ಪುಟ:ಹಗಲಿರುಳು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು.' ಪ್ರಾಯವೇರಿದಂತೆ ಹೊರಗಣ ವಿಕೃತಿಗುಣದಿಂದ ಮಿಶ್ರಿತವಾಗಿ ಮಾಸಿಹೋ ಗುವುದು; ಆ ಮಿಶ್ರಿತಗುಣವು ಪ್ರಕೃತಿಗೆ ಭಿನ್ನವಾಗಿ ಅದರಲ್ಲಿ ವಿಕೃತಿಯೆ ಪ್ರಬಲವಾಗಿರುವುದು; ಅದರಿಂದಲೇ ಅದು ಅಚಲವಾದ ವ್ಯಕ್ತಿಗಳನ್ನೆಲ್ಲ ತೃಷ್ಣಯ ಗಾಳದಿಂದ ಸೆಳೆಯಹತ್ತುವುದು, ಆ ಮಿಶ್ರಣವೆ ಪ್ರಕೃತಿಯಾದರೆ, ಅಬಲಪ್ರಾಣಿಯ ಪ್ರಕೃತಿಗೆ ವಿರುದ್ಧವಾಗಿ ಅದನ್ನು ಬಡಿದು ಬಾಯಿತುಂಬಿ ಸುವ ಎಣಿಕೆ, ಆ ಬಲಿಷ್ಠ ಪ್ರಾಣಿಯಲ್ಲಿ ಮೊಳೆಯಬಹುದೆ ? ಶುದ್ಧವಾದ ಬಂಗಾರದ ಪ್ರಕೃತಿ ಮೆದುವಾಗಿ ಕೆಲಸಕ್ಕೆ ಬರುವುದಿಲ್ಲ ವೆಂದು, ಮನ ಬಂದಂತೆ ಕಣ್ಮುಚ್ಚಿ ಚೆಂಬನ್ನು ತುಂಬಿದರೆ ಯಾಕಾದೀತು ? ಇರಲಿ, ಇದಕ್ಕೆ ಬೆರಗಾಗಿ ಬರಿದೆ ಮರುಕಪಡುವುದೇಕೆ ? ನಮ್ಮ ನಾಗರಿಕತೆಯ ನಾಡಿನಲ್ಲಿ ಯಾದರೂ, ಆ ಅನ್ಯಾಯವು ಕಾಲ್ಲೆ ಗೆದಿರುವುದಿಲ್ಲ. ಹಲವರು, ಹೊರ ಹೊರಗೆ ಮಾತ್ರ ಪರೋಪಕಾರದ ಬಣ್ಣವನ್ನು ಬಳಿದಿರುವರಲ್ಲದೆ, ಒಳ ಗೊಳಗೆ ಸ್ವಾರ್ಥದ ಹೆಬ್ಬಾವಿನ ಹೆಬ್ಬಾಯನ್ನೆ ತೆರೆದಿರುತ್ತಾರೆ. ಹೋಗಲಿ, ಅಂಥವರ ಮಾತೇಕೆ ? ಅವರನ್ನು ದಾರಿಗೆ ತರಲಿಕ್ಕೆ ದೇವರಿಗೂ ಅಸಾಧ್ಯವು. ಬೇರೊಣಗಿದ ಮರಕ್ಕೆ ನೀರೆರೆದು ವಸಂತನನ್ನು ಕಾಯುತ್ತಿದ್ದರೂ ಅದು ಹೂಬಿಡುವುದೆ ? ಮುಂದಿನ ಮೊಳಕೆಯ ಜನಾಂಗವಾದರೂ ಕಣ್ಣೆರೆದು, ಲೋಕಹಿತಕಾರಿಯಾಗಿ ಏಳೆಗೆ ಬರಬೇಕೆಂಬುದು ಮಾತ್ರ ನಮ್ಮ ಉದ್ದೇಶವು. ಇರಲಿ, ಕತ್ತಲೆಯ ಕೆಲಸವೇನು, ನೋಡೋಣ.] ಕತ್ತಲೆ:- (ಅಳುತ್ತ) ಅಣ್ಣ, ' ಲೋಕದಲ್ಲಿ ಸ್ವಚ್ಛೆಯಿಂದ ತಾನುತಾನಾಗಿರು' ಎಂದು, ನೀನು, ನನ್ನನ್ನು ನಾಡಿಗೆ ಕಳುಹಿಸಿ, ನಿನ್ನ ಕಾರ್ಯಭಾರದ ಹೊರೆ ಯನ್ನು ಇಳಿಸಿಕೊಂಡೆಯಷ್ಟೆ, ಆದರೆ...(ಎಂದು ಗೋಳಿಡತೊಡಗಿದಳು).' ಅಂಧಕಾರ:-(ಅಚ್ಚರಿಯಿಂದ) ತಂಗಿ, ಇದೇನು ವಿಕೃತಿ ? 'ನಾಡಿನಲ್ಲಿ ನಮ್ಮ ಸಮೀಪಬಂಧುಗಳಾದ ರಾತ್ರಿನಕ್ಷತ್ರಪತಿಗಳಿಗೆ ಪೂರ್ಣಾಧಿಕಾರವು ದೊರೆತಿದೆ. ಅದರಿಂದ ನಾನೂ ಅವರೊಡನೆ ವಿಹರಿಸುತ್ತೇನೆ' ಎಂಬ ನಿನ್ನ .ಒತ್ತಾಯ ಕ್ಯಾಗಿಯೆ ಕಳುಹಿದೆನು. ಈಗ, ಹೆಂಗುಸಾದ ನಿನ್ನ ಸ್ವಾತಂತ್ರ್ಯಪ್ರಿಯತೆಗೆ ಬಡ್ಡಿ ಸಿಕ್ಕಿತೆಂದು ನನ್ನ ಮೇಲೆ ತಪ್ಪನ್ನು ಹೊರಿಸುವಂತೆ ತೋರುವುದು. ಇರಲಿ, ಈಗಿನ ಸಂಕಷ್ಟವೇನು ?