ಪುಟ:ಹಗಲಿರುಳು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜೂನ್ ೧೯೧೮. ಲೋಕ:-ಸದಾಗತಿಯೆ, ನೀನಿನ್ನು ಆಗಾಗ ಕಿರಿಕಿರಿ ಗುಟ್ಟಿ, ನಮ್ಮ ದೊರೆ ಯಾದ ತೇಜಸ್ವಿಗೆ ಉಪದ್ರವಮಾಡಬೇಡ, ನಿನ್ನ ಸ್ನೇಹದಸಂಕ ಮುರಿದಲ್ಲೆ ಸ್ನಾನಮಾಡಿ ನಾವು ಶುದ್ಧರಾಗುವೆವು, ನಿನ್ನ ಮಾತು ಆದಹತ್ತಿ' ಅದೆ ನೂಲು, ಆದರೆ, ನಮ್ಮದೂ ಅದೆ ಬಟ್ಟೆ, ಅದೆ ಬಣ್ಣ'ವು. ಈ ಮಾತನ್ನು ಕೇಳಿದೊಡನೆಯೆ ಸದಾಗತಿಯ ಗತಿ ಬಿರುಸಾಯಿತು. ಗಡಿಯಾರದ ಮುಳ್ಳನ್ನು ಮುರಿದರೆ ಗತಿನಿಲ್ಲುವುದೆಂದು ನಿಶ್ಚಸಿ, ಲೋಕದ ಹಾರಾಟದ ಚಾಲಕನಾದ ತೇಜಸ್ವಿಯಲ್ಲಿ, ಅವನ ಕೋಪವೇರಿತು. ಆ ತೇಜ ಸ್ವಿಯ ತಲೆಗೆ ಒಂದೇಟುಗೊಟ್ಟನು, ಬಾಯಿಯಲ್ಲಿ ಸಾಗದಿದ್ದರೆ, ಕೈಮೀರು ವುದು ದುಷ್ಟರ ಹುಟ್ಟುಗುಣವು, ಎಷ್ಟು ಓದಿದರೂ ಲೋಕವ್ಯವಹಾರವನ್ನು ಅರಿತರೂ, ಸ್ವಭಾವವು ಮರೆಯಾಗಲಾರದೆಂದು ಬೇರೆ ಹೇಳಬೇಕೆ? ಪ್ರಾಣ ಪ್ರಿಯರಾದರೂ ಕೆಲವರು, ತಮ್ಮ ಕೈ ನಡೆಯದಿದ್ದಾಗ, ಆ ಕೆಳೆಯರ ಪ್ರಾಣ ವನ್ನೆ ತೆಗೆದುಬಿಡುತ್ತಾರೆಂಬುದಕ್ಕೆ ಇದೂ ಒಂದು ದೃಷ್ಟಾಂತವೆ, ಅಬಲನಾದ ತೇಜಸ್ವಿ, ಅಭಿಮಾನರಕ್ಷಣಕ್ಕಾಗಿ ಮೈಬಿಟ್ಟನು, 'ನಿಮ್ಮ ದೊರೆಯ ದೊರೆತನ ವೇನಾಯಿತು ? ವಿನಾಶಕಾಲೇ ವಿಪರೀತ ಬುದ್ದಿ' ಎಂಬುದು ಬರಿದಾಗುವುದೆ? ಎಂದು ಅತ್ತ ಮೇಲೆ ಹಾರಿದನು. ಇತ್ತ ತೇಜಸ್ವಿಯ ಶೋಚನೀಯಾವಸ್ಥೆಗೆ ಹೊಗೆಯಂತೆ ನಿಟ್ಟುಸಿರೆದ್ದಿತು, ಹಕ್ಕಿನ ಬೆಳಕು ಬತ್ತಿ ಹೋಯಿತು, ಕತ್ತ ಲೆಯ ಮೊತ್ತದ ಕಾಲಾಟವನ್ನು ಬೇಕುಬೇಡೆಂಬರಿಲ್ಲ. ಆರ್ಯಧ್ಯಾನಾ ಎಷ್ಟವಾದ ಲೋಕವು, ಪ್ರತಿಜ್ಞೆ ಮಾಡಿದಂತೆ, ನಿದ್ರಾಸಮಾಧಿಯನ್ನು ಅವ ಲಂಬಿಸಿತು. ಎಲ್ಲೆಲ್ಲಿಯೂ ನಿಶ್ಯಬ್ದ, ಅದು ಎಷ್ಟರಮಟ್ಟಿಗೆಂದರೆ, ಒಂದು ಹುಲ್ಲಾಡಿದರೆ ಸಾಕು; ನೆಟ್ಟಗೆ ಕಿವಿಗೆ ಕೇಳಿಸುವಂತಿತ್ತು, ಈ ಸುದ್ದಿಯನ್ನು ಸದಾಗತಿ ಜಲಧರನಿಗೆ, ಒಂದುಳಿಯದಂತೆ ಹೇಳಿದನು, ಅವನು ಮಿತಿ ಮೀರಿದ ಸಿಟ್ಟಿರಿ, ಕುಡಿಮಿಂಚಿನ ಕಡೆಗಣ್ಣಿಂದ ನೋಡಿದನು. ಲೋಕದಲ್ಲಿ ಎತ್ತಲೂ ಸಮಾಧಿ, ಶಾಂತ, ಆ ಶಾಂತವು, ಜ್ವರಬಂದವನಿಗೆ ತಣ್ಣೀರೆರೆ ದಂತೆ, ಜಲಧರನ ಕೋಪವನ್ನೆ ಹುರಿದುಂಬಿಸಿತು. ಈ ಲೋಕವನ್ನು ಕಷ್ಟ ಸಾಗರದಲ್ಲಿ ಮುಳುಗಿಸಿಬಿಡಬೇಕೆಂದು, ಗುಡುಗುಡಿಸಿ ಗರ್ಜಿಸಿ, ನಿಮಿಷದಲ್ಲಿ ಶರವರ್ಷವನ್ನು ಪ್ರಯೋಗಿಸತೊಡಗಿದನು. ಲೋಕವು, ಮೊದಲೆ, ಮನೆ ಮಾಡಗಳ ಬಾಗಿಲುಮುಚ್ಚು ಗಳೂ ಎಂಬ ಅಡ್ಡಣಗಳನ್ನು ಏರ್ಪಡಿಸಿದ್ದರಿಂದ ಅವುಗಳಿಗೆ ನಾಟಿ, ಶರವರ್ಷಗಳು ಚೂರು ಚೂರಾದುವು, ಆದರೂ, ನೀರು