ಪುಟ:ಹಗಲಿರುಳು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಇರುಳು. ೪೧. ಅದೇನೆಂದು ಹೇಳಲಿ ? ಮೇಲೆ ನೋಡಿ ಉಗುಳಿದರೆ ಮೋರೆಗೇ। ಬೀಳುವುದಲ್ಲ ವೆ? ಆದರೂ, ನೀನು, ನಿರ್ವಂಚನೆಯಿಂದ ವಿಚಾರಿಸಿದುದಕ್ಕಾಗಿ ಹೇಳುತ್ತೇನೆ, ಕಾಲನ ಇಚ್ಛೆ ಸರ್ವಸಮಾನವಾಗಿಯೆ ಇರಬಹುದು, ನಾವೂ ಹಾಗೆಯೆ, ಆದರೆ, ಏಕೋದ್ದೇಶದ ಬಡವರಾದ ನಮ್ಮ ಮತ್ತು ಅವನ ನಡುವೆ ಒಂದು ಅಡ್ಡಿ ಯ ಪರದೆಯುಂಟು. ಅದೇ ನಮ್ಮಲ್ಲಿಯ ಧನಿಕ ಸಮಾಜವು, ಕೆರೆಯ ತೂಬು, ಎಡೆಯ ತೂತುಗಳಲ್ಲಿ ನೀರನ್ನು ಒಳಗೊಳಗೆ ಸೆಳೆವಂತೆ, ಆ ದುಷ್ಟ ಮಂತ್ರಿಗಳಾದ ಧನಿಕರು, ಕಾಲನ ಕರುಣಾಕಟಾಕ್ಷದ ಫಲವನ್ನು ತಂತಮ್ಮೊಳಗೇ ಹಂಚಿಕೊಳ್ಳುತ್ತಾರೆ, ಅದರಿಂದ ನಾವು ಬಾವಿಯ ಕಪ್ಪೆಗಳೇ ಆಗಿರುತ್ತೇವೆ. " ಕತ್ತಲೆ:-ಅ:, ಕಷ್ಟ, ಇದು ಬಹಳ ಕಷ್ಟ, ಮೊದಲಿನ ನನ್ನ ಮನಸ್ಸಿನ ಮಂಡಲ ವೆಲ್ಲವು ಈಗ ಟೊಳ್ಳಾಗುತ್ತ ಬರುತ್ತದೆ. ಭೂದೇವಿಗೆ ಸ್ಥಾವರ ಜಂಗಮ ಗಳೆಂಬ ಎರಡು ತರಗತಿಯ ಮಕ್ಕಳು, ಅವುಗಳಲ್ಲಿ, ಸ್ಥಾವರಗಳು ಅಂಗ ವಿಕಲರಾಗಿಯೂ ದಡ್ಡರಾಗಿಯೂ ಇರುವುದರಿಂದ, ಎಂದೆಂದೂ ತಾಯಿಯು ತಾನೆ ಆನುಕೂಲ್ಯಗಳನ್ನು ಒದಗಿಸಿ, ಅವುಗಳನ್ನು ರಕ್ಷಿಸುತ್ತಾಳೆ, ಜಂಗಮ ಗಳಾದರೂ, ಸ್ಥಾವರಗಳನ್ನೆ ತಿಂದು ತೇಗಿ ಓಡಾಡುವವು. ಅಷ್ಟೆ ಅಲ್ಲ. ತಮ್ಮಲ್ಲಿ ಮೂಢರಾದ ಪಶುಪಕ್ಷಾದಿಗಳನ್ನೂ, ನೀವು ಮನುಷ್ಯರು, ಶಕ್ತಿ ಯುಕ್ತಿಗಳಿಂದ ಬಡಿದು ಬಾರಣೆ ಮಾಡುತ್ತೀರಂತೆ. ಈ ಸುದ್ದಿಯನ್ನು, ಆ ಪ್ರಾಣಿಗಳು ಆಗಾಗ ಹೇಳುತ್ತಿದ್ದರೂ, ಸುಳ್ಳಾಗಿರಬಹುದೆಂದೆ ಎಣಿಸುತ್ತಿದ್ದೆನು. ಆದರೆ ಈಗ ಎಲ್ಲವೂ ಸ್ವಷ್ಟವಾಯಿತು, ಅದರಿಂದ ನಿಮ್ಮ ಈ ಸ್ಥಿತಿ ಯಾದರೂ ಅಯುಕ್ತವಲ್ಲ. ತಲೆಗೆ ಎರೆದ ನೀರು ಕಾಲಿಗೆ ಇಳಿವುದು ಪ್ರಕೃತಿ, ಮೊದಲು ನೀವೆಲ್ಲರೂ ಒಟ್ಟುಗೂಡಿ ಅಬಲರನ್ನು ಹಿಡಿದು ಹಿಂದಿ ಕಡಿಯುತ್ತಿದ್ದುದರಿಂದ, ಈಗ ನಿಮ್ಮ ಕೊರಳಿಗೂ ಅದೇ ಕತ್ತಿ ಎತ್ತಿರುವುದು, “ಸರಿ, ಆದರೆ, ಹಿಂದಿನ ಪಾಪವು, ಬಡವರಾದ ನಮಗೆ ಮಾತ್ರ ತಲೆ ಹೊರೆಯೊ? ಆ ಅನ್ಯಾಯಾರ್ಜಿತ ಪ್ರಯೋಜನವೆಲ್ಲ ದೊಡ್ಡವರಿಗೆ, ಎಂದ ಮೇಲೆ, ಅವರು ಸುಖವಾಗಿರುತ್ತಾ ನಾವು ಯಾಕೆ ಈ ಕಷ್ಟಕ್ಕೆ ಈಡಾಕಬೇಕು? ಕತ್ತಲೆ:- ಒಳ್ಳೆಯ ಪ್ರಶ್ನೆ ಇದು, ಆದರೆ ಕೇಳರಿ, ಅವರ ಈಗಿನ ಮಹತ್ವವೆ ತಮಗೆ ಒದಗಬಹುದಾಗಿದ್ದ ಕಷ್ಟವನ್ನು ನೂಕಿದೆ. ಆದರೆ, ಅವರ ಪಾಲಿನ