ಪುಟ:ಹಗಲಿರುಳು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. .* ಹೊಳೆದು ಕಾಣುತ್ತಿದೆ, ತಂದೆಯಂತೆ ಮಗ'ನೆಂಬ ಮಾತು ಇಲ್ಲಿಯೆ ಅನ್ವಿತವಾಗಿದೆ. ಹೆಂಡದ ಗಂಡ:- ಪ್ರಿಯನೆ, ನಿನ್ನ ಮಾತು ಸರಿ, ಇಂಥ ದೊಡ್ಡವರು, ಕೈತೋಡು ಗಳಂತಿರುವ ಸಣ್ಣ ಸಣ್ಣ ಭೂಭಾಗಗಳನ್ನು ತಮ್ಮ ವಶಮಾಡಿ ಹರಿವ ಹೆದ್ದೊರೆ ಯಂತಿದ್ದರೆ, ಲೋಕ ಹಿತವೆ ಆಗುತ್ತಿತ್ತು, ಆದರೆ, ಎಲ್ಲ ವಕ್ಕೂ ಬಾಯಿದೆರೆ ವರಲ್ಲದೆ, ಅದರಿಂದೇನೂ ಪ್ರಯೋಜನವಿಲ್ಲ, ಊರಿಗೂ ತಮಗೂ ಕಷ್ಟವೆ: ಈ ಮನೆಯೆ, ಅದನ್ನು ಸೂಚಿಸುತ್ತಿದೆ. ಮಗು ಮುಟ್ಟುವಂತೆ ಉಂಡು, ತಲೆಬಗ್ಗಿ ಸಲಾರದ ಹೊಟ್ಟೆಬಾಕನ ಉರ್ಧ್ವದೃಷ್ಟಿಯಿಂದ ಮೇಲೆ ನೋಡುತ್ತಿದೆ. ಮಿತಭೋಜನವನ್ನು ಮಾಡಿದರೆ, ಆ ಅನ್ನರಸವು ನಾಡಿ ನಾಡಿಗಳಲ್ಲಿ ಯ ಸರಿದು ಶರೀರಕ್ಕೂ, ಅದರಿಂದ ತನ್ನನ್ನು ಹೊಂದಿದವರಿಗೂ ಉಪಕಾರ ವಾಗುವುದು. ಆದರೆ, ಅದು ಮಿತಿಮೀರಿದರೆ, ಅರಗದೆ ತನಗೂ ಇತರರಿಗೂ ಉಪದ್ರವವೆ ಸರಿ, ನೋಡು ಅದಕ್ಕಾಗಿಯೇ ನಾನು ಸಾರದ ಅಂಗಡಿಯನ್ನು ಎಲ್ಲರಿಗಾಗಿ ತೆರೆದಿರುವುದು, ಆ ಸಾರವನ್ನು ಸೇವಿಸಿದರಲ್ಲದೆ ಸಂಸಾರವು ಸಾರ್ಥವಾಗುವುದು ? ಆದರೇನು ಈ ದುಷ್ಟರು, ಆ ಸಾರಕ್ಕೆ ಹೆಂಡವೆಂದು ಹೆಸರಿಟ್ಟು, ನನಗೂ, ನನ್ನಲ್ಲಿ ಹೊಕ್ಕು ಹೊರಡುವ ಸಾರಜ್ಞರೆಲ್ಲರಿಗೂ ಕಪ್ಪು ಕರೆಯಿಡತೊಡಗಿದ್ದಾರೆ. ಸಾರವೆಂದರೆ ಸಾಮಾನ್ಯವೆ? ಸರಸ್ವತೀ ಭಕ್ತ ನಂತೆ, ನನ್ನ ಸಾರಸೇವಕನು, ಮೊದಲು ಚಾರಕನಾಗಿದ್ದರೂ ಎರಡನೆ ನಿವಿ ಷಕ್ಕೆ ಚಕ್ರವರ್ತಿಯಾಗುತ್ತಾನೆ. ಅಂಥವರು, ಯಾವಾಗಲೂ ಸರ್ವಸಮದೃಷ್ಟಿ ಯವರು, ಅವರಿಗೆ, ಯೋಗಿಗಳಂತೆ, ಕಾಡೂ ನಾಡೂ, ಹುಂಚವೂ ಮಂಚವೂ, ಇರುಳೂ ಹಗಲೂ, ಒಂದೇ ರೀತಿ, ಅವರು ಶಕ್ತಿದೇವಿಯನ್ನು ಆರಾ ಧಿಸಿ, ಮಹಾಶಕ್ತಿ ಸಂಪನ್ನರಾಗಿದ್ದರು. ಶಂಕರಾಚಾರ್ಯನೆಂಬ ದುಷ್ಟನೊಬ್ಬನು ಹುಟ್ಟಿ, ಆ ಶಾಸ್ತ್ರೀಯರ ಬೇರನ್ನೆ ಕಿತ್ತು ಬಿಟ್ಟನು, ಆ ಹಿಂದಿನ ವೈಭವವನ್ನು ನೆನೆದರೆ ಹೊಟ್ಟೆಗೆ ಕತ್ತಿ ಗುತ್ತಿ ದಂತಾಗುತ್ತಿದೆ. ಆದರೆ, ಆ ತುಂಡಾಗಿ ಉಳಿದ ನಮ್ಮ ಮತದ ಕಿರುಬೇರುಗಳು, ಈಗಿನ ಮಳೆಯಿಂದ ನಮ್ಮವರ ಆಶಾ ತಂತುವಿನೊಡನೆ ಅಲ್ಲಲ್ಲಿ ಚಿಗುರುತ್ತಿ ರುವುದೊಂದು ಶುಭಚಿಹ್ನೆ, ಆದರೆ, ಈ ದುಷ್ಟರ ಮೂಗಿಗೆ ಬಳ್ಳಿ ಸುರಿಯದಿದ್ದರೆ, ಎಲ್ಲವೂ ಗೊಡ್ಡಾ ಕಳಿನ ಹಾಲೆ ಸರಿ