ಪುಟ:ಹಗಲಿರುಳು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜುಲಾಯಿ ೧೧ಕೆ. ಕತ್ತಲೆಃ- ಅಣ್ಣ, ಅಲ್ಲಿರಲಿಕ್ಕೆ ನನಗೆ ಒಪ್ಪಿಗೆ ಇತ್ತು, ರಾತ್ರಿ ರಾಣಿಯ ಅಕ್ಕನು. ನಕ್ಷತ್ರಪತಿರಾಜನ ಭಾವನು ಮತ್ತೇನು, ನನ್ನ ಕೈಯಾಟವೇ ಆಟವೆಂದು ಎಣಿಸಿದ್ದೆನು. ಹಾ! ಎಲ್ಲ ವೂ ಬಯಲುಬರಗಿದಂತಾಯಿತು. ಆದರೆ, ಭಾವನ ಎದೆಯಲ್ಲಿ, ಇನ್ನೂ ನನ್ನ ಪ್ರೇಮವು ನಾಟದ ಕಪ್ಪು ಗುರುತು ಇದ್ದೇ ಇದೆ. ಅದನ್ನು ಕಂಡು ಕರುಬಿ, ಲೋಕದ ಮುಂದಾಳಾದ ತೇಜಸ್ವಿ, ಬಹಳ ಹೆಣಗಿ ತಲೆಯಾಡಿಸಿದನು. ಆ ದುರ್ಬುದ್ಧಿಗೆ ತಕ್ಕ ಪ್ರಾಯಶ್ಚಿತ್ತವಾಗಿ ಈಗ ಅವನ ಹೆಸರೂ ಇಲ್ಲದಂತಾಗಿದೆ. ಆದರೇನು ? ಈಗ ಲೋಕವೆಲ್ಲವೂ, ಭಾವನನ್ನು , ಬಹಿಷ್ಕರಿಸಿ ತಿರಸ್ಕರಿಸಿಬಿಟ್ಟಿದೆ. ಅದರಿಂದ, ಹೆದರಿ ಅವನೂ ಅಕ್ಕನೂ ನನ್ನನ್ನು , ಊರಿಂದ ಹೊರಡಿಸಿಬಿಟ್ಟರು, ಅಣ್ಣ, ಅವರು ಅದಕ್ಕೆ ಈಗ ಸಾವಿರಕಾರಣಗಳನ್ನು ತೋರಿಸಬಹುದು, ಅಂತೂ, ದೊಡ್ಡವರ-ಅದ ರಲ್ಲಿ ಯ ಬಂಧುಗಳ ಎಡೆಯಲ್ಲಿ ದಿನದೂಡುತ್ತಿರುವ ಬಡವರ ಬಾಳು ವೆಯೆ ಬೇಡ. ಚೌಪದಿ || ಪರಿಚಯವು ಕಡಿಕಡಿಮೆಯಾದಲ್ಲಿ ಮಾನಂ । ಅರೆಗಲ್ಲಿ ಗೆಣೆಯಾಗಿ ನೋಯದೆಂತೆಂತುಂ || ಪರಿಚಯವು ಹತ್ತಿ ಹತ್ತಿರಕ್ಕೆ ಬಂದಂತ | ಕೊರಗುವುದು ಚಿಗುರಂತೆ ಮುಟ್ಟಲಾಮಾನಂ || ೧ | ಕುಸುವು ಪಟ್ಟದಿ || ಗುಟ್ಟು ಗೊತ್ತಿರದಲ್ಲಿ ಗೌರವವನೊಳಗೊಳಗೆ ! ಪಟ್ಟಿರಿಸುತಾಳಾಗುವುದುಚಿತ್ತವು | ಬಟ್ಟ ಬಯಲಿನ ಬಂಧುಗಳ ಚೌಕದಲಿ ಮೋರೆ | ಗೆಟ್ಟು ಮಾನವನಲ್ಲಿ ಬಚ್ಚಿಡುವುದು? _ || | ಅಂಧಃ-(ಕೋಪಿಸಿ) ತಂಗಿ, ಏನು, ಭಾವನೂ ಹೀಗೆ ಮರೆಮೋಸಮಾಡಿದನೆ ? ನಾವು ರಾಜನೆಂದೆಣಿಸಿ ಹಿರಿಯ ತಂಗಿಯನ್ನು ಕೊಟ್ಟು, ಅವನನ್ನು ಮನ್ನಿಸಿದರೂ ಅವನ ಕುಟಿಲತೆ ಕುಂದುವುದಿಲ್ಲ, ಆ ರಾತ್ರಿಯ ಕೈಹಿಡಿಯದಿದ್ದರೆ, ಆರ್ಯನ ಬಿಸಿಲಬೇಗೆಯಿಂದ, ಇಷ್ಟರೊಳಗೇ ಅವನ ಗತಿ ಏನಾಗುತ್ತಿತ್ತೋ? (ಹಾಕಿದ ಅಂಗಿ ಹಾರಿದರೆ ಹೋಗುವುದೆ?” ನಮ್ಮೊಡನೆ ನೆಂಟನಾಗಿದ್ದರೂ ಅವನ ಹುಟ್ಟು ಗುಣವು ಹೇಗೆ ಅಳಿವುದು? ಅದಿರಲಿ, ಈ ಶಾಯಿಯಾದ ಕಾಡಿನ ಗವಿಯೆಂಬ ಗರ್ಭದಲ್ಲಿ ಒಡಹುಟ್ಟಿ ಒಡನಾಡಿ ಒಬ್ಬುದ್ಧಿಯಿಂದ ಬಳೆದ ತಂಗಿ ರಾತ್ರಿ ಬದಲಾದಳು ! ಅಷ್ಟೆ ಅಲ್ಲ, ದೊರೆತನದ ಉಬ್ಬಿ ನಲ್ಲಿ, ಅವಳಿಗೆ ಈಗ ಸಹೋದರಪ್ರೇಮವೂ