ಪುಟ:ಹಗಲಿರುಳು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ೧೭ ಜಜ -------- -- - ", ", " ನಕ್ಷತ್ರಪತಿ:- ನನ್ನ ನಚ್ಚಿನ ನಂಟರಾದ ನಕ್ಷತ್ರಗಳೆ, ಹೇಗಾದರೂ, ಸದ್ಯಕ್ಕೆ, ಆ ಪರಂತಪನಾದ ಆರ್ಯನ ಪೀಡೆ ಅಳಿಯಿತು, ಆದರೆ, ಅದೊಂದು ತೃಪ್ತಿ ಕರವಲ್ಲ. ಅಪಥ್ಯದಿಂದ, ವಾಸಿಯಾದ ರೋಗವು ಪುನಃ ನರಗಳಲ್ಲಿ ತಲೆ ಯೆತ್ತು ವಂತೆ, ಜನರು ನಮ್ಮಲ್ಲಿ ವಿಷಮದೃಷ್ಟಿಯನ್ನಿಟ್ಟರೆ, ಆರ್ಯಮತವು ಇನ್ನೊಮ್ಮೆ ಹಬ್ಬಿ, ಇಡಿ ಲೋಕವನ್ನೆ ಹುರಿಯೆಬ್ಬಿಸಿಬಿಡುವುದು, ಆ ಅಪಥ್ಯದ ತಿನಿಸಿನಂತಿರುವ ತೇಜಸ್ವಿ, ಅದೊ, ಊರಲ್ಲಿ ಎಲ್ಲರ ನೋಟಕ್ಕೂ ಕೈಗೂ ಬೇಕಾದವನಾಗಿದ್ದಾನೆ. ಅವನು ಅಲ್ಪನು, ಲೋಕವು ತುಂಬ ದುರ್ಬಲ ವಾಗಿದೆ' ಎಂದೆಣಿಸಬೇಡಿರಿ. ಸೊನ್ನೆಗಳೆಂದರೆ, ಟೊಳ್ಳುಗಳಾದರೂ, ಅವುಗಳ ಆಧಾರದಿಂದ ನಿಂತ ಒಂದು, ಸಾವಿರಲಕ್ಷಕೋಟಿಸಂಖ್ಯೆಗಳನ್ನು ಹಬ್ಬಿಸು ವುದೆಂಬ ಹಿರಿಯ ಹೇಳಿಕೆ ಪ್ರತ್ಯಕ್ಷ ಸಿದ್ದವು, ಅದರಿಂದ ಲೋಕವನ್ನು, ನಮ್ಮ ಪಕ್ಷಕ್ಕೆ ಎಳೆಯಬೇಕಾದರೆ, ಮೊದಲು ಆ ತೇಜಸ್ವಿಯನ್ನು ನಾಶಿಸ ಬೇಕು, ಆ ಮೇಲೆ, ಕಡಿಯಣಬಿಗಿದ ಹುಚ್ಚುಗುದುರೆಯಂತೆ, ಲೋಕವು ನಮ್ಮ ಅಂಕೆಯಲ್ಲಿ ನಿಲ್ಲುವುದು. ಆದರೆ, ಆ ಲೌಕಿಕರಿಗೆ, ದೇಶದಲ್ಲಿ ಯ ಅರಸನಲ್ಲಿಯೂ ಅಪಾರವಾದ ಭಕ್ತಿ, ಅವರ ಆ ಭಕ್ತಿಯ ಬೇರನ್ನು, ಕಿತ್ತು ಬಿಡುವುದು ಸುಲಭವಲ್ಲ. ಅವರು, ಊರುದೊರೆಗಳಿಗಾಗಿ, ತಮ್ಮ ಮೆಯ್ಯನ್ನೆ ಒಪ್ಪಿಸುವುದುಂಟು. ಅದರಿಂದಲ್ಲ ವೆ, ಜ್ವಾಲಾಮುಖಿಪ್ರದೇಶಗಳ ಲ್ಲಾದರೂ, (ಇದು ನಮ್ಮ ಹುಟ್ಟೂರು' ಎಂಬ ಕುರುಡುನಂಬಿಕೆಯಿಟ್ಟು, ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದು, ಹಲವರು ಹಾಳಾಗುವುದು? ಆದರೂ, ಅವರ ದೃಢವತವೆಂಬುದು ಶ್ಲಾ ಫ್ಯವೆ. ಆದರೆ, ಅದು, ವಿಧವೆಯ ಸೌಂದರ್ಯದಂತೆ, ಬರಿದಾಗುವುದೆಂಬುದು ಶೋಚನೀಯವು, ಅವರನ್ನು, ಚತುರೋಪಾಯಗಳಿಂದ, ಮೆಲ್ಲನೆ ನಮ್ಮೆಡೆಗೆ ಎಳೆದುಕೊಂಡರೆ, ಅವರ ಮನಶ್ವ ಕ್ರಿಯನ್ನು ತಕ್ಕಡೆಗಳಲ್ಲಿ ತಕ್ಕಂತೆ ಉಪಯೋಗಿಸಿ, ನಮ್ಮ ಗುರಿ ಹಿಡಿಯಬಹುದು, ವೈರಿಯ ಕೈದುವಾದರೂ, ಸೆಳೆದು ನಮ್ಮ ಕೈಯಲ್ಲಾದರೆ, ಅವನ ಎದೆಯನ್ನೇ ಭೇದಿಸುವುದಲ್ಲವೆ ? ಗುರು:- ರಾಜನೆ, ನಿನ್ನ ಮಾತೇ ಮಣಿಯೆಂಬುದರಲ್ಲಿ ಸಂದೇಹವಿಲ್ಲ, ನಮ್ಮ ಪ್ರಯತ್ನವಾದರೂ, ಅದರಂತೆಯೆ ಇದೆ. ಆದರೇನು? ತೇಜಸ್ವಿಯ ಮುಂದಾ