ಪುಟ:ಹಗಲಿರುಳು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕನ್ನಡ ಕೋಗಿಲೆ, ಮೇ ೧೯೧೮ , - -- ----------- -- -- --------- ಸರುವುದಲ್ಲದೆ, ಸಮುದ್ರದ ತಿವಿತಿಮಿಂಗಿಲಗಳೂ ರನ್ನಹೊನ್ನುಗಳೂ, ಆ ಹಡಗದಲ್ಲಿ ನುಸುಳುತ್ತವೆಯೆ? ಸಫಲಪ್ರಯತ್ನಗಳೆಲ್ಲ ವೂ ಮೆಲ್ಲ ಮೆಲ್ಲ ನೇ। ಮೇಲೇರುವವು. ಬಿತ್ತು, ಮರವಾಗಿ, ಹಣ್ಣಾಗಿ ತುತ್ತಾಗುವುದಲ್ಲವೆ? ಆದರೆ, (ಒಬ್ಬ ನಕ್ಷತ್ರದೂತನು ಒಳಹೊಕ್ಕು ನಮಸ್ಕರಿಸಿ) ದೂತ:- ಬುದ್ದಿ, ಸದಾಗತಿಯ ಜಲಧರನೂ ಬಂದು ಸಮಯನಿರೀಕ್ಷೆಯಲ್ಲಿ ದ್ದಾರೆ. ನಕ್ಷತ್ರಪತಿ:- ಅ:! ಸುಶಕುನವಿದು. ಹುಡುಕುವ ಮದ್ದಿನ ಬಳ್ಳಿಯೇ ಕಾಲಿಗೆ ಸುತ್ತಿತು. ಆನುಕೂಲ್ಯವಾಗಲಿ ಪ್ರಾತಿಕೂಲ್ಯವಾಗ, ಬರುವುದೂ ಹೋಗು ವುದೂ ಕಪೋತಪಕ್ಷಿಗಳ ಒಡ್ಡಿನಂತೆ ಒಬ್ಬೊಟ್ಟಿಗೆ ಎಂದರೆ, ಮುಂಗಣ್ಣನೆ ಡನೆ ಮುನ್ನೂರು. ಆಗಲಿ, ಅವರನ್ನು, ಮನ್ನಣೆಯಿಂದ ಒಳಬರಿಸು. (ಅಪ್ಪಣೆಯೆಂದು ದೂತನು ಹೋಗುವನು. ಸದಾಗತಿ ಜಲಧರರು ಪ್ರವೇಶಿಸಿ ತಕ್ಕಂತೆ ಕುಳಿತುಕೊಳ್ಳುವರು.) ನಕ್ಷತ್ರಪತಿ:- ಪ್ರಿಯರೆ, ನಿಮಗೂ, ನಿಮ್ಮ ಪರಿವಾರಕ್ಕೂ ಸುಖವೆ? ಜಲಧರ:- ಹಿರಿಯರ ದಯದಿಂದ, ಈ ವರೆಗೂ ಹಾಗೆಯೆ, ಆದರೇನು, ನಾವು ಕಾಲಾನುಸಾರಿಗಳು, ರಾಜಾಕಾಲಸ್ಯ ಕಾರಣಂ' ಎಂಬುದು ನಿಯಮವಾ ದುದರಿಂದ, ಇನ್ನು ಮುಂದೆ ಆ ಕಾಲವೂ ನಿನ್ನನ್ನು ಅನುಸರಿಸುವ ಸಂಭವ ವಿದೆ. ಅದರಿಂದ ನಮ್ಮ ಆಗುಹೋಗುಗಳಿಗೆಲ್ಲ ನೀನೇ ಅಡಿಗಟ್ಟಾಗಬೇ ಕಲ್ಲವೆ? ನಕ್ಷತ್ರಪತಿ:- (ಆನಂದದಿಂದ) ಜಾಣತನದ ಮಾತಿದು, ಕೇಳು, ನನ್ನ ಸಹಾ ಯವೇ ಮುಖ್ಯವೆಂದೇನು? ಅದು, ಸಂಕದಂತೆ, ಎರಡು ಕಡೆಯವರೂ ಹೋಗಿಬಂದು ಬಳಕೆಯಲ್ಲಿ ರುವ ಬಂಧುಪ್ರೇಮದ ನಂಬಿಕೆಯನ್ನು ನೆಲೆಗೊಳಿ ಸಬೇಕು, ಆ ಅನ್ನೋನ್ಯಪ್ರೀತಿ ಇಲ್ಲದೆ, ಲೋಕಾಭಿವೃದ್ಧಿ ಕಾರ್ಯವು, ಯಾಕೆ ಒಂದು ಹುಲ್ಲಿನ ಚಲನೆಯಾದರೂ ಸಾಗದು. ಈ ಗುಟ್ಟು ತಿಳಿ ದವರಿಗೊಂದು ಹೊಸತಲ್ಲ. ಆದರೆ, ಈಗಲೂ, ಆ ನಡುಹಗಲೆಂದು ವಾದಿ ಸುವ ಕಡುಮೂರ್ಖರಿಗೆಲ್ಲ ಹೇಗೆ ಗೊತ್ತಾಗಬೇಕು?