ಪುಟ:ಹಗಲಿರುಳು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಮೇ ೧೯೧೮. ----- -- -- - : ... -------- ತೇಜಸ್ಥೆ:- (ಸೆದಾಗತಿಯನ್ನು ಇದಿರ್ಗೊ೦ಡು ತಲೆಯನ್ನೊಲೆಯುತ್ತ) ಪ್ರಿಯನೆ, ಇದೇನು ? ಈಗ ನಿನ್ನ ಮೆಯ್ಯ ಬಗೆಯೇ ಬದಲಾಗಿ ಹೋಗಿದೆ. ಅಲ್ಲಲ್ಲಿ ಅಲೆಯುತ್ತಿರುವುದರಿಂದಲೇ ಹೀಗೆ ಚಳಿ ಹಿಡಿದಿರಬಹುದೆ ? ಸದಾ:-ಉ: ಅದೇನೂ ಇಲ್ಲ. ನನ್ನ ಪ್ರಕೃತಿಯೆ ಹಾಗೆ, ತೇಜp:- ಪ್ರಕೃತಿ, ಹೇಗಾದರೂ ಬದಲಾಗದು. ಆದಂತೆ ತೋರಿದರೆ, ಅದನ್ನು ವಿಕೃತಿಯೆನ್ನಬೇಕು, ಇರಲಿ, ಹೆಚ್ಚಿನ ಸುದ್ದಿ ಏನು ? ಸದಾ:- ಬೇರೇನೂ ಇಲ್ಲ ; ಆದರೆ, ನಮ್ಮ ಜಲಧರನ ಉಪಾಯದಿಂದಾಗಿ, ಈಗ ಹಗೆಗಳು ನಮ್ಮ ಬಗಲಿಗೆ ಬರುವಂತಿದ್ದಾರೆ. ತೇಜಸ್ವಿ - ಆದುಷ್ಟರು ಹೇಗಿದ್ದರೂ ಹಾಗೆಯೆ, ಹರಡಿದರೂ ಕರಡಿಗೆ ಮುಚ್ಚಿದರೂ ನಾತವೆಂಬುದು ನಾತವೆ, ಆ ವಿಷಯದಲ್ಲಿ ದುಷ್ಟಂ ದೂರೇಣ ವರ್ಜಯೇತ್' ಎಂಬುದೇ ಅಚ್ಚು ಗುಟ್ಟು. ಸದಾಗತಿ:- ನೋಡು, ಇಂಥ ಬಿರುಸು ಯಾರಿಗೂ ಸಲ್ಲ ದು, ಅವರ ಕಾಲಡಿ ಯಲ್ಲಿ ಸಿಕ್ಕಿಬಿದ್ದಿರುವ ನಮಗಂತೂ, ಅದರ ಮರಿಯ ಬಡಿಯಬಾರದು. ಬಂದಿಯ ಬಾಯಬ್ಬರದಂತೆ, ಈಗಲೂ ನಾವು ಬೊಬ್ಬಿರಿದರೆ ಅ8, ಮೈ ಗೇಣಷ್ಟು, ಮಾತು ಮಾರಷ್ಟು' ಎಂಬ ಮಾತಿಗೆ ತಲೆಬಗ್ಗಿ ಸಬೇಕಾದೀತು. ಮಾತ್ರವಲ್ಲ , ಈಗಿನ ನಿನ್ನ ಅಲಕ್ಷ್ಯಭಾವವೆಂದರೆ ಹಗೆಗಳಲ್ಲಲ್ಲ ; ನಮ್ಮವರ ಹೈಯೆ, ಹೇಗೆಂದರೆ-ಮಾರಾಳುಗಳು ನಮ್ಮ ಬಿರುಸಿಗೆ ಬಗ್ಗುವುದಿಲ್ಲ, ತಂಪಿಗೆ ಹಿಗುವುದಿಲ್ಲ. ಆದರೆ, ಇದರಿಂದ, ಹೇಗಾದರೂ ಹಗೆಗಳನ್ನು ಹಿಂಗಟ್ಟು ಮುಂಗಟ್ಟು ಮುರಿಯಬೇಕೆಂದು ಪ್ರಯತ್ನಿಸುವ ನಮ್ಮವರ ಉತ್ಸಾಹಬೀಜವು, ಸುಡುನೀರೆರೆದಂತೆ ಕರಿಕಾಗುವುದು. ತೇಜಸ್ಥೆ:- ಇದೇನು, ನೀನೀಗ ಹೊಸಬನಾಗಿರುವಂತೆ ತೋರುವುದಲ್ಲ ! ನಮ್ಮ ವರನ್ನು ನಾವು, ಮೊದಲೆ ಹೊಗಳುವುದೆಂದರೆ, ಕಾರ್ಯಸಾಧನೆಯ ಕತ್ತಿಗೆ ಮಣ್ಣು ಹಿಡಿಯಿಸಿದಂತೆಯೆ. ಸ್ತುತಿಸಿದೊಡನೆ, ತನ್ನ ಕೆಲಸಕ್ಕೆ ಮುಗುಳಿ ಇಟ್ಟಾಯಿತೆಂದು ನೆನಸಿ, ಉದ್ಯೋಗದ ಕೈ, ಬೇಡವೆಂದರೂ ಸ್ವಲ್ಪ ಸಡಿಲಾಗುವುದು ಸಾಮಾನ್ಯವಾಗಿ ಪ್ರಕೃತಿ, ಆ ಹೊಗಳಿಕೆ, ಸಫಲವಾದ ಕಾರ್ಯಕ್ಕೆ ಮೇಲುಪುಡಿಯಾದರೆ ಚೆನ್ನಾಗುವುದಲ್ಲದೆ, ಗುಟ್ಟಿನ ಕಾರಣ