ವಿಷಯಕ್ಕೆ ಹೋಗು

ಪುಟ:ಹಗಲಿರುಳು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಹಗಲಿರುಳು

೨೫

 [ಅದಕ್ಕೆ ನಕ್ಷತ್ರಪತಿ ಸೈಗುಟ್ಟಿ, ಪರಿವಾರದೊಡನೆ ಜಲಧರನ ಮರೆಹೊಕ್ಕನು.. ಮಧ್ಯಸ್ಥರು ಅಡಿದೆಗೆವುದಕ್ಕೆ ಮೊದಲೆ, ಕಣ್ಣು ಕುತ್ತಿದರೂ ಕಾಣದ ಕತ್ತಲೆ ಎತ್ತೆತ್ತಲೂ ಮತ್ತೆ ಮುಸುಕಿ,ವೇಷಧಾರಿಗಳು ಅತ್ತಿತ್ತ ಸರಿವ ಮೊದಲೆ ಬೀಳುವ ಜವನಿಕೆಯಾಯಿತು. ಸೆರೆಸಿಕ್ಕಿದಲ್ಲಿ ಉಳಿಹೊಗಿಸುವುದು ದುಷ್ಟರ ಕಟ್ಟಳೆ.ಜಲಧರನು ತಿರುಗಿ ಲೋಕವನ್ನು ನೋಡಿದನು.ಎಲ್ಲೆಲ್ಲಿಯ ತೇಜಸ್ವಿಯ ಬಾವಟಿಗಂಬಗಳ, ಬೇರೆ ಬೇರೆ ಬೆಳಕಿನ ಪತಾಕೆಗಳೂ, ಕಾರ್ಗತ್ತಲೆಗಣಿಯ ವಣಿಗಳಂತೆ, ಜಳಜಳಿಸುತ್ತಿದ್ದುವು. ಕತ್ತಲೆ ವಿಸ್ತರಿಸಿದಷ್ಟೂ ಸಾರಣೆನೆಲದಲ್ಲಿ ಚೆಲ್ಲಿದ ಜಲಬಿಂದುಗಳಂತೆ, ಆ ದ್ವಜಗಳು ತಳ ತಳಿಸಿ ನೆಲೆನಿಲ್ಲುತ್ತಿದ್ದವು. ಎದುರಾಳುಗಳು, ಸಡಿಲಾಗಿ ಹೊಕ್ಕು ಹೊರಡುತ್ತ ಕೆಳೆಯ೦ತಿದ್ದರೆ, ನಿಷ್ಕಪಟಿಗಳ ಎಣಿಕೆಯ ಬೆಳಕು, ಮರಳಿಗೆ ಬಿದ್ದ ನೀರಿನಂತೆ ಆರಿಹೋಗುವುದು ಸ್ವಭಾವವು. ದೃಢನಿಶ್ಚಯದವರ ಬಗೆ ಬಯಲಾಗಬೇಕಾದರೆ, ವಿರೋಧಿಗಳ ಒತ್ತಾಟವೇ ಬೇಕು. ಇರಲಿ, ಜಲಧರನು, ತನ್ನ ಶಾಂತ ನಾವ ಆಂತರ್ಯನನ್ನು ತಿಳಿಸಿ ಸದಗತಿಯನ್ನು ಲೋಕಕ್ಕೆ ಕಳುಹಿದನು. ಆ ಸದಾಗತಿಯ ಬರುವಿಕೆಯನ್ನು ಹೀಗೆ ಬಣ್ಣಿಸಬಹುದು,

ಕಂದ

ನೊಳಹೊಕ್ಕನು ರಾಜನಿಗೆ ಕತ್ತಲೆಯಿತ್ತಂ

ತಲೆದೊರುತವನ ಬಗೆಯೇ

ಬಲವಾಗಿದೆ, ಲೋಕವೆನ್ನ ನುಡಿಗೊಪ್ಪುವುದೆ?

ಎನ್ನುವ ಸಂದೇಹದ ಚಳಿ

ಯಿಂನಡುಗುತ್ತಾ ವಮಾತನೆತ್ತಲಿ, ನೆಲದಿ

ಮುನ್ನೆಂದು ಶಂಕೆಗೊಳ್ಳು ತ

ತನ್ನಯ ಕೈ ಬಿಸಿ ಮೆಲ್ಲ ಮೆಲ್ಲನೆ ಸುಳಿದಂ

ಸದಾಗತಿ ಲೋಕಕ್ಕಿಳಿದು, ತೇಜಸ್ವಿಯನ್ನು ಬಿಟ್ಟು, ಮೊದಲು ಊರವರ ಕಿವಿಯನ್ನೆ ಊದಬೇಕೆಂದು ಹವಣಿಸಿದನು. ಆದರೆ, ಅವರು ಸದಾಗತಿಯ ಚಳಿಗೆ ಸಂದೇಹಿಸಿ, ಅದನ್ನೆಲ್ಲದೆ, ತೇಜಸ್ವಿಯೆಡೆಗೇ ಹೋದರು, ದೃಢನಿಶ್ಚಯದ ಹಿಂದಾಳುಗಳು, ನಿಷ್ಟರಾದ ಮುಂದಾಳುಗಳ ಕಣ್ಮರೆಯಿಸಿ ಈಚೆಯ ಕಡ್ಡಿಯನ್ನಾದರೂ ಆಚೆಗೆ ಇಡಲು ಸಮ್ಮತಿಸರೆಂಬುದು ಆಶ್ವರ್ಯವಲ್ಲ. ಉಪಾಯವಿಲ್ಲದೆ, ಸದಾ ಗತಿಯ ತೇಜಸ್ವಿಯ ಸಮ್ಮುಖಕ್ಕೇ ಹರಿಯಬೇಕಾಯಿತು.]