ಪುಟ:ಹಗಲಿರುಳು.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಮೇ ೧೯೧೮. ಇದೆ. ಹಾಗಿರುವಾಗ, ಅಪರಾಧಿಯನ್ನೆ ಸಭ್ಯನನ್ನಾಗಿ~ಯಾಕೆ ಈಗಿನ ಸ್ಥಿತಿಯನ್ನು ನೋಡಿದರೆ, ಅಧಿಕಾರಿಯನ್ನಾಗಿಯೇ-ಆರಿಸುವುದೆಂದರೇನು !! ಸುಶಿಕ್ಷಿತವಾದ ಮನಸ್ಸು, ಎಲ್ಲ ಇಂದ್ರಿಯಗಳ ಹೇಳಿಕೆಯನ್ನರಿತು, ಸನ್ಮಾ ರ್ಗವನ್ನೆ ಬೋಧಿಸುವಂತೆ, ಸರ್ವ ಪ್ರತಿನಿಧಿಗಳ ಅಭಿಪ್ರಾಯವನ್ನು ತಿಳಿದು ಪಕ್ಷಪಾತವಿಲ್ಲದೆ ಲೋಕಹಿತವನ್ನು ಹಬ್ಬಿಸುವುದೆ ಮಧ್ಯಸ್ಥನ ಗುರಿಯಾಗಿ ರಬೇಕು, ಅದಿಲ್ಲದೆ ಮನೆ ನಿಮ್ಮದೆ, ತಂಬಿಗೆ ಮಾತ್ರ ಮುಟ್ಟಕೂಡದು' ಎಂಬ ವಂಚಕರ ಮಾತಿಗೆ ಬಾಯಿಬಿಡುವುದೆಂದರೆ, ಲೋಕದ್ರೋಹವೆ ಆಗುವುದು, ಅದು ಸಂಧಿಯಲ್ಲ, ಬಂಧವು. ಸದಾಗತಿ:- ಮಾಡುವುದೇನು ? ನಮ್ಮವರೆ ಬಹಳ ಮಂದಿ, ನಕ್ಷತಪತಿಯ ಸಂಚಿಯಲ್ಲಿ ರುವುದರಿಂದ, ಅವನಿಗೆ ಇಷ್ಟು ಎದೆಗಟ್ಟಿ, ಅಷ್ಟೆ ಅಲ್ಲ, ಅದ ರಿಂದ, ನಮ್ಮ ಆರ್ಯನ ಆಡಳಿತಕ್ಕೂ ಇಂತಿಷ್ಟೆ ಬೆಲೆಯೆಂಬ ಅವರ ಹೇಳಿ ಕೆಯೂ ಕೇಳತಕ್ಕುದಲ್ಲವೆ ? ಹಾಗಿರುವಾಗ, ಈ ಮಧ್ಯಸ್ಥತೆಯ ಅಧಿಕಾ ರವು ನಮ್ಮವರಲ್ಲೊಬ್ಬನ ಪಾಲಿಗೆ ಬಂದುದು, ಹಗೆಗಳ ಸೌಜನ್ಯವನ್ನೂ ನಮ್ಮವರ ಭಾಗ್ಯದಯವನ್ನೂ ಸೂಚಿಸುತ್ತದೆ. ಅದನ್ನನ್ನೂ ಧಿಕ್ಕರಿಸಿ ತಮ್ಮ ಸ್ಥಿತಿಗತಿಗಳನ್ನೆಣಿಸದೆ ನನ್ನ ಎತ್ತಿಗೆ ಮೂರು ಕೊಂಬು' ಎಂದು ಹೇಳುವುದೆಂದರೆ, ಕೆರೆಯಲ್ಲಿ ಕೋಪಿಸಿ ಮುಖಮಜ್ಜನಮಾಡದ ಮೂಢ ತೆಯೇ ಸರಿ. ತೇಜಸ್ಲಿ? - ನಮ್ಮವರೆ ಕೆಲವರು ಆ ಕಡೆಯಲ್ಲಿ ದ್ದು ವಾದಿಸುತ್ತಾರೆಂದರೆ ಏನು ? ತೇಜಸ್ಸಂಬಂಧವನ್ನು ನೋಡುವುದಾದರೆ, ಅವರೆಲ್ಲರೂ ನಮ್ಮವರೆ, ನಾವೆ ಲ್ಲರೂ ಒಂದೆ ಮರದ ಕೊಂಬೆರೆಂಬೆಗಳಂತೆ, ಆರ್ಯನನ್ನೆ ಹಿಡಿದಿರುವವರು. ಈಗ ಆರ್ಯನು ಇಲ್ಲಿಲ್ಲ ದುದರಿಂದ, ಆ ಕೆಲವರು ಮಾತ್ರ ಕತ್ತಲೆಯ ಮಾ ಯಕ್ಕೆ ಮರುಳಾಗಿ ಹೀಗೆ ತಲೆಕೆಳಗಾಗಿದೆ, ಹೊಟ್ಟೆ ಒಂದಾದರೂ ಹುಟ್ಟು ಗುಣವು ಬೇರೆಂಬುದು ಹೊಳೆದು ಕಾಣುತ್ತಿದೆ. ನಮ್ಮವರಾದ ಮಾತ್ರದಿಂದ ಅವರ ಹೇಳಿಕೆಗೆಲ್ಲ ಸೈಗುಟ್ಟುವುದಾದರೆ, ಮುಂದಣ ನಿಮ್ಮ ತೀರ್ಪನ್ನು ಒರೆಯಲಿಕ್ಕಾದರೂ ಒರೆಗಲ್ಲು ಬೇರೆ ಬೇಡ, ಇರಲಿ, ಆರ್ಯನ ಮೇಲೆ ಅವರ ಆಕ್ಷೇಪವಾದರೂ ಏನು ?