ಪುಟ:ಹಗಲಿರುಳು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಕನ್ನಡ ಕೂಗಿಲಿ, ಮೇ ೧೯೧೮, ಳುತನವು ಲೋಕದಲ್ಲಿ ಬಲವಾಗಿದೆ. ಅವನ ಧ್ವಜವೆ, ಎಲ್ಲೆಲ್ಲಿ ಯ ಸ್ಥಾಪಿತವಾಗಿದೆ. ದಾರಿಹೋಕರಿಗೂ, ಅವನ ಒಂದು ಕೈದೀಪವಂತೆ. ಅದೆ ಆರ್ಯಮತಾಭಿಮಾನದ ಲಕ್ಷಣವಂತೆ, ನಮ್ಮ ನಕ್ಷತ್ರಸಮೂಹವು, ಮುತ್ತು ವಜ್ರಗಳಂತೆ ತಳತಳಿಸುತ್ತಿದ್ದರೂ, ಅದು ಅವರ ದಾರಿಯನ್ನು ಪ್ರಕಾಶಪಡಿಸುವು ದಿಲ್ಲವಂತೆ ರಾಣಿರಾತ್ರಿಯ, ಮೈದುನಿಕತ್ತಲೆಯ, ಹಿತಬೋಧೆಗಳೆಲ್ಲವನ್ನೂ, ನೀಚರು ನಿರಾಕರಿಸಿದರು. ಅದಂತಿರಲಿ, ನೀನು ಹೀಗೆ ಪ್ರಕಾಶಿಸುತ್ತ ಸರ್ವಸಮವಾಗಿ, ಲೋಕವನ್ನು ಬೆಳಗುತ್ತಿರುವೆಯಷ್ಟೆ! ಆದರೂ, ಅದೇ ನೋಡು! ಹಲವರು ಆಉರಿದೀಪಗಳನ್ನೆ ಹಿಡಿದುಕೊಂಡು ನಡೆಯುತ್ತಾರೆ. ಇದಕ್ಕಿಂತಲೂ ರಾಜದ್ರೋಹವಿನ್ನೇನು? ನಕ್ಷತುಪತಿ:- ಇರಲಿ, ಆದಿಯಲ್ಲಿ, ಯಾವ ಜನಾಂಗದಲ್ಲಿ ಯ, ಅಂಥ ಆಗ್ರಹ ವಿರುವುದು ಪ್ರಕೃತಿ, ಕಾಲಗಳೆದಂತೆ, ವಿಷಯಜ್ಞಾನವಾಗಿ ದಾರಿಗೆ ಬರ ಬೇಕು, ಒಬ್ಬ ವಿದ್ಯಾರ್ಥಿ ವಿದ್ಯಾಭ್ಯಾಸವೆಂಬ ಮದ್ದನ್ನು ಸಂಪೂರ್ಣವಾಗಿ ಸೇವಿಸಿದರೂ, ಅವನ ದುರ್ಗುಣರೋಗದ ಅಶಕ್ಕಿ ವಾಸಿಯಾಗದು. ಅದು ಕಾಲಕ್ರಮದಿಂದಲೆ ಗುಣವಾಗಬೇಕು. ಮೊಳೆವಾಗಲೆ ಮೊಗ್ಗೆ ಹಞ್ಞವುದೆ? ಮೊದಲು, ನಯಭಯಗಳಿಂದ, ಅವರಿಗೆ ತಿಳಿಸಬೇಕು, ಸಾಕಾಗದಿದ್ದರೆ ಅವರ ಒಳಗೊಳಗೆ ಭೇದದ ಬಿತ್ತನ್ನು ಬಿತ್ತಬೇಕು. ಅದೂ ಗುರಿಮುಟ್ಟ ದಿದ್ದರೆ - ಹಾವು ಸಾಯಬಾರದು, ಕೋಲು ಮುರಿಯಬಾರದು' ಎಂಬಂತೆ ಶಿಕ್ಷೆಯ ಬಿಸಿಮುಟ್ಟಿಸಬೇಕು. ಕಡೆಗೆ, ಕುಣಿಯಲ್ಲಿ ಬಿದ್ದ ಆನೆಯಂತೆ ತಾವೇ ಪಳಗುವರು. ಕವಿ:- ನಿನ್ನ ಈ ದೀರ್ಘಾಲೋಚನೆ, ನಮಗೂ ಸಮ್ಮತವೆ. ನಾವಾದರೂ, ಈ ವರೆಗೆ ಸುಮ್ಮನಿರಲಿಲ್ಲ. ಆ ತೇಜಸ್ವಿಯ ಒಡನಾಡಿಯಾದ ಸದಾಗತಿಯನ್ನು ಕುರಿತು, ಬಹಳವಾಗಿ ಹೀಗೆ ಬೋಧಿಸಿದೆವು. ಆರ್ಯನ ಅನುಚರನಾಗಿ, ಬೆವರುಬಿಚ್ಚಿಸಿಕೊಂಡು ಕೆಲಸಮಾಡುವುದು ಬಹಳ ಕಷ್ಟ, ನೋಡು, ನಿನ್ನ ಅಂದಿನ ಮೈಯ್ಯ ಸೂರಿನ ಉಗುರುಬಿಸಿ ಇನ್ನೂ ಆರಲಿಲ್ಲ. ನನ್ನೊಡೆಯ ನೆಳಗಾದರೆ, ಎಷ್ಟು ತಂಪಾಗಿ ಬಾಳಬಹುದು! ಇದಕ್ಕೆ ನಾವೆ ದೃಷ್ಟಾಂತವು. * ಕವಿ- ಶುಕ್ರ, ಕವಿ.