ಪುಟ:ಹಗಲಿರುಳು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಲೂಸ್ ೧೯೧೬. ಕಷ್ಟವೂ ನಿಮ್ಮನ್ನೆ ಹಿಡಿಯಬೇಕಾಯಿತು. ಇಬ್ಬರೂ ಒಟ್ಟಿಗೆ ಹೊಣೆ ಬರ ಕೊಟ್ಟಲ್ಲಿ ಸಾಲಗಾರನು, ಅವರೊಳಗೆ ಸಿಕ್ಕಿದವನಿಂದ ಹಣವನ್ನು ವಸೂಲಿ ಮಾಡಬಹುದು, ಅದರಿಂದ ಅವರ ಪಾಪವೂ ನಿಮ್ಮನ್ನೆ ಹೊಂದಿದೆ. “ಹಾಗಾದರೆ, ಪಾಲುಗಾರನ ಸಾಲದ ನಷ್ಟದಂತೆ, ನಮಗೆ ಕಷ್ಟವೆ ಗತಿಯೆ?? ಕತ್ತಲೆ-ಅಲ್ಲ; ಒಮ್ಮೆ, ಯುಕ್ತಿಯಿಂದ ತಪ್ಪಿಸಿಕೊಂಡರೂ, ಎಂದೆಂದಿಗೂ 'ಸಾಗದು, ಆ ಮೇಲೆ, ನಷ್ಟ ಹೊಂದಿದ ಪಾಲುಗಾರನು, ಆ ತಪ್ಪಿಸಿಕೊಂಡವ ನಿಂದ ವಸೂಲಿ ಮಾಡಬಹುದು, ಹಾಗೆಯೆ, ನೀವಾದರೂ ಪ್ರಯತ್ನಿಸಿ ಸುಖದ ಬಾಗಿಲನ್ನು ತೆರೆದುಕೊಳ್ಳಬೇಕು, ನೀವು ಮನಮುಟ್ಟಿ ಹೆಣಗುವು ದಿದ್ದರೆ, ತಕ್ಕ ಉಪಾಯವನ್ನೂ ತಿಳಿಸುತ್ತೇನೆ. ಸುಮ್ಮನೆ (ಆಟಿನೋಡಿದುದೂ ಅಲ್ಲ, ಮದಕಾಯು ದೂ ಅಲ್ಲ” ಎಂಬಂತೆ ಆಗುವುದಿದ್ದರೆ ಹೊರಗಿ ನವಳಾದ ನಾನು ಕಷ್ಟಕ್ಕೆ ಕತ್ತಲೆಯ ಗುರಿ' ಎಂಬ ಇನ್ನೊಂದು ಗಾದೆಯನ್ನು, ಯಾಕೆ ಹುಟ್ಟಿಸಿಕೊಳ್ಳಬೇಕು? ದಯವಿಟ್ಟು ಹೇಳು, ಮೈಗೆಟ್ಟು ಹೆಣಗುತ್ತೇವೆ. 6: ತಲೆ ಮಟ್ಟು ವಾಗ ಬಾರದ ಕೋಪ ಬೆನ್ನು ತಟ್ಟುವಾಗಳೆ?” 10 ಕತ್ತಲೆ:- ಆದರೆ ಕೇಳಿರಿ, ಈ ಭೂಮಾತೆಯ ಮಡಿಲಲ್ಲಿ ಬಳೆದುದರಿಂದ, ಎಲ್ಲರೂ ಅಣ್ಣ ತಮ್ಮಂದಿರಂತೆ, ಸುಖದುಃಖಗಳಿಗೆ, ಒಂದೆ ತರದ ಹಕ್ಕು ದಾರರು, “ಒಬ್ಬನಿಗೆ ಹಾಲು ಒಬ್ಬನಿಗೆ ನೀರು' ಎಂಬ ಪಕ್ಷಪಾತ ಬುದ್ಧಿ ಭೂಮಾತೆಗೂ ಇಲ್ಲ, ಕೆಲ ಮಂದಿ ಬಡವರು, ಸಾವಿರ ಬೊಟ್ಟು ನೆತ್ತರನ್ನು ಒಂದು ಬೊಟ್ಟು ಮಾಡಿ ಬೆವರಿಳಿಸಿ ಕೆಲಸಮಾಡುವುದು! ಕೆಲ ದೊಡ್ಡವ ರೆಂಬವರು ಮಾತ್ರ ಕಾಲುನೀಡಿ ಕೂತುಕೊಂಡು ಡೊಳ್ಳು ಬಾರಿಸುವುದು!! ಊರು ಸೂರೆಯಾದಾಗ, ಯುದ್ಧ ವೆದ್ದಿರುವಾಗ, ಮುಂದಾಗಿ ಮೈ ಮಾರ ಬೇಕು, ಈ ಬಡಜನರು! ಅದರ ಪ್ರತಿಫಲವಾದ ಸೌಭಾಗ್ಯ ಸಂಪತ್ತನ್ನು, ಸುಖಶಾಂತಿಯನ್ನು ಅನುಭವಿಸುವುದು ಈ ದೊಡ್ಡವರು!! ಇದೇನು ಅನ್ಯಾಯ! ಇಂಥ ವಕ್ರಬುದ್ಧಿ, ಸರ್ವತಂತ್ರನಿಯಂತ್ರಿಣಿಯಾದ ಪ್ರಕೃತಿದೇವಿಯಲ್ಲಿ ರುವುದೆ? ಆ ಪವಿತ್ರವಾದ ಪರಲೋಕದಿಂದ ಇಲ್ಲಿಗೆ ಬರುವಾಗ ಒಬ್ಬನಿಗಾದರೂ, ತಂದ