ಪುಟ:ಹಗಲಿರುಳು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜೂನ್ ೧೯೧೮. ಸದಾಗತಿ:- ಹುಂ, ಕೆಡುವ ಕಾಲಕ್ಕೆ ಬದ್ಧಿ ಇಲ್ಲ, ಮರಣ ಕಾಲಕ್ಕೆ ಮದ್ದಿಲ್ಲ, ಮಾಡುವುದೇನು ? (ಲೋಕವನ್ನು ಉದ್ದೇಶಿಸಿ) ಲೋಕವೆ, ಇಂಥ ತಲೆದಿರು ಕರಿಗೆ ಎಷ್ಟು ಹೇಳಿದರೂ ಅಷ್ಟೆ, ಸ್ವಾರ್ಥದಿಂದ ಯಾರು ಹೇಗೆ ನಡೆದರೂ (ಗೋಡೆ ಬಿದ್ದರೆ ಜಗಲಿಯ ಮೇಲೆ' ಎಂಬ ಹಾಗೆ, ಕಷ್ಟವು ನಿನ್ನ ತಲೆಗೇ ಕಟ್ಟಿದ ಹೊರೆ, ಅದರಿಂದ, ಸಾರಾಸಾರವಿವೇಚನೆಮಾಡಿ, ನಮ್ಮ ಜಲ ಧರನ ಈಗಿನ ಉದ್ದೇಶಕ್ಕೆ ಸಮ್ಮತಿಗೊಡುವುದು ತಕ್ಕುದಾಗಿದೆ. ಇದು, ಲೋಕಾಭಿವೃದ್ಧಿ ಯ ಅಡಿಗಟ್ಟೆಂದು, ಮತ್ತೂ ಮತ್ತೂ ಒತ್ತಿ ಹೇಳುತ್ತೇನೆ. ತೆರೆ ನಿಂತ ಮೇಲೆ ಹಾರಿದರೆ ಮರಳನ್ನು ಮುಕ್ಕುವುದೇ ಫಲವು. ಲೋಕ:--ನಿನ್ನ ಮಾತಿಗೆ ನಮ್ಮದೂ ಒಪ್ಪಿಗೆಯಿರುತ್ತಿತ್ತು, ಆದರೆ, ಆರ್ಯನ ಹಿತಸೂಚನೆಯನ್ನು ಅಲ್ಲೆ ಮರೆತು, ನಮ್ಮ ಮೋರೆಗೆ ಮಸಿ ಹಚ್ಚುವುದು ನಮಗೆ ಸಮ್ಮತವಲ್ಲ. ಆ ನಕ್ಷತ್ರಪತಿಯೆ ಬಯಲಿಗೆ ಬಂದನೆಂದರೆ, ಅವನೆ ದುರಲ್ಲಿ ಈ ಕತ್ತಲೆ ಇರಬಾರದಂತೆ ಎಂದ ಮೇಲೆ, ಅವನಿಗೇ ಅವಲಕ್ಷ ಣವಾದ ಈ ಪ್ರೇತಸ್ವರೂಪವನ್ನು, ನಮ್ಮ ಮೇಲೆ ಆರೋಪಿಸುವುದೇಕೆ ? ಅವನು ರಾಜಮರ್ಯಾದೆಯನ್ನು, ನಮ್ಮಿಂದ ಕೈಗೊಳ್ಳಬೇಕಾದರೆ < ಯಥಾ ರಾಜಾ ತಥಾಪ್ರಜಾಃ' ಎಂಬ ನೀತಿಯನ್ನು ಮರೆಯಬಾರದು. ಜಲಧರನು, ಕತ್ತಲೆಯ ಪೋಷಕನು; ನಿನಗೆ ಅದರ ಕೋಲುಬೇಲಿಯೆ ಇಲ್ಲ. ಅದ ರಿಂದ, ನೀವು ಈ ಸಂಧಾನದ ಮುಂದಾಳುತನವನ್ನು ಸ್ವೀಕರಿಸಿದರೂ, ನಾವು ಹುಂ ಗೂಡಿಸಲಾರೆವು, ಒಂದು ವೇಳೆಗೆ, ನಮ್ಮನ್ನು ಅಲ್ಲಗಳೆದು, ಕತ್ತಲೆ ಯನ್ನು ಮುಂದೆ ಮಾಡಿ ನೀವು ನಿಮ್ಮಷ್ಟಕ್ಕೆ ಸಭೆಗೂಡಿಸಿದರೂ, ಅದರಿಂದ ಒಳ್ಳೆಯ ಪಾಠವನ್ನೇ ಕಲಿಯುವೆವು. ನಾವೆಲ್ಲರೂ ಎಣಿಕೆಯನ್ನು ಬಿಗಿ ಹಿಡಿದು, ಮೈಮರೆತು ಕಲಸಮಾಡಿ ನಿದ್ರಾರೂಪದ ಸಮಾಧಿಯಿಂದಲೆ ಆರ್ಯ ಸಾಕ್ಷಾತ್ಕಾರವನ್ನು ಪಡೆಯುವೆವು. ಸದಾಗತಿ:-ನೀವು ಆಶ್ರಯಾಶನಾದ ಈ ತೇಜಸ್ವಿಯ ಮಾತಿಗೆ ಮರುಳಾಗಿದ್ದೀರಿ. ಜಲಧರನೂ ನಾನೂ, ನಿಮ್ಮ ಜೀವನ ಪ್ರಾಣಾಧಾರರೆಂಬುದನ್ನು ಮರೆತು ಕೆಡುತ್ತೀರಿ, ಆರ್ಯನಾದರೂ, ತೇಜಸ್ವಿಯ ಮೇಲಧಿಕಾರಿಗಳನ್ನಾಗಿ, ನನ್ನನ್ನು ನಿಯಮಿಸಿದುದನ್ನು ಗಣಿಸಿರುವುದರಿಂದ, ಆರ್ಯಮತಕ್ಕಾದರೂ ನೀವು ವಿರೋಧಿಗಳೆ ಆಯಿತಲ್ಲವೆ? ಕಾಲಾನುಸಾರಿಯಾದ ಆರ್ಯನ ಮತವಾದರೂ,