ಪುಟ:ಹಗಲಿರುಳು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಕನ್ನಡ ಕೋಗಿಲೆ, ಮೇ ೧೯೧೮. ಎಡೆಯಿರುವಾಗ, ಇಳಿದು ಕಲಕಬಹುದೆ? ಇಲಿ ಹೆಗ್ಗಣಗಳ ಕಾಟಕ್ಕಾಗಿ ಮನೆಗೇ ಬೆಂಕಿಗೊಡಬಾರದೆಂದು ನನ್ನ ಎಣಿಕೆ. ಒಟ್ಟಿಗೆ ಹೇಳುವುದಾದರೆ, ತಂದೆಯ ರಕ್ತವೆ ಮಕ್ಕಳಾಗಿ, ಕಾಲಾನುಸಾರವಾಗಿ, ಧರ್ಮವಿರುದ್ಧವಲ್ಲದ ಕೆಲವು ರೀತಿಗಳನ್ನು ಮಾತ್ರವೆ ಬದಲಿಸಿಕೊಳ್ಳುವಂತೆ, ಸುಧಾರಣೆಯೆಂಬುದು, ಹಿಂದಿನದನ್ನೆಲ್ಲ ಕಡಿವುದಾಗಬಾರದು. ಕಡಿದರೆ, ಅದು ಧರ್ಮವೊ ಅಧ ರ್ಮವೊ? ಆರ್ಯಮತವಾದರೂ ಇದಕ್ಕೆ ವಿರುದ್ಧವಲ್ಲ, ಇದೆಲ್ಲ ನಿನಗೆ ಗೊತ್ತಿದ್ದ ಸಂಗತಿಯೆ. ಆದರೂ, ಸಂದರ್ಭಾನುಸಾರವಾಗಿ ಹಗ್ಗವು ಹಾವಾಗಿ ತೋರುವುದುಂಟೆಂದು ಸೂಚಿಸಿಕೊಂಡುದಕ್ಕೆ ಕ್ಷಮಿಸಬೇಕು. ಮಂಗಳ:- ಜಲಧರನೆ, ಭೂಮಿಯ ಒಳ್ಳಿತದ ಸಲುವಾಗಿ, ಮಾತುಬಂದುದ ರಿಂದ, ನಾನೀಗ ಎಡೆಯಲ್ಲಿ ಬಾಯಿಹಾಕಬೇಕಾಯಿತು, ಭೂಮಾತೆಯ ಚೊಚ್ಚಲಕೂಸಾದ ಕಾರಣ, ಅವಳ ಏಳಿಗೆಯಲ್ಲಿ ಹೆಚ್ಚಾಗಿ ಆನಂದಪಡುವ ಹಕ್ಕು ನನಗೂ ಇದೆ. ಅದೇ, ನನ್ನ ಮಾಂಗಲ್ಯದ ಪರಮಾವಧಿ. ಆದರೆ, ಆರ್ಯಮತವೂ, ಭೂದೇವಿಯ ಅಭಿವೃದ್ಧಿಯ ಹವಣಿಕೆಯಲ್ಲಿ ಇತ್ತೆಂಬ ನಿನ್ನ ಹೇಳಿಕೆ, ನನಗೆ ಸರ್ವಥಾ ಒಪ್ಪುವುದಿಲ್ಲ. ನಿಮ್ಮ ಆ ಆರ್ಯನ ಕೈಕೆಳಗೆ, ನನ್ನ ತಾಯಿ ಭೂದೇವಿ ಪಟ್ಟ ಕಷ್ಟವೆಂದರೆ, ಹಗೆಗಾರರಿಗೂ ಬೇಡ, ಪಾಪ! ಅವಳ *ಕಾಲೊಣಗಿ ಮರಳಲ್ಲಿ ಹುರಿದುಹೋಯಿತು, ಮಕ್ಕಳ ಜೀವನದ ಸಾಲಿನ ಒರತೆ ಬತ್ತಿತು. ಕೆಂದಳಿರ ನಾಲಗೆ ಆರಿತು, ಬಟ್ಟೆ ಸುಟ್ಟು ಸೀಕರಿಯಾಯಿತು, ನಿನಗಾದರೂ ನಿಗಳದ ಆನೆಯಂತೆ, ಯಾವಾಗಲೂ ಹೊರಗೆ ಬರಲಿಕ್ಕೆ ಅಪ್ಪಣೆ ಇಲ್ಲ, ಅದೇಕೆಂದು ಗೊತ್ತುಂಟಿ? ಬಯಲಿಗೆ ಬಿಟ್ಟರೆ, ಬರಬಂದು ಬಾಯಾರಿದ ಭೂಮಿಯನ್ನು, ದಯಾದ್ರ್ರಹೃದಯನಾದ ನೀನು ಜೀವನವಿತ್ತು ತಣಿಸುವೆಯೆಂದು ಆ ನೀಚಪರಂತಪನಿಗೆ ಮೊದಲೇ ಗೊತ್ತು. ಅದರಿಂದಲೇ ನಿನ್ನನ್ನು ಅಂಕೆಯಲ್ಲಿಟ್ಟುದು. ಈಗ ಯಾವ ಲೋಕವು c ಆರ್ಯಮತ, ಆರ್ಯಮತ' ಎಂದು ತಲೆಬಡಿದುಕೊಳ್ಳುತ್ತಿ ದೆಯೋ, ಅದಕ್ಕೆ ಅಂದು ತಲೆಯೆತ್ತಿ ಇದೆಂಥ ಅನ್ಯಾಯ!” ಎಂದು ಹೇಳುವ ಹಕ್ಕೂ ಇದ್ದಿಲ್ಲ. ನಾನಂತೂ ಎಳೆಮಗುವಾದ ಕಾರಣ, ಸುಟ್ಟು ಅಂಗಾರವಾಗಿ ಹೋದೆನು. ಹೇಗಾದರೂ, ಈಮಾರಾಯನನ್ನು ಸೇರಿ, ---

  • ಕಾಲು= ಕಾಲುವೆ, ವಾದ,