ಪುಟ:ಹಗಲಿರುಳು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕಲಿತಿ, ಜುಲಾಯಿ ೧೯೧೮, ಇಊರುರು ಬಿಕ್ಕಬೇಡುವ ಬ್ರಾಹ್ಮನನ್ನು ಬೇಡಿಕಾಡುವ ನಿನಗೆ-ಲಕ್ಷಾಧಿ ಪತಿಗೆ ನಾಚಿಕೆ ಇಲ್ಲ ವೆ?” ಎಂದು ಕಟಕಿಯಾಡಿದನು. ಹುಡುಗ- ಬೇಡಿದೆನೆ? ಮತ್ತೇಕ, ಈ ಪಂತದ ಹೊಂತಗಾರಿಕೆ ? ಹೂಗೊಡು ವಲ್ಲಿ ಹೂವಿನ ಎಸಳಾದರೂ ಕೊಟ್ಟೇ ತೀರಬೇಕು.* ಎಂದು ಕೊನೆಯ ಮರುಮಾತಾಡಿದನು. ಮಧ್ಯಸ್ಥರೂ ಸರಿಸರಿ' ಎಂದರು. ವೆಂಕಣ್ಣನು “ಹೌದು, ಮಾತಿಗೆ ಮರೆಯಿಲ್ಲ, ಆದರೆ, ನನ್ನಲ್ಲಿ ಬೇರೆ, ಚೆಂಬಿನ ಕಾಸೂ ಇಲ್ಲವೆಂಬುದು ಎಲ್ಲರಿಗೂ ಗೊತ್ತು. ಈ ವರೆಗೆ ಸಾಕಿ ಸಂರಕ್ಷಿಸಿದ ಕನ್ಯಾರತ್ನವೊಂದುಂಟು. ಅದನ್ನು ಕೊಟ್ಟು ಮಾತಿನ ಮೈಲಿಗೆಯನ್ನು ಮಡಿ ಮಾಡುತ್ತೇನೆ.” ಎಂದನು. ಮಧ್ಯಸ್ಥರು ಅಸ್ತುಗೊಟ್ಟರು. ಹುಡುಗನ ಮಾರುದ್ದದ ಕೈ ಗೇಣುದ್ದಕ್ಕೂ ನೀಡಲಿಲ್ಲ. ಉಕ್ಕುವ ನಾಲಗೆ ಮಿಕ್ಕಿ ಮಿಸುಕಲಿಲ್ಲ, ಕನ್ನಡಿಮೋರೆಗೆ ಇಬ್ಬನಿ ಮುಸುಕಿದಂತಾಯಿತು. ಮಾತಿಗೆ ತಪ್ಪಿ ಬರಕೊಟ್ಟ ಒಪ್ಪಿಗೆಯ ಕರಾರು ಎಲ್ಲಿದೆ?” ಎಂದು ಧಿಕ್ಕರಿಸುವ ಈಗಿನ ಲೋಕದ ನವನಾಗರಿಕತೆ ಅಂದು ಬಂದಿಲ್ಲ, ಆದರೆ, ಆ ಭಿಕ್ಷಾಪಾತ್ರದ ಜಲಧಾರೆಯಿಂದ ಮಲಿನವಾಗಿ ತೋರುವ ಕನ್ನೆಯ ಕೈಹಿಡಿ ಯಲಿಕ್ಕೆ, ಆಗರ್ಭ ಶ್ರೀಮಂತನಾದ ಆ ಹುಡುಗನಿಗೆ ಹೇಗೆ ಮನಸ್ಸು ಮೆಚ್ಚು ವುದು? ಅಳಿ, ಈ 'ಕುಶಾಲುಕೊಳ'ವು ಯಾಕೆ ಬೇಕಿತ್ತು? ಎಂದು ಚಿಂತಿಸಿ ದನು, ಕಡೆಗೆ ಹೇಗಾದರೂ ಮದುವೆಯಾಯಿತು, ಹುಡುಗಿ ಗಂಡನ ಮನೆ ಹೊಕ್ಕರೂ, ತಂದೆ ಊರ ಮೇಲೇ ಇದ್ದನು. ಕೆಲಗಾಲವು ಕಳೆಯಿತು. ಒಂದುದಿನ ಮಧ್ಯಾಹ್ನದಲ್ಲಿ ಆ ಶ್ರೀಮಂತನ ಮಗನು ದೇವರ ಪೂಜೆಯಲ್ಲಿ ದ್ದನು, ಹೊರಗಣಿಂದ ಕೆಮ್ಮುವ ಸದ್ದು ಕೇಳಿಸಿತು. ಯಾರು? ನೋಡಿ ಬಾ' ಎಂದು ಹೆಂಡತಿಯನ್ನು ಕಳುಹಿದನು, ಹೆಂಡತಿ ಹೋಗಿ ಬಂದು “ಯಾವುದೊ ಒಂದು ಬಿಕ್ಕಿಯ ಜೋಗಿ' ಎಂದು ಹೊರಗೆ ಕೇಳುವಂತೆ ಹೇಳಿ ದಳು, “ಮಡಿಗೊಟ್ಟು ಊಯ ಹೇಳು' ಎಂದು ಗೃಹಸ್ಥನು ಹೇಳಿದೊಡನೆ ಆಕೆ ಹೊರಗೆ ಹೋದಳು. ಈ ಸಂವಾದವನ್ನು ಕೇಳಿದ ಬ್ರಾಹ್ಮಣನು “ಭವತಿ ಭಿಕ್ಷಾಂ ದೇಹಿ' ಎಂದು ಭಿಕ್ಷಾಪಾತ್ರೆಯನ್ನು ನೀಡಿದನು. ಅಷ್ಟರಲ್ಲಿ ಒಳಗಿಂದ ಗೃಹಸ್ಥನೂ ಬಂದು ನೋಡುತ್ತಾನೆ ! ಯಾರು? ಮಾವನು ! ಅಳಿಯನ ಎದೆ ಹಾರಿದಂತಾಯಿತು. ಕೋಪಿಸಿಕೊಂಡು “ಏನೆ, ಹುಬ್ಬಿನ ಕೂದಲು ಕಣ್ಣಿಗೆ ಅಡ್ಡಾಯಿತೋ? ಹೆತ್ತು ಬಾಲ್ಯ ಮೊದಲ್ಗೊಂಡು ಹೊತ್ತು ಹೊರೆದ ದೈವತ್ವ