ಪುಟ:ಹಗಲಿರುಳು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜೂನ್ ೧೧೮. ಅ:, ನಕ್ಷತ್ರಪತಿಯೆ, ನಿನ್ನ ಭೇದೋಪಾಯವು, ಸದ್ಯಕ್ಕೆ ಸಫಲವಾಯಿತು. ಏಡಿಯ ಕಾಲನ್ನು ಏಡಿಗೆ ಕುತ್ತುವ ಅಂಬಿಗನಂತೆ, ಹಿಂದೆ ನಿಂತು ಒಡನಾಡಿಗಳನ್ನೆ ಹೊದೆ ದಾರಿಸಿ ಕೃತಾರ್ಥನಾದೆ. ಜಲಧರಪ್ರೇರಿತನಾದ ಸದಾಗತಿಯ `ಪೆಟ್ಟಿಗೆ, ತೇಜಸ್ವಿ ಬಲಿಬಿದ್ದನು. ಜಲಧರನೂ, ಶಪಿಸಿದ ಮುನಿ, ಪುಣ್ಯವನ್ನು ಕಳಕೊಳ್ಳುವಂತೆ, ಟೊಳ್ಳಾದನು. ಓಡುವವನಿಗೂ ಅಟ್ಟುವವನಿಗೂ ದಣಿವು ಒಂದೆಯಲ್ಲವೆ? ಸದಾಗತಿ ಒಬ್ಬನು ಕಲ್ಲಿಲ್ಲದ ಗುಳಿಗನಂತೆ, ಅತ್ತಿತ್ತ ಅಲೆಯುತ್ತಿದ್ದಾನೆ, ಅಹೋ, ನಿನ್ನ ಕಲಿಕೆಗೆ ಕಣ್ಣಿಲ್ಲ, ಮೇಲು ಹಂತಿಯ ಉದ್ದೇಶವು, ತನ್ನಂತೆಯೆ ಕೀಳುಹಂತಿ ಬರೆಯೋಣಾಗ ಬೇಕೆಂಬುದು ಸರಿ, ಆದರೆ, ಇನ್ನು ನಿನ್ನ ಈ ರೀತಿಯಕೌಳಿಕಕ್ಕೆ, ಕಣ್ಣಾರೆ ಕಂಡುದ ರಿಂದ, ಯಾರೂ ಮರುಳಾಗಲಿಕ್ಕಿಲ್ಲ ಎಂಬುದು ನಿಶ್ಚಯವು, ಹೊಂಡವೆಂದು ತಿಳಿದೂ, ಆನೆ ಕಾಲಿಡುವುದೆ ? ಅದಿರಲಿ, ಮುಗುಳಗೆಯ ಬಾಯ ಬಿನ್ನಣಕ್ಕೆ ಮರುಳಾಗಿ, ಪರರನ್ನು ನಂಬಿದರೆ, ಜಲಧರನಂತೆ, ಆತ್ಮನಾಶವೆ ಫಲವಾಗುವುದು, ಅದರಿಂದ, ಪರೀಕ್ಷಿಸಿಯೆ, ಪ್ರತಿಯೊಬ್ಬನಲ್ಲಿಯೂ ನಂಬಿಕೆ ಇಡಬೇಕು, ಹೇಗೆಂದರೆ:- ಚೌಪದಿ || ನೋಡುತ್ತಲೊರೆದು ಹೆಟ್ಟು ತ ಕರಗಿಸುತ್ತ || ಕೂಡೆ ಚಿನ್ನವ ಪರೀಕ್ಷಿಸಿ ಕೆಲಸಗೆಯ || ಪಾಡಿಂದ ಕುಲಶೀಲ ನುಡಿನಡತೆಗಳನು || ನೋಡಿ ಜನರನ್ನು ನಂಬುವುದು ತಿಳಿದವನು | || ೧ || ನಂಬಿಕೆಯೆನಲ್ಕೆ ಸಾಮಾನ್ಯವೆನಬೇಡ | ನಂಬಿದವನಲ್ಲಿ ಸಂದೇಹವಿಹುದಿಲ್ಲ | ನಂಬಿ ದೋಣಿಯನೇರೆ ಗಾಳಿಯಿಂಮಗುಚಿ || ನಂಬಿದವನನು ಮುಳುಗಿಸಿದ ದೋಣಿಯಾಚೆ | ೨ | ನಂಬಿಕೆಯನೊಗ ಹೊನ್ನುರನ್ನಗಳಕಟ್ಟೆ | ನಂಬಿಕೆಯ ಬೆನ್ನು ಬಿಂಗದಬೆಲೆಯ (ಜಗಲಿ) ತಟ್ಟೆ || ನಂಬಿಕೆಯ ದಾರಿಗಂಬಕ್ಕೆರಡು ಕೈಗಳ್ || ನಂಬಿನಡೆಯಲ್ಕವುಗಳಕ್ಷರವನೋದಿ || ೩ !! ಇದನ್ನು ಮನಗಾಣದೆ, ಕೊಂಬಿನ ಹೆಮ್ಮೆಯಿಂದ ಹಾಯ್ದರೆ ಹದಗೆಟ್ಟು ಹೋಗು ವುದು ಕಂದ || ತಲೆಯೊಳು ಮುಕುಟದ ಕೂಂಬಿ | ನ್ಯೂಲೆದಾಡುಗಳೊಂದಕೊರದು ಹಾಯಲು ಕಂಬೂ | ತಲೆಯ ಫಳೆಂದೊಡೆಯಲು | ಬಳಲಿಕೆಯಾರ್ಗೆ೦ಬುದರಿವುದಿದೆಯಲ್ಲೆಲ್ಲ ||