ಪುಟ:ಹಗಲಿರುಳು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ನನಗೆ ಇವರು ದೊಡ್ಡವರು, ಅವರು ಬಡವರು' ಎಂಬ ಭೇದವಿಲ್ಲ. ಏನು ಹೇಳಿದರೂ, ನನ್ನ ಧೋರಣವನ್ನು ಬದಲಾಯಿಸಲಾಗುವುದಿಲ್ಲ. ಮುಂದೆ, ಎಂಥ ಕಷ್ಟಗಳಿದ್ದರೂ, ಹಿಂದಿರುಗುವ ಉತ್ತರನಿಗೂ ನನಗೂ ಕರ್ಣಾರ್ಜುನ. ಈಗ, ನಿಮಗೆಲ್ಲರಿಗೂ ಒದಗಿದ ದುಃಖವು, ನನಗೂ ಕಾಣು ವುದು, ಮಾಡುವುದೇನು ? ದುಃಖಕ್ಕೂ ನಿಯಮಕ್ಕೂ ಒಡನಾಟವಿರಲಾರದು. ತೇಜಸ್ವಿ:-(ಕೋಪಿಸಿ) ಹೌದು, ನೀನು ಸರ್ವಗುಣಸಂಪನ್ನನು, ಆದರೆ, ನಿನ್ನ ಈ ಕಟ್ಟಪ್ಪಣೆ, ಆರ್ಯನಂತೆ ಕಾಲಸೂಚಕನಾಗಿರುವ ನಕ್ಷತ್ರಪ್ರತಿಗೂ ತಟ್ಟು ವುದಿಲ್ಲ ವೋ ? ಅವನು ಬಂದಾಗ, ಬರುವುದು, ಹೊದಾಗ ಹೋಗುವುದು. “ಬಾರದ ಮಹಾರಾಯನು ಇಲ್ಲ ನಷ್ಟೆ, ಬರುವ ಬಾಹಿರನು ಎಲ್ಲಿದ್ದಾನೆ ?” ಎಂಬಂತಲ್ಲ ವೆ, ನಿನ್ನ ಆಡಳಿತವು ? ಆರ್ಯ:- ತೇಜಸ್ವಿಯ, ಬರಿದೆ, ನಿನ್ನ ಸುಡುಮಾತುಗಳೇಕೆ ? ಹೀಗೆ ಮಾಡಿದರೆ, ಹೋಗುವ ಜಗಳವನ್ನು, ಹಣಬಡ್ಡಿಗೆ ಕೊಂಡಂತಾಗುವುದು. ಈ ಕಾಲನ ಮನಸ್ಸೆಂದರೆ, ಅವನ ಹೇಳಿಕೆಯಂತೆ, ನಿಷ್ಕಲ್ಮಷವೆಂಬುದು, ಅನುಭವಸಿದ್ಧವು. ಯಾರನ್ನಾದರೂ ಸರಿ, ಅವರವರ ಅದೃಷ್ಟಾನುಸಾರವಾಗಿ, ಎತ್ತಿ ಹಿಡಿದರೆ ಆಕಾಶಕ್ಕೂ, ಕಿತ್ತೊಗೆದರೆ ಪಾತಾಳಕ್ಕೂ, ಮುಟ್ಟಿಸಬೇಕೆಂದು, ಅವನಿಗೆ ದೈವಾಜ್ಞೆ, ನಮ್ಮಲ್ಲಿ, ಕಾಲನ ಕದ್ದೋರೆಯಾಗಿರುವುದು, ನಮ್ಮ ಅದೃ ಷ್ಟದಿಂದ ಹಾಕಿದ ಅಂಗಿ ಹಾರಿದರೆ ಹೋಗುವುದೆ ? ಕಾಲನು ತನ್ನ ಕೆಲಸ ವನ್ನು ಪೂರಯಿಸಬೇಕಾದುದು ನ್ಯಾಯವೆ. ವೈರಿಗಳಲ್ಲಿ ಕೋಪೋದ್ರಿಕ್ತ ರಾಗಿ, ಮೈಮೇಲೆ ಬಂದಿರುವ ಕಾಲನನ್ನು ಬೈದರೆ, ಗುಂಡಿನ ಅರೆಪೆಟ್ಟಿ ನಿಂದಾಗಿ, ಮೈಮೇಲಿನ ಗಾಯವನ್ನೆ ಪರಚುವ ಹುಲಿಯ ಹುಣ್ಣಿನ ಅವಸ್ಥೆ ಯಾದೀತು. ಶಾಂತಮನಸ್ಸಿನಿಂದ ಕೇಳು, ಈಗ, ನನ್ನ ಪ್ರತಿನಿಧಿಯಾಗಿ, ನಿನಗೇ ಪಟ್ಟಿ ಗಟ್ಟಲೆಣಿಸಿದ ನನಗೆ, ಈ ರೀತಿಯನ್ನು ನೋಡಿ, ಬಹಳ ವ್ಯಸನವಾಗುತ್ತದೆ. ಸಿಟ್ಟು ಉರಿಯಿತೆಂದು, ಅದನ್ನು ಕಂಡಬಟ್ಟೆಯಲ್ಲಿ ಹಚ್ಚಲಾಗದು. ಹಚ್ಚಿ ದರೆ, ಊರೂ, ಕಡೆಗೆ ತಾನೂ ಸುಟ್ಟು, ಎಲ್ಲವೂ ಕಪ್ಪಾಗುವುದು, ಸಿಟ್ಟೆಂದರೆ ಗಂಡುಗಲಿತನದ ಗುರುತೆಂಬುದನ್ನು, ನಾನೂ ಒಪ್ಪಿಕೊಳ್ಳುತ್ತೇನೆ, ನಿಮ್ಮಂಥ ಏರುಚೌವನಿಗರು, ತಮ್ಮ ದಾರಿಗೆ ಒಂದಿಷ್ಟು ಅಡ್ಡವಾದರೆಂದರೆ, ವಿಚಾರ