ಪುಟ:ಹಗಲಿರುಳು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ಮೇಲುಕಾಸನ್ನು ಬಲಿದನು, ಆಗ, ವೇದಪಾರಾಯಣದ, ಸಂಕಜಾಗಟೆಯ, ಜತಿ ಜೊತೆಗೂಡಿದ ಹಾಡಿನ ಸವಿದನಿ, ಪಾಕದ ಪಾನಕದ ಬಿಂದುಗಳಂತೆ, ಒಂದು ಒಂದರಲ್ಲಿ ಒಂದಾಗಿ ಶ್ರವಣಮುಖಕ್ಕೆ ಹರಿಯುತ್ತಿತ್ತು. ಹೆಚ್ಚೇನು, ಪ್ರತಿಯೊಬ್ಬ ರಲ್ಲಿ ಯೂ, ದೈವೀಭಾವನೆಯ ಮೂರ್ತಿ ಮನೆಮಾಡಿತ್ತು, ಆರ್ಯನು, ಎಲ್ಲ ರನ್ನೂ ಮನಮುಟ್ಟಿ ನೋಡಿ, ಮೇಲೆ ಕಣ್ಣಿಟ್ಟು]- ಜಲಧರನೆ, ಅದೋ, ದ್ವಿಜಸಮೂಹವು, ನನ್ನನ್ನು ನೋಡಲೆಂದು ಕಣ್ಣೆರೆದು ನಿಲುಕುತ್ತಿದೆ. ನೀನು ಅಡ್ಡವಾಗಿರುವುದರಿಂದ, ಅವರಿಗೆ, ಆಶಾಭಂಗವಾಗುತ್ತಿದೆ. ಜಾತ್ರೆ ಸಂದಣಿಯಲ್ಲಿ, ಹುಡುಗರ ಕಣ್ಣಿಗೆ ಪರದೆಯಾಗುವ ಕೆಲವು ಚೌವನಿಗರ ನಡತೆಯಂತೆಯೆ, ಇದಾಗುವುದಲ್ಲವೆ? ಜಲಧರ: - ಆರ್ಯ, ಇವರೆಲ್ಲ ರೂ, ನಮ್ಮ ಒಳಗಿದ್ದು ಹೊರಗೋಡಿದ ಆ ನಕ್ಷತ್ರ ಪತಿಯ ಬೇಹಿನವರು, ದ್ವಿಜವೇಷಧಾರಿಗಳಾದ ಮಾತ್ರಕ್ಕೆ, ಈ ನೀಚನಕ್ಷತ ಗಳಿಗೆ ಎಡೆಗೊಡುವುದೆಂದರೆ, ಮನೆಯಲ್ಲಿ ಮಾರಿಯನ್ನು ಮನ್ನಿಸಿದಂತೆಯೆ. ಕಿರುತೂತಾದರೂ, ಮುಚ್ಚದಿದ್ದರೆ, ಹಡಗನ್ನೆ ಮುಳುಗಿಸುವುದಲ್ಲವೆ ? ಆರ್ಯ:- ಅದು ಹೇಗೂ ಇರಲಿ, ಜನರು ದೈವಭಕ್ತಿಪೂರ್ವಕವಾಗಿ ಆರೋಗ್ಯ ವನ್ನು ಕಾಪಾಡುತ್ತಿದ್ದರೆ, ಹೊರಗಿನ ರೋಗದ ಮಾರಿ ಹೊರಗೇ ಆಗುವುದು. ಹಾಗೆಯೆ, ನಾವೂ ಮನಶ್ಯಕ್ತಿಯನ್ನು ಬಲಿದರೆ, ಅವರಿಂದೇನೂ ಸಾಗದು. ನೀರು, ಮಣ್ಣನ್ನು ಕರಗಿಸಬಲ್ಲುದಾದರೂ, ಬಂಡೆಗೆ ಬಿದ್ದರೆ ಭಿನ್ನವಿಚ್ಛಿನ್ನವಾಗಿ ಚದರುವುದು, ಅವರವರ ಪಾಪಕ್ಕೆ ಅವರವರೇ ಹೊಣೆ, ಅದರಿಂದ ನಮಗೇನು? ನೋಡಬೇಕಾದರೆ, ಅವರೂ ನೋಡಿಕೊಳ್ಳಲಿ. [ಹಿರಿಯನ ಮಾತನ್ನು ಮೀರಬಾರದೆಂದು, ಸದಾಗತಿ ಸನ್ನೆಯ ಕೈಯನ್ನು ಬೀಸಿದನು. ಅದಕ್ಕೊಪ್ಪಿ, ಜಲಧರನೂ ಎಡೆಬಿಟ್ಟು ನಿಂತನು. ಆದರೇನು ? ಅಲ್ಪರಿಗೆ ಕೃತಜ್ಞತೆಯುಂಟೆ? ಆ ನಕ್ಷತ್ರಗಳು, ಆರ್ಯನ ಇಳಿಹೊತ್ತನ್ನು ಕಾಯುತ್ತ, ಮೆಲ್ಲ ಮೆಲ್ಲನೆ ಮುಗುಳುನಗತೊಡಗಿದುವು, ಸಂಜೆ ಮಲ್ಲಿಗೆ ನೈದಿಲೆಗಳೂ, ನಕ್ಷತ್ರ ಗಳೊಡನೆ ಸೈಗುಟ್ಟಿ ನಗತೊಡಗಿದುವು. ದಾರಿಗುರಿಗಳು ಎಂಥವಾದರೂ, ದಾರಿ ಹೋಕರು ಇರುತ್ತಾರೆಯಲ್ಲವೆ? ಹಣ್ಣೆಲೆ ಬೀಳುವಾಗ ಹಸುರೆಲೆ ನಗುವುದಂತೆ.] ೧, ದ್ವಿಜ = ನಕ್ಷತ್ರ, ಬ್ರಾಹ್ಮಣ,