ಪುಟ:ಹಗಲಿರುಳು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ಕುಸುಮಷಟ್ಟದಿ | ತಂದೆತಾಯ ಳನು ಹಳಿವರೆ ಸಭ್ಯರಸುರಗುರು | ವಂದೆನುವ ಕುರುಡನೇ ಕವಿ, ನಾಸ್ತಿಕಂ | . ಸಂದಗುರುವನ್ನಲಾ ಗುರುಸತಿಯು ರಮಿಸಿದೀ | ಕುಂದಿನವನಲ್ಲ ದಿನ್ನಾರರನ್ನು _|| ೧ || ಸದಾಗತಿ:-(ಬಿರುಸಾಗಿ) ಸಾಕು, ಸಾಕು, ನಿನ್ನ ಈ ವಿಮರ್ಷೆಯನ್ನೆಲ್ಲ ಮುಂದಿನ ಸಭೆಯಲ್ಲಿ ವಿಸ್ತರಿಸಬೇಕಲ್ಲದೆ, ಈಗ ಯಾಕೆ, ಗುಡುಸಿಂದೊಳಗೆ ಸುಳಿದರೆ ಕೀ' ಎಂದು ಕಿವಿಯನ್ನು ಕೀಲಿಸುವೆ? ಇನ್ನಾದರೂ ಹೇಳುತ್ತೇನೆ; ಕೇಳು. ಗತಿಗೇಣುದ್ದ, ಮತಿಮಾರುದ್ದ' ಎಂಬಂತೆ ಹಾರಾಡಿ, ಬರಿದೆ ಅಪಹಾಸ್ಯಕ್ಕೆ ಎಡೆಯಾಗಬೇಡ, 'ನಮ್ಮದು ಮಣಿ, ಅವರದು ಮಸಿಯಾಗಬೇಕೆಂದು ಹಠಹಿಡಿದರೆ ಹೇಗಾಗುವುದೆಂದು, ಸಮಾಧಾನಚಿತ್ತದಿಂದ ನಿನ್ನಲ್ಲಿ ಒಮ್ಮೆ ಯೋಚಿಸಿ ನೋಡು, ಈಗ ಹೇಗಾದರೂ ಸುಧಾರಿಸಿ, ಹೆಚ್ಚಿನ ಚರ್ಚೆಯನ್ನು ಮತ್ತೆ ನೋಡೋಣ. ತೇಜಸ್ವಿ: (ಕೋಪಿಸಿ) ಸರಿ ಸರಿ; ಎಲ್ಲ ವನ್ನೂ ಮೊದಲೆ ನೋಡಿದ್ದೇನೆ ನಿನ್ನ ಈಗಿನ ಈ ಬೋಧನೆಯ ಬೋನಕ್ಕೆ ಬಾಯ್ದೆರೆವನಲ್ಲ. ಭಗವಂತನಾದ ಆರ್ಯನು ಅಂದು ಕಟ್ಟಿಕೊಟ್ಟ ಬುತ್ತಿ, ಇಂದಿಗೂ ಅಕ್ಷಯವಾಗಿಯೆ ಇದೆ. ಈ ವಿಮರ್ಷೆಯನ್ನೆಲ್ಲ, ಸಂಧಿಯ ಸಭೆಯಮುಂದೆ ಇಡಬೇಕೆಂದು ಸೂತ್ರಾತ್ಮಕವಾದ ಉತ್ತರವನ್ನು ಕೊಡುವ ಶಾಸ್ತ್ರಜ್ಞರಾದ ನೀವು, ಆ ನೀಚರು ಆರ್ಯನ ಮೇಲೆ ಮಾಡಿದ ಮಿಥ್ಯಾರೋಪಗಳಿಗೆ ಹೇಗೆ ಕಿವಿಗೊಟ್ಟರೆ? ದಾರಿಗನ ಹೆಗಲಿಗೆ ಹಿಂದಿನಿಂದ ಹೊರಿಸಿದ ಹೊರೆಯನ್ನು, ಮುಳ್ಳನ್ನು ಮುಳ್ಳಿಂದಲೆ ಕೀಳುವಂತೆ, ಹಿಂದಕ್ಕೆ ನೂಕಿ ಅಲಕ್ಷಿಸುವುದೆ ಧರ್ಮಪು. ಶಾಸ್ತ್ರವನ್ನು ಓದುತ್ತ ಗಾಳವನ್ನು ಹಾಕುವುದಕ್ಕೆ ಲೋಕವು ಒಪ್ಪಿದರಲ್ಲದೆ, ನಿಮ್ಮ ಸಂಧಾನದ ಸಭೆ ? ಸತಿ ಕುಗ್ಧ ಚಿತ್ರಂ' ಎಂಬ ಮಾತು ಪ್ರಸಿದ್ಧವಿರುವಾಗ, ಗೋಡೆಯಿಲ್ಲದೆ ಬರಿದೆ ಆಕಾಶದಲ್ಲಿ ಚಿತ್ರ ಬರೆಯಲಿಕ್ಕೆ ಕೈನೀಡುವ ನಿಮ್ಮ ಮೂಢತೆಯನ್ನು ಕಂಡೇ, ಈಗಲೆ ಉತ್ತರಗೊಟ್ಟಿದ್ದೇನೆ ಈ ಕತ್ತಲೆ ಬತ್ತಲೆಗುಣಿವ ಆಸಂಧಿಯ ಸಭೆಯನ್ನು, ಒಂದು ವೇಳೆ ನೀವು ಜರಗಿಸಿದರೂ, ಈ ಲೋಕವು ಕಕ್ಷರೆದು ನೋಡುವಂತಿಲ್ಲ. ಆ ಹಗೆಗಳ ಮಡಿಲಲ್ಲೆ ಆ ಅಂಗಾರಕನು ಬೀಳಲಿ; ಅವರನ್ನೆ, ಶನಿ ಹಿಡಿಯಲಿ.