ಪುಟ:ಹಗಲಿರುಳು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. 94 ಮೈಯೊಂದಲ್ಲದೆ, ಬೇರೇನಾದರೂ - ಮೂಲಧನವಿತ್ತೆ ? ಇಲ್ಲ. ಈ ಧನಿಕ ರೆಲ್ಲರೂ ಭೂಮಾತೆಯ ಮಡಿಲಿನಿಂದ ಕಸುಕೊಂಡಿರುವರು: ಅದು ನ್ಯಾಯಾ ರ್ಜಿತವಾಗಿದ್ದರೆ, ಈ ಸಹೋದರರೆಲ್ಲರಿಗೂ ಸರಿಯಾಗಿ ಹಂಚಬೇಕು. ಹಂಚುವುದಿರಲಿ, ಸೂಚಿ ಮಾತ್ರೇಣ ಮಾಧವ' ಎಂದ ಕೌರವನಂತೆ, ಎಳ್ಳಿನ ಜಳ್ಳನ್ನಾದರೂ ತೋರಿಸುವಂತಿಲ್ಲ, ಅದರಿಂದ ಮುಳ್ಳನ್ನು ಮುಳ್ಳಿಂದಲೆ ತೆಗೆವಂತೆ, ಆ ಕಳ್ಳರನ್ನು ಕಳ್ಳತನದಿಂದಲೆ ಗೆಲಬೇಕು. ಈ ಉಪಾಯವನ್ನು ಚೌರ್ಯವೆಂದೂ ಹೇಳಲಾಗುವುದಿಲ್ಲ. ಹಲವರ ಹಕ್ಕಿಗೆ ಆ ಕೆಲವರೆ ಕೈ ಹಾಕುವುದು ನ್ಯಾಯವೆಂದಾದ ಮೇಲೆ, ನಿಮ್ಮದನ್ನು ನೀವೆ ಪಡಕೊಂಡರೆ ಹೇಗೆ ತಪ್ಪಾಗುವುದು? ಕಾಲವಂತೂ ಅನುಕೂಲವೇ ಆಗಿದೆ. ನಕ್ಷತ್ರಪತಿಯು ಭೇದೋಪಾಯದಿಂದಾಗಿ, ಲೋಕವೆಲ್ಲ ವೂ ಮೈ ಮರೆತಿದೆ. ತೇಜಸ್ವಿ ಕಣ್ಣು ಮುಚ್ಚಿರುತ್ತಾನೆ, ಕಲಿಯುಗಕ್ಕೆ ಮಾಂಡವ್ಯ ಮತದಂತೆ ಪಯಣಕ್ಕೆ, ದೃಢ ನಿಶ್ಚಯವೆ ಸುಮುಹೂರ್ತವಾಗಿರುವುದರಿಂದ, ಕ್ಷಣಕಾಲವಾದರೂ ತಡೆಯದೆ ಹೊರಡಿರಿ, ಆ ಧನಿಕರ ಮನೆಗಳಿಗೆ ಗನ್ನಹಾಕಿ ಬೇಕಾದಷ್ಟು ನಗನಾಣ್ಯ ಗಳನ್ನು ಬಾಚಿಕೊಂಡು ಬನ್ನಿರಿ, ದಾರಿಕೇರಿಗಳಲ್ಲಿ ಯ ಬಯಲು ಬಟ್ಟೆ ಗಳಲ್ಲಿಯ ರಾಜನಾದ ನಕ್ಷತ್ರಪತಿಯ ಕೈಯಾಡುತ್ತಿ ರುವುದರಿಂದ, ನಿಮಗೆ ಅಂಜಿಕೆಯಾಗಬಹುದು, ಆದರೆ, ರಾಜಮುದ್ರೆಯ ನಾಣ್ಯವು ಬಡವರ ಯ ಭಾಗ್ಯವಂತರಲ್ಲಿ ಯ ಏಕಪ್ರಕಾರವಾಗಿ ನಡೆವಂತೆ ಈ ರಾಜನ ಕೈಗೂ ಪಕ್ಷ ಪರಪಕ್ಷವೆಂಬ ಭೇದವಿಲ್ಲ. ನಿಮ್ಮ ಮುಖ್ಯಸ್ಥಾನವಾದ ಅಂಕ ಡೊಂಕಿನ ಮರೆ ಮೂಲೆಗಳಲ್ಲಿ ನಾನೆ ಇದ್ದು ಸಹಾಯಮಾಡುತ್ತೇನೆ. ನಾನು ಹೊರಗಿನವಳಾದರೂ ಅಷ್ಟೆಲ್ಲ ಹೇಳಿದುದು ಕವಲೆಣಿಕೆಯಿಂದಲ್ಲ ಎಂಬುದನ್ನು, ನಿಮಗೆ ಹೇಳುವ ಅವಶ್ಯವಿಲ್ಲ, ನನಗೆ ಇಕ್ಕಡೆಯೂ ಒಂದೆ. ಅವರು ಕಣ್ಣು ಕುತ್ತಲಿಲ್ಲ; ನೀವು ಹಾಲೆರೆಯಲಿಲ್ಲ. ಆದರೂ, ಧನ ಪ್ರವಾಹವು, ದೊಡ್ಡವರು ಬಡವರೆಂಬ ಕೃತ್ರಿಮವಾದ ಮರಳಿನ ದಿಣ್ಣೆ ಕಣಿವೆ ಗಳನ್ನು ಕೊಚ್ಚಿಕೊಂಡು ಹೋಗಿ ಅಡಿಗಟ್ಟು ಸರಿಯಾದರೆ, ಮೇಲಿನ ಹೊಯ್ಲಿನ ಹೊಡತವೂ ಹೋಗಿ ಸಂಸಾರವೆಂಬ ನದಿ ಸುಗಮವಾಗುವುದು. ಸರ್ವಜನಾಸ್ಸು ಖಿನೋ ಭವಂತು' ಎಂಬುದೆ ನನ್ನ ಕೋರಿಕ. ನಾವು ಈ ವರೆಗೂ ಹತಾಶರಾಗಿ, ನಮ್ಮಕಡೆಯ ದೈವವೆ ನಿದ್ರಾವಸ್ಥೆ ಯಲ್ಲಿದೆ ಎಂದು ಎಣಿಸುತ್ತಿದ್ದೆವು, ಆದರೆ, ಈಗಿನ ನಿನ್ನ ಮಾತನ್ನು ಕೇಳಿ