ಪುಟ:ಹಗಲಿರುಳು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘ ಕನ್ನಡ ಕೋಗಿಲೆ, ಎಪ್ರಿಲ್ ೧೯೧೮, ಆರ್ಯ:- ಸತ್ಯಮೇವಜಯತೆ' ಎಂಬಂತೆ, ಆ ಸತ್ಯಮಾರ್ಗಕ್ಕೆ, ಯಾವ ಅಡ್ಡಿ ಯೂ ಬರಲಾರದು. ಇದು ಕೇಡು, ಇದು ಪಾಡು' ಎಂಬುದು ಹೊಳೆದು ಕಾಣಬೇಕೆಂದು, ಪರಮಾತ್ಮನ ಎಣಿಕೆ. ಬಿದ್ದರಲ್ಲ ವೆ, ಬೇನೆಯ ಗೊತ್ತು? ಆ ನಮ್ಮ ಹಿತಕ್ಕಾಗಿಯೆ, ಆ ಕಾರಿನ ಕಾಲುವೆಗಳು, ಪಾಡಿನ ನಾಡಿನಲ್ಲಿ ಯ ಹರಿದಾಡುವುದೆಂದು ತಿಳಿಯಬೇಕು, ಸತ್ಯದ ಬಂಗಾರಕ್ಕೂ, ಸುಳ್ಳಿನ ಕಿಲುಬು ಹಿಡಿಯಬಹುದು. ಆದರೆ, ಕಬ್ಬಿಣಕ್ಕೆ ಹಿಡಿದ ಮಣ್ಣಿಗಿದ್ದಂತೆ, ಕೆಡಿಸುವ ಶಕ್ತಿ, ಆ ಸುವರ್ಣದ ಕಿಲುಬಿಗಿಲ್ಲ, ಒಮ್ಮೆ ಅಡಗಿಸುವುದಷ್ಟೆ, ಅದರ ಗದ್ದಲವು, ಆ ಕಬ್ಬಿಣದಂತಿರದೆ ಬಂಗಾರದಂತಿರುವುದು ಮಾತ್ರ ನಿಮ್ಮ ನೀತಿ, ಹುಂ, ಇನ್ನು, ಕಣ್ಣವಿಂಚಿಗೂ ಎಡೆ ಇಲ್ಲ. ಇದೊ, ಬೇರೆಬೇರೆಯಾಗಿ ನಿಮ್ಮೆಲ್ಲರ ತಲೆಯಲ್ಲೂ , ನನ್ನ ಕೈಯ ಹರಕೆ, ಈಗಲೆ, ನಿಮ್ಮ ಸಮಾಜಕ್ಕೆ, ಕೈಯನ್ನೂ ಮುಗಿಯುತ್ತೇನೆ. ಯಾಕೆಂದರೆ, ನೀವು, ಒಬ್ಬೊಬ್ಬರೂ ನನಗೆ ಕಿರಿಯರಾದರೂ, ಪಂಗಡವು ಕಿರಿದಲ್ಲ. ಹತ್ತಿದ್ದಲ್ಲಿ ಮುತ್ತುಂಟು' ಎಂಬುದು ಇಂದಿನ ಮಾತು. ಈ ದೀರ್ಘಕಾಲವಿಯೋಗದ ಫಲೋಡಯವಾಗುವಂತೆ ಅನುಗ್ರಹಿಸಿರಿ, ಹೆಚ್ಚೇನು ? “ಸರ್ವಜನಾಸ್ಸು ಖಿ ನೋಭವಂತು' [ತೆಜಸ್ವಿ ಮೊದಲಾದವರು ತಥಾಸ್ತು' ಎನ್ನುವಷ್ಟರಲ್ಲಿ ಕಾಲನ ರಥವು ಮರೆಯಾಯಿತು, ಆದರೂ, ಆರ್ಯನು, ಕೈಯನ್ನೆ ತಿ, ಸನ್ನೆಯಿಂದ ಸನ್ಮಾರ್ಗವನ್ನು ತೋರುತ್ತಿದ್ದ ನು. (ಮೈಯಳಿದರೂ ಕೈಯುಳಿವುದು' ಎಂಬ ಮಾತು ನಮ್ಮ ಆರ್ಯರಿಂದಾಗಿ, ಬಳಕೆಗೆ ಬಂತು. ಅದರಿಂದಲೆ, (ಅದ್ವ ವಾ ಮರಣಮಸ್ತು ಯುಗಾಂತರೇವಾ 1 ನ್ಯಾಯಾತ್ವಥಃ ಪ್ರವಿಚಲಂತಿ ಪದಂ ನಧೀರಾಃ' -ಎಂಬುದು ಆ ಹಿರಿಯರ ಮಂತ್ರವಾಗಿದೆ. ವಿಂದಮೇಲೆ, ಆ ಆರ್ಯಸಮುದಾಯಕ್ಕೆಲ್ಲ ಮೂಲಪುರುಷನಾದ ಆರ್ಯನ ಎಣಿಕೆಯನ್ನು ಒರೆದು ನೋಡುವುದೇಕೆ ? ಆದರೂ, ಈಗಿನ ಪ್ರತ್ಯಕ್ಷಪ್ರಿಯವಾದ ಲೋಕಕ್ಕೆ, ಎಲ್ಲವೂ ತಾನಾಗಿಯೇ ಕಾಣುವುದೋ ಏನೋ ? ಆಮೇಲೆ, ಮಂತ್ರತಂತ್ರಾತ್ಮಕವಾದ ತರ್ಪಣಾದಿಗಳು ನೆರವೇರಿದುವು. ಆ ತರ್ಪಣಾದಿಗಳ ಶಕ್ತಿಗಳೆಲ್ಲ ವೂ, ಉದ್ದೇಶಸಾಧನಕ್ಕಾಗಿ, ಆರ್ಯನನ್ನು


-- -- -

+ * -- -- ~ ~ ~.~

  • ಧೀರರು ತಮಗೆ ಈಗಲೆ ಮರಣಬರಲಿ, ಇಲ್ಲವೆ ಯುಗಾಂತರದಲ್ಲಿ ಬರಲಿ, ನ್ಯಾಯಮಾರ್ಗವನ್ನು

ಬರುವದಿಲ್ಲ.