ಸ್ತುತಿಯಿಂದ, ಹಲವು ಬಾರಿ, ಕೇಡೆ ಉಂಟಾಗುವುದೆಂಬುದು ಅನುಭವಸಿದ್ದವು. ಅದರಿಂದಲೆ, ನಿಮ್ಮ ನಡತೆಯನ್ನು ಒಳಗಿಟ್ಟು, ಹೊರಗೆ, ಗಂಭೀರಭಾವದಿಂದಿದ್ದೆನು. ಆದರೆ, ನೀವು, ನನ್ನ ಆ ಗಂಭೀರತೆಗೆ ಬೇಸರಪಟ್ಟ ಮೂಢರಲ್ಲವೆಂಬುದು, ನಿಮ್ಮ ಆಗಾಗಿನ ಕರ್ತವ್ಯತತ್ಪರತೆಯಿಂದಲೂ, ಕಡೆಗಾಲದ ಈ ಅಜ್ಜನ ಮೋರೆ ನೋಡುವುದಕ್ಕಾಗಿ ಬಂದು ನೆರೆದಿರುವ ಈ ಸಂದಣಿಯಿಂದಲೂ, ನಿಮ್ಮೆಲ್ಲರ ಮುಖಭಾವದಿಂದಲೂ, ಮತ್ತಷ್ಟು ಗಟ್ಟಿಯಾಗಿದೆ.ಬೆಲ್ಲದಲ್ಲಿ ಕಡೆಗೊಡಿಯೆಂದುಂಟೆ?

ನಿಮ್ಮಲ್ಲಿ ಹಲವರು, ನನ್ನ ಕೈಸನ್ನೆಯಿಂದಾಗಿ, ಮುಂಜಾನೆ ಆನೆಯಾಡ ತೊಡಗುವ ಮೊದಲೆ, ನನ್ನ ಪಕ್ಷದವರೆಂಬುದನ್ನು, ತಮ್ಮ ಪಕ್ಷಗಳನ್ನು ವಿಸ್ತ
೧. ಅಜ್ಜ = ಅಜ್ಜನು, ಆರ್ಯನು. ೨. ಪಕ್ಷ = ಮಿತ್ರಸಮೂಹ, ರೆಕ್ಕೆ.