ಪುಟ:ಹಗಲಿರುಳು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜೂನ್ ೧೯೧೮. ದರೆ, ಕಾಲವೆ ನಮಗೆ ಅನುಕೂಲವಿದೆಯೆಂದು ತೋರುವುದು, ಹಚ್ಚೆನು ಹೇಳಲಿ, ಈ ನಮ್ಮ ಮಕ್ಕಳ ಬೆನ್ನಿಗೆ ಅಂಟಿದ ಹೊಟ್ಟೆ ತುಂಬುವ ಈ ಸೂಚನೆಗೆ ತುಂಬ ಕೃತಜ್ಞರಾಗಿರುವೆವು, ಅದಕ್ಕಾಗಿ, ಈಗಲೆ ಹೊರಡು ತೇವೆ. [ಆಗ ಮೈ ಮೆರತು ನಿರಾಶವಾದ ಕತ್ತಲೆಯ ಎಣಿಕೆಗಣ್ಣಗೆ ನೀರು ಮುಟ್ಟಿಸಿದಂತಾಯಿತು. ಅದರಿಂದ, ಹೀಗೆ ಹೇಳಿತು.] ಕತ್ತಲೆ:- ಪ್ರಿಯರೆ, ನಿಮಗೆ, ನನ್ನ ಅದೃಶ್ಯಶಕ್ತಿಯ ಕತ್ತಲೆಯ ಕಂಬಳಿಯನ್ನು ಹೊದೆಯಿಸುತ್ತೇನೆ. ಇದರಿಂದ ನಿಮ್ಮನ್ನು ಎಚ್ಚತ್ತರೂ ಯಾರೂ ಕಾಣ ಲಾರರು. [ಆ ಮೇಲೆ, ಕತ್ತಲೆಗೆ ಕೃತಜ್ಞತೆಯನ್ನು ಒಪ್ಪಿಸಿ, ಆ ಪಂಗಡವು ಹೊರಟಿತು. ಅವರಲ್ಲಿ ಅನೇಕ ತರಗತಿಯವರಿದ್ದರು. ಕಳ್ಳರ ಗುರುವೆಂಬ ವನು ಒಂದು ಸಮಾಜದ ಮುಂದಾಳು, ಹೆಂಡದಗಂಡನೆಂಬವನು ಬೇರೊಂದು ನೆರವಿಯ ಮೇಲಾಳು, ಜೂಜಿನ ಓಜನೆಂಬವನು ಬದಲೊಂದು ಸಂದಣಿಯ ಮೊದಲಿಗನು, ಇವರೆಲ್ಲ, ಒಂದು ಗಿಡುವಿನ ಮೂರು ಶಾಖೆಗಳು, ಎಲ್ಲರೂ ಇಂದು ಒಂದೆ ಕೆಲಸದಲ್ಲಿ ಕೈ ಹಾಕಿದ್ದರು. ಒಂದು ಹುರಿಗೆ ಮತ್ತೆರಡು ಸೇರಿದರೆ ಮುಪ್ಪುರಿಯಾಗಿ ಮತ್ತಷ್ಟು ಬಲವಾಗುವುದಿಲ್ಲ ವೆ? ಆದರೆ, ಹಲವು ಸಮಗಾರರು ಸೇರಿ ಚರ್ಮದ ಹದಗೆಟ್ಟಿತು, ಎಂಬ ಮಾತೂ ಇದೆ.] ಧನಕೋಟನಾರಾಯಣಸೆಟ್ಟಿಯ ಮಾಳಿಗೆಮನೆ ಕಳ್ಳರ ಗುರು:- ಅ, ಈ ಮನೆಯ ಗಂಭೀರತೆಯನ್ನು ಏನೆಂದು ಬಣ್ಣಿಸಲಿ ! ಒಂದಕ್ಕೊಂದು ಸೇರಿ ಎರಡಾಗಿ, ಮೆಲ್ಲ ಮೆಲ್ಲನೆ ಹತ್ತು ನೂರು ಸಾವಿರ ಲೆಕ್ಕದಿಂದ ಕೋಟ್ಯಂತರವಾಗುವಂತೆ ಇದೂ ಇಷ್ಟು ಎತ್ತರವಾಗಿದೆ. ಇದರ ಈ ಮಹತ್ವವು ನೆಲೆಗೊಳ್ಳಲಿಕ್ಕೆ ನಮ್ಮಂಥವರ ಎಷ್ಟು ಮನೆಗಳಿಗೆ ಮುಳ್ಳ ಕಟ್ಟಿಗಳು ಬಿದ್ದಿವೆಯೊ? ಎಷ್ಟು ಸಂಸಾರಗಳು ಹಾದಿ ಬೀದಿಗಳಲ್ಲಿ ಅಲೆಯು ತಿರುವವೊ ? ಇನ್ನೆಷ್ಟು ಮಂದಿಗೆ ಕಾಡಸೊಪ್ಪು ತೋಡನೀರು' ಆಗಿದೆಯೋ ? ಮತ್ತೆಷ್ಟು ಜನರು ಹೇಳಿದ ಕೆಲಸ, ಹಾಕಿದ ಕೂಳು'ಗಳಿಗೆ ಕೈಯೊಡ್ಡಿ ಎದೆ ಮುರಿದು ಕೆಲಸಮಾಡುತ್ತಿರುವರೋ ? ಹಾ! ಲೋಕವನ್ನೆ (ಪ್ರಾಣಾಯ ಸ್ವಾಹಾ' ಎಂದು ನೀರುಗುಡಿದು ತಿಂದು ತೇಗುವ ಈ ದೊಡ್ಡವರನ್ನು ನಿರ್ಮಿಸಿದ ಸ್ವಾರ್ಥಿಯಾದ ಹಿರಣ್ಯಗರ್ಭನ ಸ್ವಾರ್ಥವು ಇವರಲ್ಲಿ ಯ