ಪುಟ:ಹಗಲಿರುಳು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕne, ಜೂನ್‌ or೧೮. ಬಿಡುವರು. ಇರಲಿ, ಆ ಮನೋರಥವು ಮೂರು ಲೋಕದಲ್ಲೂ ಹರಿದು ಎಲ್ಲವನ್ನೂ ವಶಮಾಡುವುದು, ಮಹಾರಾಜರ ಹಾಗೂ ಮಹೇಂದ್ರನ ಏಕಾಂತಮಂದಿರಕ್ಕೂ ಹೋಗುವುದು, ಶೇಷನ ಹಡೆಮಣಿಯ, ಅದಕ್ಕೆ ಅಂಗೈನಲ್ಲಿ ಯಂತಾಗುವುದು, ಆದರೆ, ಈ ಮನೋರಥವನ್ನು, ಕಾರ್ಯ ರಥವು ಹಿಂಬಾಲಿಸಬೇಕಾದರೆ, ಮೇಲೆ ಹೇಳಿದಂತೆ ಮೊದಲಿನದಕ್ಕೆ ವಿಚಾರಾ ಶ್ವವನ್ನು ಕಟ್ಟದೆ ಸಾಗದು, ಈಗ ಕತ್ತಲೆ ತನ್ನ ರಥಕ್ಕೆ ಯಾವುದನ್ನು ಕಟ್ಟಿದೆಯೋ, ನೋಡೋಣ, ತನ್ನ ಮನಸ್ಸಿಗೆ ಏನೋ ಒಂದು ಕಲ್ಪನೆ ಕಚ್ಚಿಹಿಡಿದುದರಿಂದ, ಕತ್ತಲೆ ಹೊರಟಿತು. ಪಂಚವಟಿಯಿಂದ ಅಣ್ಣರಾವಣ ನಲ್ಲಿಗೆ ಓಡಿಹೋದ ಶೂರ್ಪಣಖೆಯಂತೆ ಗಾಢಾಂಧಕಾರನ ಕಾಡಿಗೆ ಧಿಂಕಿಟ್ಟುದು, ಅ:, ಅದೆಂಥ ಅರಮನೆ ಸುತ್ತಲೂ ಮುಳ್ಳಿನಕೋಟೆ. ಹೊರಗಿನ ಮನುಷ್ಯಮಾತ್ರಕ್ಕೆ ದಾರಿ ಇಲ್ಲದಿದ್ದರೂ ದುರ್ಬುದ್ಧಿಗೆ ಹೆಬ್ಬಾಗಿಲು ತೆರೆದೇ ಇದೆ, ಮನೆಗಂಬಿಗಳಿಗಾಗಿ ಹೆಮ್ಮರಗಳೆ ಮೈಗೆಟ್ಟಿವೆ. ಕೊಂಬೆ ಗಳೆ, ಉಪ್ಪರಿಗೆಯ ಜಂತೆಮುಚ್ಚಳಗಳು, ರೆಂಬೆಸೊಪ್ಪುಗಳೆ, ಗಳವಾಡುಗಳು, ಆ ಜಂತೆಗಳ ಬದಿಯಲ್ಲಿ ಕೋಟಿರಗಳ ಕಪೋತಪಾಲಿಕೆಗಳು, ಒತ್ತಟ್ಟು, ಲತಾಮಂಟಪಗಳ ರಚನೆ ನೇರಾಗಿದೆ. ತರತರದ ಕಲ್ಲು ದಿಣ್ಣೆಗಳ ಮಣೆ ಮಂಚ ಜಗಲಿಗಳೂ, ಗುಡ್ಡೆಗಳ ಮುಖಶಾಲೆಗಳೂ ಕಂಗೊಳಿಸುತ್ತಿವೆ. ಉಪ್ಪ ರಿಗೆಯಿಂದ ಮುಖಶಾಲೆಗಿರುವ ದಾರಿಗಾಗಿ, ಕೆಲ ಕೊಂಬೆಗಳು ಗುಡ್ಡಗಳಿಗೆ ನೀಡಿರುತ್ತವೆ. ಆಯಾವ್ಯಕ್ತಿಗಳಿಗೆ ತಕ್ಕಂತೆ, ಪೊದರುಗವಿಗಳ ಕೋಣೆಗಳು ಭದ್ರವಾಗಿವೆ. ಈ ಗೂಢವಾದ ಬೀದಿಗೆ, ಅಂಧಕಾರನೆಂಬವನೆ ದೊರೆ. ಹುಲಿ, ಸಿಂಹ ಮೊದಲಾದವರೆ ಅವನ ಸಭ್ಯರು, ಅವರ ಜೀವನ ಕ್ರಮವೆಂದರೆ ಅನಿರ್ವಚನೀಯವು, ಮತ್ತ್ವನ್ಯಾಯದಂತೆ ಅಬಲಪ್ರಾಣಿಗಳು ಬಲವಿದ್ದವು ಗಳಿಗೆ ಬಿಸಿರೊಟ್ಟಿ, ಅರಸಾದ ಅಂಧಕಾರನಿಗೂ ಇದೇ ಇಷ್ಟವಂತೆ. ಇದೆ ಪ್ರಕೃತಿಯೆಂದೂ, ಆಯಾ ವ್ಯಕ್ತಿಗಳ ಬಾಯಿಗೆ ಅಡ್ಡ ಬರುವುದೆ ವಿಕೃತಿ ಯೆಂದೂ ಎಣಿಸಿ, ಅವನು ಆಪ್ರಕೃತಿಹಿತವಾಗಿರಬೇಕೆಂದು ಅಪ್ಪಣೆಮಾಡಿರು ತಾನಂತೆ, ಅಂಗವಿಕಲರಾಗಿ ಅಲ್ಲವೆ ರೋಗಗ್ರಸ್ತರಾಗಿ, ಬರಿದೆ ಅಶನಧ್ವಂಸಿ ಗಳೆಂದೆನಿಸಿ ಇರುವುದಕ್ಕಿಂತ, ಬಲವಂತರಿಗೆ ಅನ್ನದ ಜೀಮೂತವಾಹನರಾಗ ತಕ್ಕುದೆ ಧರ್ಮವೂ ರಾಜ್ಯಹಿತವೂ ಆಗುವುದೆಂದು, ಆ ಆಜ್ಞೆಗೊಟ್ಟಿರಬಹುದೊ ಏನೊ? ಆದರೆ, ಪ್ರತಿಯೊಂದು ಪ್ರಾಣಿಯ ಅಂತರದಲ್ಲಿ ರುವ ಪುಕೃತಿ ಗುಣವು