ಪುಟ:ಹಗಲಿರುಳು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ಅದರಿಂದ, ನಿನ್ನ ಮಾತಿನ ರಾಮಾಯಣಕ್ಕೆ, ಇನ್ನು ಎಡೆಸಿಕ್ಕಲಾರದು. ಆರ್ಯತೆಯ ಹಿರಿತನಕ್ಕೆ ಮಾನಕೊಟ್ಟು, ವಾರ್ಧಕ್ಯದಲ್ಲಿ ಕನಿಕರವಿಟ್ಟು, ಎಷ್ಟೆಷ್ಟು ಸಡಿಲುಬಿಟ್ಟೆನೋ, ಅಷ್ಟಷ್ಟೂ, ನಿನ್ನ ಆ ರಾಮಾಯಣದ ಹನು ಮಂತನ ಬಾಲವು, ಉದ್ದಕ್ಕೆ ಬೆಳೆಯುತ್ತಿದೆ, ಹುಂ, ಸಾಕು ; ಇನ್ನು ನನ್ನ ಈ ಕಾಲಚಕ್ರದ ಗತಿಯನ್ನು ತಡೆದು, ಕರ್ತವ್ಯದ ಮೇರೆಗೆ ಮಸಿಮೆತ್ತ ಲಾಗುವುದಿಲ್ಲ. ತೇಜಸ್ವಿ:-(ಉರಿದೆದ್ದು) ಓಹೋ, ನೀನೊಬ್ಬ ಸರ್ವಗುಣಸಂಪನ್ನನು, ನಿನ್ನ ಮಹತ್ತನ್ನು, ಮತ್ತಾರೂ ಕೊಂಡಾಡುವುದಿಲ್ಲವೆಂದು, ನೀನೆ ಗಂಟೆ ಬಾರಿಸಿ ಕೊಳ್ಳುವೆಯೇನು ? ನಿನ್ನ ಕಾಲಮುಖದ ಲಕ್ಷಣವು, ಯಾರಿಗೆ ಗೊತ್ತಿಲ್ಲ ? ತೋರುವುದೊಂದು, ಕೊಡುವುದು ಬೇರೊಂದು, ನಿನ್ನ, ಈ ಮುಂದಾಳು ತನದಿಂದ, ಮುಂದೆ ಪ್ರಪಂಚವ್ಯಾಪಾರದಲ್ಲಿ, ಆಗಲಿಕ್ಕಿರುವ ಸುಧಾರಣೆ ತಿಳಿದೇ ಇದೆ. ನಮ್ಮಜ್ಜ ನಲ್ಲಿ ಮಾನವಿಟ್ಟವನಂತೆ, ಧರ್ಮಮಾರ್ಗೊದ್ದಾರಕ ನಂತೆ, ಅಂಥವನಂತೆ, ಇಂಥವನಂತೆ, ಹುಂ, ಸಾಕು, ಸಾಕು, ನಾನು ಮಾತಾ ಡಲು ಎಡೆಗೊಟ್ಟಿರುವೆನೆಂದು ಹೇಳಲಿಕ್ಕೆ, ನಿನಗೆ ನಾಚಿಕೆಯೂ ಆಗುವು ದಿಲ್ಲವೆ ? ಒಂದೇಒಂದು ನಿಮಿಷವಾದರೂ ಎಡೆಗೊಡದೆ, ನಿನ್ನ ಈ ಗಾಡಿ ಯನ್ನು ಮುಂದುವರಿಸುತ್ತಲೆ ಇರುವೆ. ಇರಲಿ, ಇದನ್ನು ನಿಲ್ಲಿಸಬೇಕೆಂದು, ನಿನ್ನೊಡನೆ ಹೇಳಿಕೊಂಡವರಾದರೂ ಯಾರು ? ಆದರೂ, ಬರಿದೆ, ಆ ವಿಶ್ವಾ ಮಿತ್ರನ ಕಡೆಯ, ದುಷ್ಟ ನಕ್ಷತ್ರಕನ ಅವತಾರವನ್ನೇ ಧರಿಸಿರುವೆ. ನಿನ್ನಂಥ ಕಪ್ಪು ಮುಸುಡಿನವರಿಗೆ, ಇದೆ ಒಂದು ಕಾಲವು. ಆ ಮೇಲೆ, ನಿಮ್ಮಂಥನ ರನ್ನು ಕೇಳುವರಾರು? ಇಂಥ ದುರ್ಬುದ್ಧಿಯಿಂದಲೆ, ನಿನ್ನ ಪೂರ್ವಿಕರು, ಭೂತ ಗಳಾಗಿರುವುದು. ಆಗಲಿ, ನಿನ್ನ ಕೈಯುದ್ದವಿದ್ದಷ್ಟೂ ಬೀಸು, ಹುಂ, ನೋಡೋಣ. ಕಾಲ:- ಸರಿ, ನನ್ನ ಎಣಿಕೆ ಗುರಿಯನ್ನೇ ಮುಟ್ಟಿತು, ನಿಯಮವೆಂಬ ಕೈಗತ್ತಿ ಯುಳ್ಳ, ಈ ಕಾಲವೆಂಬ ಕಟುಕನ ಕಣ್ಣಿನಲ್ಲಿ ನೆತ್ತರುಂಟೆ ?” ಎಂದು ನಿಮ್ಮೊ ಳಗೆ, ಇನ್ನೂ ಹಲವರು, ನನ್ನನ್ನು ಬೈಯಬಹುದು. ಆದರೆ, ಅವರವರ ಧರ್ಮವು, ಅವರವರಿಗೆ ಮುಖ್ಯವೆಂದು ಒಪ್ಪುವುದಾದರೆ, ಇಷ್ಟು ಹೇಳುತ್ತೇನೆ. ೧ ಕಾಲ =ಸಮಯ, ಕಪ್ಪು ಬಣ್ಣ, ೨, ಭೂತ = ಭೂತಕಾಲ, ಕೆಟ್ಟದೈವ,