ಪುಟ:ಹಗಲಿರುಳು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಎಪ್ರಿಲ್ ೧೯೧೮, [ಹೀಗೆ ನುಡಿನುಡಿಯುತ್ತ, ಕತ್ತಲೆ, ಬೆಳುದಿಂಗಳ ಎಡೆಯಲ್ಲಿ, ತನ್ನ ಕೈಯನ್ನು ನುಸುಳಿಸಿತು, ಆದರೆ, ಮದುವೆಮಂಟಪದ, ವೇದವಾದ್ಯಘೋಷ ಗಳ, ಎಡೆಯಲ್ಲಿ, ಹೊರಗಿನ ಹೊಲೆಯರ ಚೀರಾಟವು ಕೇಳದಂತೆ, ಕತ್ತಲೆಯ ಸನ್ನಿ ವ್ಯಕ್ತವಾಗಲಿಲ್ಲ. ಆದರೂ, ಆಸನ್ನೆಯ ಕೈ ಮೇಲೇರಿ, ಬೆಳುದಿಂಗ ಬೆಂಬುದು, ಬಿಳಿಬಣ್ಣವಳಿದು, ಕತ್ತಲೆಯ ಎಣ್ಣೆ ಬಣ್ಣಕ್ಕೆ ಬಂತು. ಅದರಿಂದಲೆ, ಈಗಲೂ ಬೆಳುದಿಂಗಳಲ್ಲಿ, ಯಾರಾದರೂ ಮಾರೆರಡುಮಾರು ದೂರದಲ್ಲಿದ್ದರೆ, ನಡುವೆಯೊಂದು ಪರದೆಯಂತೆ ಮಸುಕುಬಣ್ಣವು ವಿಸ್ತರಿಸಿ, ಪರಿಚಿತನನ್ನಾದರೂ ಗುರುತುಹಿಡಿಯಲಾಗುವುದಿಲ್ಲ, ಅದರಿಂದಲೆ, ಕತ್ತಲೆ, ಹೊರಹೊರಗೆ ಹೋಗಿ ದ್ದರೂ, ಒಳಗೊಳಗೆ ಆ ನಕ್ಷತ್ರಪತಿಯ ಪ್ರೇಮಕ್ಕೆ ಪಾತ್ರವಾಗಿದೆಯೆಂದೂ, ಆ ಪ್ರೇಮವು ಹೃದಯದಲ್ಲಿ ಬೇರೂರಿರುವುದರಿಂದಲೆ, ನಕ್ಷತ್ರಪತಿಯ ಎದೆ ಯಲ್ಲಿ, ಕತ್ತಲೆಯ ಕಳಂಕವು ಈಗಲೂ ಕಾಣಬರುವುದೆಂದೂ ವರಕವಿಗಳ ಹೇಳಿಕೆ. ಅದನ್ನು ನಂಬಲೇಬೇಕು, ಯಾಕೆಂದರೆ ಚೌಪದಿ || ಮರೆಯುವಾ ಕಾವ್ಯವೆಂದೆಂಬ ಯಂತ್ರದಲಿ | ತರತರದ ಸತ್ಯ ಮಿಥ್ಯಗಳನಿಕ್ಕುತಲಿ | ಸರಸಸತ್ಯದ ಸಾರವನ್ನೆ ಪಡೆಯುವರು | ವರಕವಿಗಳಂದವನು ಪರಿಕಿಸುವುದೆಂತು ? ಆದಿರಲಿ, ನಕ್ಷತ್ರಪತಿಯಲ್ಲಿ, ತನಗೆ ಎಡೆಯುಂಟೆಂದು ತಿಳಿದೇ, ಕತ್ತಲೆ, ಅವನ ಬೆಳಕಿನ ಬಟ್ಟೆಯಲ್ಲಿ, ತನ್ನ ಕಪ್ಪು ದಾರದ ಸೂಜಿಯಿಂದ ನುಲಿಯು ತಿರುವುದೆಂದರೆ ಹೆಚ್ಚಾಗದು. ಈತರದ ಕುಯುಕ್ತಿಗೆ ಎಡೆಗೊಡುವುದು ಯಾರಿಗೂ-ಅದರಲ್ಲಿಯೂ ರಾಯರಿಗೆ-ಎಂತೂ ಯುಕ್ತವಲ್ಲ. ಅರಸು ಕೆಟ್ಟರೆ ಊರೇ ಕೆಡುವುದಲ್ಲವೆ? ಒಬ್ಬ ವ್ಯಕ್ತಿ, ಎಷ್ಟು ವಿದ್ಯಾವಂತ ನಾದರೂ, ಅವನ ಮನಸ್ಕ ವಿದ್ಯಾವಂತವಾಗುವುದೆಂದು ಹೇಳಲಾಗುವುದಿಲ್ಲ. ತಾನು ವಿದ್ಯಾಭ್ಯಾಸಮಾಡುವ ಬಾಲ್ಯದಲ್ಲಿ, ಮನಸ್ಸನ್ನೂ ಸನ್ಮಾರ್ಗಕ್ಕೆ ತಿರುಗಿಸಿಕೊಳ್ಳಬೇಕಲ್ಲದೆ, ಆ ಮೇಲೆ ಸಾಧ್ಯವಲ್ಲ. ಅದರಿಂದಲೆ, ಅಂಥ ವರು, ಹೊರಗಿಂದ ಹೊರಗೆ ಲೋಕೋದ್ಧಾರತತ್ವವೆಂಬ ಎತ್ತರದ ಉಪ್ಪರಿಗೆಗೆ ಏರಿದರೂ, ಒಳಗಿಂದೊಳಗೆ, ಘಾತುಕವಾದ ಸ್ವಾರ್ಥದ ಕಪ್ಪಿನ ಉಗ್ರಾಣಕ್ಕೆ ಹೊಕ್ಕುಬಿಡುವರು. ] |