ಪುಟ:ಹಗಲಿರುಳು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ೨೭. ಕಲ್ಲ, ಒಪ್ಪವೆಂಬುದು ಬಂಗಾರದ ತೊಡವಿಗೆ ; ಕರಗಿಸುವ ಕೋವೆಗಾಗಲಿ, ಅದರೊಳಗಣ ಹೊನ್ನಿನ ರಸಕ್ಕಾಗಲಿ, ಕೊಡತಿಗೆಗಾಗಲಿ ಅದೊಪ್ಪುವುದೆ ? ಕಾಲಗತಿಯಿಂದ ಆ ಕಾರಣವು ಸಫಲವಾಗದಿದ್ದಲ್ಲಿ, ನೆರೆಮನೆ ದೋಸೆಗೆ ಕಾಯಿಹಾಲು ಹಿಂಡಿದಂತೆ, ಬರಿದಾಗುವುದಲ್ಲದೆ, ಆ ಹೊಗಳಿಕೆಯ ಮೇರೆಗೆ ತೆಗಳಿಕೆ, ತನ್ನ ಬಣ್ಣವನ್ನು ಬಳಿವುದು. “ನಾವೀಗ, ಹಗೆಗಳನ್ನು ಸಂಧಿಗೆ ಒಪ್ಪಿಸಿದ್ದೇವೆ, ಅದರಿಂದ, ಅದೊಂದು ಕಾರ್ಯವು ನೆರವೇರಿತಲ್ಲವೆ ? ಆ ಕಾರ್ಯಕ್ಕೆ ತಕ್ಕ ಸ್ತುತಿಪಾಠವಾದರೂ ಆಗಬೇಡವೆ ?” ಎಂದು ಕೇಳ ಬಹುದು, ಆದರೆ, ಒಪ್ಪಿದ ಮಾತ್ರದಿಂದ ಕಾರ್ಯವಾಗಲಿಲ್ಲ ಅದು ಕಾರ್ಯಾ೦ ಗವು ಅಂಥ ಕಾರ್ಯಾಂಗಗಳೂ, ಸಂಪೂರ್ಣ ಕಾರ್ಯಕ್ಕೆ ಕಾರಣಗಳಾಗುತ್ತವೆ. ಏನು, ಗೋಡೆ ಮೆತ್ತಿದರೆ ಮನೆಗಟ್ಟಿದಂತಾಯಿತೆ ? ನಮ್ಮಂಥವರ ಮಾತಿನ ಮೊಗ್ಗೆಗೆ ದೃಢನಿಶ್ಚಯವೆ ಬಿತ್ತು, ದೃಢನಿಶ್ಚಯಕ್ಕೆ ಮನಸ್ಯಕ್ತಿಯ ಮೂಲವು. ಮನಶ್ಯಗೆ ಆರ್ಯನ ಬೋಧನೆ ತಿಳಿನೀರು. ಇಷ್ಟು ಅನುಕೂಲತೆ ಯುಳ್ಳ ಆ ಮೊಗ್ಗೆ ಹುಚ್ಚು ಹೂ ಬಿಟ್ಟು ಕೆಲಸದ ಮಿಡಿ ಮೊಳೆಯಲಿಕ್ಕಿಲ್ಲ ವೆಂಬ ನಿನ್ನ ಎಣಿಕೆಗೆ ಏನು ಹೇಳಲಿ ! [ಈಗ ಸದಾಗತಿಗೆ ಮಾತು ಮುಟ್ಟಿತು, ಏನೇನೋ ಯೋಚಿಸುತ್ತ ಅತ್ತಿತ್ತ ಒಲೆದಾಡತೊಡಗಿದನು. ತೇಜಸ್ವಿಯ ನಕ್ಕು ಆಲೋಚಿಸಿ ಶಿರ್ರ ಕಂಪನದೊಡನೆ ಹೀಗೆ ಹೇಳುತ್ತಾನೆ.] ತೇಜಸ್ವಿ – ಪ್ರಿಯನೆ, ನನ್ನ ಈ ಮಾತಿಗೆ ಬೇಸರಪಡಬೇಡ. ಗೆಳೆಯರಾಡುವ ಎಳ್ಳಷ್ಟಾದ ಸಿಡಿನುಡಿಯ, ತಾವರೆಗೆ ಬಿಸಿಲಿನಂತೆ, ಸಂತಸಕ್ಕೆ ಕಾರಣ ವಾಗುವುದಲ್ಲ ವೆ? ಹುಂ, ತಿಳಿದವರಲ್ಲಿ ಬಿಚ್ಚಿಬಿಡಿಸಿ ಬಿತ್ತರಿಸುವುದೇಕೆ ? ಹೇಳು ; ಹಗೆಗಳು ನಮ್ಮ ಬಗಲಿಗೆ ಬರುವಂತೆ, ನೀವು ಹೂಡಿದ ಹಣಿಕೆ ಹೇಗೆ ? ಸದಾಗತಿ:- (ಬೇಸರದಿಂದ) ಸುಟ್ಟವು ತಿಂದರೆ ಸಾಕು : ಗುಳ ಲೆಕ್ಕವೇಕೆ ? ಎಂದಲ್ಲವೆ ನಿನ್ನ ಅಮೌಲಾಭಿಪ್ರಾಯವು ? ಅದರಿಂದ, ನಮ್ಮ ಆ ಉಪಾ ಯದ ಪರಿಮಳಕ್ಕೆ ಮೂಗರಳಿಸುವುದೇಕೆ ? ತೇಜಸ್ವಿ:- (ನಕ್ಕು) ಓಹೋ, ನಿನ್ನಲ್ಲಿ, ಬೇಸರದ ಬೇರೂರಿ ಹೋಗಿದೆ. ಪ್ರಾಣ ಪ್ರಿಯರಲ್ಲಿ ಯ ಇಂಥ ಮುನಿಸಾದರೆ, ಇನ್ನು, ಸವಿಯೊಸರ.ವ ಪ್ರೇಮ