ಪುಟ:ಹಗಲಿರುಳು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು ನೀನು ಜೀವನದ ಬಂಡಾರವಾಗಿರುವೆ. ಕೈಬಾಯಿಮುಟ್ಟುವ ಇಕ್ಕ ಟ್ವಿಸ ಬರಗಾಲದಲ್ಲಿ ಲೋಕದ ಜೀವನಾಧಾರನಾಗಿರತಕ್ಕವನೆಂದು, ನಾನೆ, ಕೈನೀಡಿ ನಿನ್ನ ಮನದುಂಬಿರುತ್ತೇನೆ, ಆ ನನ್ನ ಉದ್ದೇಶವನ್ನು ಮರೆಯದೆ, ನೀನು, ಬೇಕಾದಾಗ ಅಮೃತಪ್ರವಾಹದಿಂದ ಲೋಕವನ್ನು ತಣಿಸುತ್ತಿರುವುದೂ ಪ್ರಸಿದ್ಧವಿದೆ. ಈಗ ನೋಡು, ಇಂಥ ಅನಿವಾರ್ಯಸಂದರ್ಭದಿಂದಾಗಿ, ಈ ವೃದ್ಧನ ಮೇಲೆ, ಲೋಕಾಂತರಕ್ಕೆ ತೆರಳಿಸುವ ದುರ್ದಶೆಯ ಗದೆ ಎತ್ತಿರುವುದು. ಅದರಿಂದ, ನಿನ್ನಲ್ಲಿಯ ಇಷ್ಟು ಹೇಳಬೇಕಾಗಿದೆ. ಯಾವುದರಿಂದ, ನಿಮ್ಮೆಲ್ಲ ರನ್ನೂ, ಕಾಲಕ್ಕೆ ತಕ್ಕಂತೆ ನಡೆಯಿಸುತ್ತಿದ್ದೆನೆ, ಆ ನನ್ನ ಕೈಯನ್ನು, ಲೋಕಹಿತಕ್ಕಾಗಿ, ಈ ತೇಜಸ್ವಿಯ ತಲೆಯಲ್ಲಿ ಇಡುತ್ತೇನೆ. ಇವನೆ, ಮುಂದಣ ದೊರೆ; ಸದಾಗತಿಯ ಮಂತ್ರಿ, ಒಂದು ವೇಳೆ, ಆಮೇಲೂ, ಲೋಕಕ್ಕೆ ಕ್ಷಾಮವುಂಟಾಗುವುದಿದ್ದರೆ ಅದನ್ನು, ನೀನು ಶಾಂತಪಡಿಸಬೇಕು. ಅಂಥ ಬರಗಾಲದ ನಿವಾರಣೆಗಾಗಿಯೆ, ಮಹಾತ್ಮರು, ತಮ್ಮ ಜೀವನವನ್ನು ಒಪ್ಪಿಸುತ್ತಿರುವುದನ್ನು, ನೀನು ತಿಳಿಯದವನಲ್ಲ. ಆದರೆ, ಒಂದೊಂದು ಸಂದ ರ್ಭಗಳಲ್ಲಿ, ಒಬ್ಬೊಬ್ಬರ ಎಣಿಕೆಯ ದಾರಿಗಳು ತಪ್ಪಿ ಬದಲಾಗುವುದು ಪ್ರಕೃತಿಯಾದುದರಿಂದ, ಲೋಕಮತವೆಂಬ ಉಗಿಬಂಡಿಗಳು ಎದುರೆದುರು ಹಾಯ್ತು, ಅವಗಡವುಂಟಾಗುವುದುಂಟು. ಅದಕ್ಕಾಗಿಯೆ, ನೀವೆಲ್ಲರೂ ಪರಸ್ಪರ ಸಹಾಯಕರಾಗಿರಬೇಕೆಂದು, ಇಷ್ಟು ಅಚ್ಚುಗಟ್ಟಿನ ನಿಯಮಗಳನ್ನು ಮಾಡಿರುವೆನಲ್ಲದೆ, ನಿಮ್ಮೊಳಗೆ ಯಾರಲ್ಲಿ ಯ, ಹೀನತೆಯುಂಟೆಂದಲ್ಲ. ನಚ್ಚಿನ ನಂಟರೆ, ಎಲ್ಲರೂ ಇದಿರಿಗೆ ಬನ್ನಿರಿ, ಎಣಿಸಿದ ಮಾತುಗಳೆಲ್ಲವನ್ನೂ ಆಡಿದೆನು. ಕಾಲನು, ರಥವನ್ನು ನೂಕುತ್ತಿರುವುದರಿಂದ, ನಿಮ್ಮ ಮೈ, ನನ್ನ ಕೈಗೆ ನಿಲುಕುವುದಿಲ್ಲ. ನಿಮ್ಮನ್ನು, ಕಣ್ಣು ದಣಿವಂತೆ ನೋಡಿ, ಕೈದಣಿವಂತೆ ಹರಸ ಬೇಕೆಂಬ, ಒಂದೇ ಒಂದು ಎಣಿಕೆ ಬಾಕಿಯಾಗಿದೆ. [ ಅಷ್ಟರಲ್ಲಿ, ಎಲ್ಲ ರೂ ಮುಂದೆ ಬಂದರು, ಪಶುಪಕ್ಷಿಗಳು, ಸ್ವರಯುಕ್ತ ವಾದ ಸಾಮಗಾನಕ್ಕೆ ಆರಂಭಿಸಿದುವು. ಇನ್ನೊಂದೆಡೆ, ಜನಜಂಗುಳಿ, ಆರ್ಯನ ಆತ್ಮಕ್ಕೆ ಹಿತವಾಗಲೆಂದು, ಜಪಿಸಹತ್ತಿತು. ತೇಜಸ್ವಿ, ಹಿರಿಯನ ಅಪ್ಪಣೆಗೆ ಅನು ವಾಗಿ, ಎಲ್ಲರಿಗೂ ಸನ್ಮಾರ್ಗಬೋಧನಮಾಡತೊಗಿದನು, ಸದಾಗತಿ, ಆರ್ಯನಿಗೆ ತನ್ನ ಬೀಸಣಿಗೆಯೆತ್ತಿದನು. ಜಲಧರನು, ಬಿಳಿಬಟ್ಟೆಯುಟ್ಟು, ಮೇಲುಗಡೆ ನಿಂತು ೧, ಜೀವನ ನೀರು, ಜೀವನೋಪಾಯ.