ಪುಟ:ಹಗಲಿರುಳು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಮೇ ೧೧೮. ಳನ್ನು ಸೇವಿಸಬೇಕೆಂಬುದು ಹಸುರುಹಳ್ಳಿಯ ಹಾಡಿಗೌಡರಿಗೂ ಗೊತ್ತು, ಯಾಕೆ- ಪ್ರತಿಯೊಂದು ತಿರ್ಯಗ್ಟಂತುವೂ ಹೀಗೆಯೆ ನಡೆಯುತ್ತಿದೆ. ಅಷ್ಟೆ ಅಲ್ಲ; ಹೆತ್ತ ಮಗುವನ್ನು ಎತ್ತಿ ಏಳಿಗೆಗೆ ತರುವ ಲೋಕವೃಕ್ಷದ ತಾಯಿ ಬೇರಾದ ಹೆಂಗುಸು, ಆಕಷ್ಟವನ್ನು ಸಂತೋಷದಿಂದ ಸೈರಿಸಿಕೊಳ್ಳುವಳು. ಅದೇನು, ಉಮ್ಮಿ ಬಂದೀತೆಂದು ಊಟವನ್ನೆ ಬಿಡುವುದುಂಟೆ ? ಈ ಅಂಗಾರಕ ನೊಬ್ಬನು ಹಾರಿಹೋದನೆಂದು ಭೂದೇವಿಯಾದರೂ ಕೊರಗಿ ಕೊ' ಎನ್ನ ಲಿಲ್ಲ, ಬಾಲ್ಯದಲ್ಲಿ ಸ್ವಾತಂತ್ರವನ್ನೀಯದೆ, ವಿದ್ಯಾಭ್ಯಾಸ ಲೋಕವ್ಯವ ಹಾರಜ್ಞಾನಾದಿಗಳ ಕಷ್ಟಕ್ಕೆ ಮಕ್ಕಳನ್ನು ಗುರಿಮಾಡಿ ಆ ಸ್ವಾತಂತ್ರ್ಯದ ಗುಟ್ಟನ್ನು ಕಲಿಸುವುದು ಪೋಷಕರ ಕರ್ತವ್ಯವು, ಜ್ಞಾನಾರ್ಜನೆಯಲ್ಲಿ ಮನ ಸ್ಸಿಲ್ಲದ ಈಗಿನ ಕೆಲವು ಕೆಟ್ಟ ಹುಡುಗರಿಗೆ ಇವೆಲ್ಲ ವೂ ವಿಪರೀತವಾಗಿ ತೋರುತ್ತದೆ. ಅದರಿಂದಲೆ ಮೂರಕ್ಷರವನ್ನೋದಿ ಮೂರು ಲೋಕವನ್ನೋದಿ ದೆವೆಂದೆಣಿಸಿ, ವಿದ್ಯಾಭ್ಯಾಸದ ಆವಾಹನೆಯನ್ನು ಉದ್ಘಾಹಿಸಿ, ಹಿರಿಯರ ಬುದ್ಧಿ ಮಾತನ್ನು ಒದ್ದು, ಅಲ್ಲಿ ಸಲ್ಲ ದವರ ಬಿಳಿನಗೆಗೆ ಬಾಯಿಬಿಟ್ಟು, ಆ ಅಲ್ಪರ ರೀತಿಯೆ: ನಾಗರಿಕತೆಯ ಲಕ್ಷಣವೆಂದೆಣಿಸಿ, ಅಕಟಾ ! ಅನಿಷ್ಟ ಸ್ವರೂಪದ - ಅಂಗಾರಕರಾಗಿ ಹೋಗುತ್ತಾರೆ. ಅಂಥವರಲ್ಲಿ ಇವನೂ ಒಬ್ಬನು. ಒಳಗೆ ಪ್ರೇಮವನ್ನೂ ಹೊರಗೆ ನಿಯಮವನ್ನೂ ತೋರದಿದ್ದರೆ, ಹುಡುಗರು ಹಾಳಾಗುವರೆಂಬುದಕ್ಕೆ ಬಹಳ ದೃಷ್ಟಾಂತಗಳಿವೆ. ಅದಿರಲಿ, ಅವನ ದುಷ್ಕಾರ್ಯಗಳಿಂದಲೆ 4 ಅನಿಷ್ಟಕ್ಕೆ ಅಂಗಾರಕನೆ ಗುರಿ' ಎಂಬ ಮಾತಿಗೆ ಎಡೆಯಾಯಿತು. ಒಬ್ಬೊಬ್ಬನು ಅನ್ಯಾಯವನ್ನೆ ಮಾಡಿದರೂ ಇಡಿ ಲೋಕವು ಬರಿದೆ ಅಪವಾದದ ಆರೋಪವನ್ನು ಹೊರಿಸಲಿಕ್ಕಿಲ್ಲ.

12 |

ಅದರಿಂದಲೆ ಹತ್ತಿದ್ದಲ್ಲಿ ಮುತ್ತುಂಟ ಎಂದು ಹೇಳುತ್ತಾರೆ. ಇನ್ನು, ಅಂಗಾರಕ ಶನಿಗಳ ಹುಡುಗಾಟದ ಬಿರುಸು, ಒತ್ತಟ್ಟಿಗಿರಲಿ, ಈ ನಕ್ಷತ್ರಪತಿಯೆಂಬ ಅರಸನಾದರೂ ಯೋಗ್ಯನಾಗುತ್ತಿದ್ದರೆ, ತಾಯ್ತಂದೆಯ ರೊಡನೆ ವಿಚಾರಿಸದೆ, ಈಗಿನ ಕೆಲವು ಸಂಸ್ಥೆಗಳ ವರಂತೆ, ಈ ಬಾಲಕರನ್ನು ತನ್ನಲ್ಲಿ ಸೇರಿಸಿಕೊಳ್ಳಬಹುದೆ? ಹೋ ! ತಪ್ಪಿದೆನು ! ಅವನ ಬಣ್ಣವನ್ನು ಒರೆ ಯುವ ಒರೆಗಲ್ಲೂ ಇಲ್ಲಿ ಯೆ ಇದೆ. ಒಂದೇ ಮಾತಿನಿಂದ ಹೇಳುವುದಾದರೆ, ಇಷ್ಟೆ ಸಾಕು.