ಪುಟ:ಹಗಲಿರುಳು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ವಿಲ್ಲದೆ ಅವರ ಮೇಲೆ ಉರಿದುಬೀಳುವುದು, ತುಂಬ ವಿಷಾದಕರವು, ಆ ಉರಿಸಿಟ್ಟನ್ನು, ಶಾಂತತೆಯ ಸ್ನೇಹವಿಚಾರದಲ್ಲಿ, ತಕ್ಕಂತೆ ಹಚ್ಚಿದರೆ, ತೇಜ ಸ್ಸಿಗೆ ಎಡೆಯಾಗುವುದು, ಇಲ್ಲವಾದರೆ, ಕೂಡಲೆ, ಮಸಣದ ಮಜಲಿನಂತೆ, ಎಲ್ಲವೂ ಮಸಿಬೂದಿಗಳ ಸುಡುಕಳವಾದೀತು, ಅದರಿಂದ, ಮುಂದೆನೋಡಿ, ಹಿಂದೆ ನಡೆಯಬೇಕು. ತೇಜಸ್ವಿ:-ಆರ್ಯ, ಲೋಕವ್ಯವಹಾರಜ್ಞಾನವು, ತಕ್ಕಂತೆ ನೆಲೆಗೊಳ್ಳದಿರುವುದ ರಿಂದ, ನನ್ನಲ್ಲಿ ತಪ್ಪುಗಳು ಕಾಲೂರಿಕೊಂಡಿರಬಹುದು. ಆದರೆ, ಇನ್ನು ಮುಂದೆ, ನಿನ್ನ ಜ್ಞಾನೋಪದೇಶದ ಕೈಯನ್ನು ಹಿಡಿದುಕೊಂಡೆ ನಡೆಯುತ್ತೇನೆ. ಆರ್ಯ:- ಎಲೆ ಸದಾಗತಿ, ನೀನು, ಯಾವಾಗಲೂ ಎತ್ತೆ ತಲೂ ಸಂಚರಿಸಿ, ಲೋಕವ್ಯವಹಾರದ ಮರ್ಮವನ್ನು ತಿಳಿಯುತ್ತಿರುವವನು, ಅದರಿಂದ ದೊರೆ ಯಾಗುವ, ನಿನ್ನ ಪ್ರಿಯನಾದ ತೇಜಸ್ವಿಗೆ, ಅಚ್ಚುಮೆಚ್ಚಿನ ಮಂತ್ರಿಯಾಗಿ ಬೋಧಿಸುತ್ತ ಅವನ ನಡತೆಯನ್ನು ಲೋಕಾನುಭವದ ಅಚ್ಚಿನಲ್ಲಿ ಒತ್ತುತ್ತಿರ ಬೇಕು, ಒಮ್ಮೊಮ್ಮೆ ಮೇರೆದಪ್ಪಿ ಹೋದರೆ, ತೇಜಸ್ವಿಯನ್ನು, ಪ್ರೇಮದಿಂದ ಒತ್ತಾಯಿಸಿ, ಸಮಾಧಾನಿಸುವ ಹಕ್ಕು ನಿನಗಿರುವುದು, ಹೆಚ್ಚೇನು ಹೇಳಲಿ ? ಊರ ಉಸಿರಾಡಿಸುತ್ತಿರುವ ನಿನಗೆ, ಪ್ರಿಯಮಿತ್ರನ ಯೋಗಕ್ಷೇಮವನ್ನು ವಿಚಾರಿಸುತ್ತಿರಬೇಕೆಂದು ತಿಳಿಯದೆ ? (ತನ್ನಲ್ಲಿ) ಈ ಎರಡೆ ಅಧಿಕಾರಿಗಳನ್ನು ಇಟ್ಟರೆ ಸಾಕೆ? ಉ:, ಸಾಲದು, ಒಂದು ವೇಳೆ, ಇವರಿಬ್ಬರೂ ಸಮಾನಗುಣ ಕೃತ್ಯದವರಾಗಿ, ಸ್ವಾರ್ಥದಿಂದ ಒಟ್ಟಾಗಿ, ಬೀಗಿಬಿರಿದು ಬೀದಿವರಿದರೆ, ಭೂಮಿ ಯೆ ಬೆದರಿ ಬೀಳಬುಹದು. ಅಲ್ಲವೆ, ಇಬ್ಬಾಗವಾದರೂ ಲೋಕವಿಘಾತವೆ. ಚೌಪದಿ|| ತಲೆವಾಗಿಹುದು ಬೆಂಕಿಗಡ್ಡಿ ಪೆಟ್ಟಿಗೆಯೊಳ್ || ಬಳಿಕ ಮಲೇರಿಕೀರಲು ನಾಡಸುಡುಗುಂ || ನಲವನಾಗಿಸುವ ತಂಗಾಳಿ ಬಿರುಸಾಗೆ | ನೆಲೆದಪ್ಪಿಸದೆ ಊರ ಮರವನೆಗಳನ್ನು ? || ೧ || ಆಗಾಗಿನ ಕಾಲಸಂಸರ್ಗಗಳಿಂದ, ವ್ಯಕ್ತಿಗಳು ಹೇಗೆ ಎಷ್ಟು ಮಾರ್ಪಡುತ್ತ ವೆಂಬುದನ್ನು ಊಹಿಸಲಾಗುವುದಿಲ್ಲ. ಅದರಿಂದ, ಇವರೊಡನೆ, ಇನ್ನೊಬ್ಬ ನನ್ನೂ ಕೂಡಿಸುವುದು ಹಿತಕರವು, (ಪ್ರಕಾಶವಾಗಿ) ಎಲೈ ಜಲಧರ (ಮೇಘ)ನೆ, ೧. ಸ್ನೇಹ = ಕಳೆತನ, ಎಣ್ಣೆ.