ವಿಷಯಕ್ಕೆ ಹೋಗು

ಪುಟ:ಹಗಲಿರುಳು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಗಲಿರುಳು
೨೧

ಜಲಧರ:- ಎಲ್ಲರಿಗೂ ಕ್ರಮಕ್ರಮವಾಗಿಯೇ ಮನವರಿಕೆಯಾಗುವುದು. ಆಗ ಬಿತ್ತಿ, ಈಗ ಹಣ್ಣು ಕೊಯ್ಯಬೇಕೆಂದರೆ, ಹೇಗಾದೀತು? ಆ ಮೂಢತೆ ನಮ್ಮಲ್ಲಿ ಮಾತ್ರವೆಂದಲ್ಲ; ಎಲ್ಲೆಲ್ಲಿಯೂ ಒಂದೇ ರೀತಿ. 'ಮೂಢತೆಯೇ ರೂಢಿಯ ನೆಲೆಗಟ್ಟು' ಎಂಬ ಮಾತೂ, ಅದರಿಂದಲೆ ಹುಟ್ಟಿತು. ಹೊಸಸುಧಾರಣೆ ಮೇಲೆ ಬಂದು ರೂಢವಾಗಬೇಕಾದರೆ, ಆ ಕಾಲಕ್ಕೆ ಸಲ್ಲದ ಹಳೆನಡತೆಗಳ ಮೂಢಭಕ್ತಿ ಎಲ್ಲವೂ ಅಡಿಗೆ ಬೀಳಬೇಕು. ಪ್ರಕೃತಿಹಿತವಾದ ಹೊಸ ಕಟ್ಟೋಣವು, ಲೋಕಕ್ಕೆ ತನ್ನ ತಲೆ ತೋರಿಸಬೇಕಾದರೆ, ತತ್ಕಾಲಕ್ಕೆ ಸಮ್ಮತವಾಗದೆ ವಿಕೃತವಾದ ಹಳೆಮನೆಯ ಕಲ್ಲು ಮಣ್ಣುಗಳೂ, ಕಸಕಡ್ಡಿಗಳೂ ತಳಗಟ್ಟಾಗಬೇಕಾಗುವುದಲ್ಲವೆ? ಇದೊಂದು ಸುಧಾರಣೆಯೆಂದು, ಎಲ್ಲವನ್ನೂ ಬದಲಿಸಬೇಕೆಂದು ಚಲಹಿಡಿದರೆ, ಅದು, ಆ ಮುಂದಾಳುಗಳ ಸ್ವಾಭಿಮಾನಶೂನ್ಯತೆಯನ್ನೂ, ಲೋಕಹಿತವಿಘಾತ, ಕತೆಯನ್ನೂ ಬಯಲುಪಡಿಸಿ, ಮಂಜುಗಡ್ಡೆಯ ಮನೆಯಂತೆ, ಏಳಿಗೆಗೆ ಪ್ರತಿಯಾಗಿ ಬೀಳಿಕೆಯನ್ನೆ ಹೊಂದುವುದು. ಹೇಗೆಂದರೆ,- ಹಳೆಯದೆಲ್ಲವನ್ನೂ ಬಿಟ್ಟರೆ, ನಮ್ಮದೆಂಬುದು ಏನೂ ಇಲ್ಲ ಎಂದಾಯಿತು. ಅದಿಲ್ಲವಾದರೆ, ಆತ್ಮಗೌರವವೂ ಇಲ್ಲ. ಬೇಡವೆಂದರೆ, ಸ್ವಧರ್ಮವಾದ ಕರ್ತವ್ಯವೂ ಇಲ್ಲ. ಆ ಧರ್ಮವನ್ನು ಅಲಕ್ಷಿಸಿದರೆ, ಆತ್ಮವಿಶ್ವಾಸವೂ ಇಲ್ಲದೆ, ತಾನು ತಾನೇ ಅಲ್ಲವೆಂದಾಗುವುದು. ಆದರೆ ಲೋಕವು ಇನ್ನೂ ತಾನುತಾನಾಗಿಯೆ ಇದೆ. ಈ ಮುಂದಾಳು ಮಾತ್ರ ಬೇರೆಯಾಗಿ ಲೋಕವೆಂದರೆ, ಬೀಗದಕೈ ಬಿಸುಟ ಪೆಟ್ಟಿಗೆಯಂತಾದೀತು. ಆ ಕೈಯನ್ನು ಕಳೆವಾಗ, ಬಾಗಿಲು ತೆರೆದಿದ್ದರೆ, ಒಳಗಿನ ಸೊತ್ತು, ಕಂಡವರ ಕೈಗೆ ; ಮುಚ್ಚಿದ್ದರೆ, ಹುಗಿದಿಟ್ಟ ಹಣದಂತೆ, ಕತ್ತಲೆಕೋಣೆಗೆ. ಹಾಗಾದರೆ ಎಲ್ಲವೂ ನಿರರ್ಥಕವಾದೀತು. ಅದರಿಂದ, ಮಾಸಿಹೋದರೂ, ಯೋಗ್ಯವಿದ್ದರೆ, ಆ ಹಳೆಯಪದ್ಧತಿಗಳಿಗೆ, ಒಂದಿಷ್ಟು ಹೊಸಬಣ್ಣಗೊಟ್ಟರಾಯಿತು. ನಿರರ್ಥಕಗಳಾದವುಗಳನ್ನು, ಲೋಕಕ್ಕೆ ತಿಳಿಸಿಯೆ ತೆಗೆದುಹಾಕಬೇಕು. ಉದ್ದು ಉಬ್ಬಿದರೂ ಮದ್ದಳೆಯಾಗದೆಂದು ಬೋಧಿಸಿದರೆ, ಆ ಲೌಕಿಕರೂ ಅಲ್ಲಗಳೆಯಲಿಕ್ಕಿಲ್ಲ. ಅದರಿಂದ ಎಲ್ಲವನ್ನೂ, ಅವರಿಗೆ ನ್ಯಾಯರೀತಿಯಿಂದ ತಿಳಿಸಿ, ಹೊಸಸುಧಾರಣೆಯನ್ನು ತಕ್ಕಂತೆ ಹಬ್ಬಿಸಬೇಕಲ್ಲದೆ, ಕೂಡಲೆ ನೆಲವನ್ನು ಸ್ವರ್ಗಕ್ಕೆ ಏರಿಸಬೇಕೆಂದು ಕೈ ಹಾರಿಸಬಾರದು. ಮೊಗೆದು ಮೀಯಲಿಕ್ಕೆ