ಪುಟ:ಹಗಲಿರುಳು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ಮರೆಯಾಗಿ, ಮರದ ಅಡಿಯಲ್ಲಿ ವಿಶ್ರಮಿಸುತ್ತ, ನೀಟೆಲೆಗಳಲ್ಲಿ ಕರೆ ಗಣ್ಣಿಕ್ಕಿ, ಆ ಅಜ್ಞಾನದ ಕತ್ತಲೆ, ಹಾದಿಬೀದಿಗಳಲ್ಲಿ ಯೂ, ನಾಡುಬೀಡು ಗಳಲ್ಲಿ ಯ, ಮೆಲ್ಲ ಮೆಲ್ಲನೆ, ತನ್ನ ಕರಿತಲೆಯನ್ನು ಎತ್ತಿ, ತನ್ನ ಅಕ್ಕ ನಾದ ನಿಶಾದೇವಿಯೊಡನೆ ಸೇರಿತು, ಕಂಡಕಂಡವರ ಕಣ್ಣುಗಟ್ಟಿ ದಾರಿ ತಪ್ಪಿಸತೊಡಗಿತು. ಅತ್ತ ಕಡೆ ಗತನಾದ ಆರ್ಯನ ಅಪ್ಪಣೆಯಂತ, ವಿಲ್ಲ ರೂ ತೇಜಸ್ವಿಗೆ ಪಟ್ಟಗಟ್ಟಿ, ಅವನು ತೋರಿದ ದಾರಿಯಲ್ಲಿ ಕಾಲಿಡುತ್ತಿ ದ್ದರು. ಆದರೇನು ? ನಾಡಿಗಿಂತ ಕಡೇ ಹೆಚ್ಚಾಗಿರುವಂತೆ, ತಿಳಿವಿನ ಬೆಳಕಿಗಿಂತಲೂ ಗಾಂಪತನದ ಕತ್ತಲೆಯೇ ಅಧಿಕವಾಗಿತ್ತು, ಮುಂದಿನ ಕತ್ತಲೆಯ ಕಾಡನ್ನು ಕಡಿದು, ನಾಡನ್ನಾಗಿಸುವೆನೆಂದು, ತೇಜಸ್ವಿ ಕೈಹಾಕಿ ದರೆ, ಹಿಂದಿನ ನಾಡೂ ಕಾಡಾಗುತ್ತಿತ್ತು, ಕೆಲವು ಸರ್ತಿ ಸದಾಗತಿಯ ಬಿರುಸೂ, ಒಮ್ಮೊಮ್ಮೆ ಜಲಧರನ ಮೇಲಾಳುತನವೂ, ತೇಜಸ್ವಿಯ ಮೋರೆ ಯನ್ನು ಕಪ್ಪು ಮಾಡುತ್ತಿದ್ದುವು, ಇದಕ್ಕೆ, ಕತ್ತಲೆಯ ಭೇದೋಪಾಯವೇ ಕಾರಣವಾಗಿರಬಹುದೊ ಏನೊ? ಏನೂ ಇರಲಿ, ಮೇಲಿನವರ ಅಧಿಕಾರವು ಮಿತಿಮೀರಿದರೆ, ಎಲ್ಲೆಲ್ಲಿಯೂ ಹಾಗೆಯೆ, ಪರರಿಗೆ ಹಕ್ಕುಗಳ ನಿಯಮ ಗಳನ್ನು ಕಲಿಸುವಾಗ, ತಮ್ಮ ಹಕ್ಕುಗಳೆಷ್ಟೆಂಬ ತಿಳಿವು, ಅವರ ಮನಸ್ಸಿನಿಂದ ಜಾರಿಹೋಗುವುದೊ ಏನೊ? ಕಂದ || ನೀರನ್ನೊಂದುಗಡಿಗೆ) ಬೇರೊಂದಕ್ಕರೆಯೆ ಮೊದಲಿನದ) ಬೋಳಾಗಿ | ತೋರುತ ಸಿಡಿಯಲು, ಠಣ್ಣನ ಕೀರುವ ಪರಿ ಕೆಲವು ಬೋಧಕರೊಳಿಹುದಕಟ || ೧ || ಇರಲಿ, 'ನಮಗೆ, ನಮ್ಮ ಆರ್ಯನ ಅಪ್ಪಣೆಯೆ ಹಾಗೆ' ಎಂದು ಸದಾಗತಿ ಮೊದಲಾದ ಆ ಮೇಲಿನವರು ಹೇಳಬಹುದು, ಆದರೆ, ತೇಜಸ್ವಿಯ ಸಬ್ಬೋಧನೆಗೂ ಅಡ್ಡಿ ಬರಬೇಕೆಂದು, ಆರ್ಯನ ಅಪ್ಪಣೆಯುಂಟೆ ? ಮಾಡು ವುದೇನು ? ನನ್ನ ಎತ್ತಿಗೆ ಮೂರು ಕೊಂಬು' ಎಂಬ ಕೆಲವರು, ಪ್ರತಿ ಯೊಂದು ಪಂಗಡದಲ್ಲಿ ಯೂ ತಲೆಯೆತ್ತಿರುತ್ತಾರೆ. ಚಂದವಿದ್ದವನೆ ತಂದೆ? ಎಂಬುದು ಅವರ ಪ್ರಕೃತಿ. ಆಗಲಿ; ಅಂತೂ, ಭೇದೋಪಾಯದಿಂದ, ಕತ್ತಲೆ ಎತ್ತಲೂ ಹಬ್ಬಿತು.