ಪುಟ:ಹಗಲಿರುಳು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜುಲಾಯಿ ೧೧೮. ದರೂ, ಅವಳಲ್ಲಿ ಯ ಬೇಸರವನ್ನು ನಿನ್ನಲ್ಲಿ ಡುವ ಅಲ್ಪಬುದ್ಧಿ, ನನಗೂ ಈ ನನ್ನ ಸಭ್ಯರಿಗೂ ಇಲೆಲಾರದು, [ಒಡನೆಯೆ ಸಿಂಹರಾಜನ ಮುದುರಿದ ಕೇಸರವು ನೆಟ್ಟಗೆ ನಿಂತುದು, ಯಜ್ಞಕುಂಡದ ಎರಡು ಕಿಡಿಗಳೆಂಬಂತೆ ಕಣ್ಣು ಗಳು ಮಿಣಿಮಿಣಿಸಿದುವು. ಮೇಲೆ ಹೊಮ್ಮುವ ಹೊಗೆಯಂತೆ ನಿಡುಸುಯ್ದು ಬುಬ್ಬುಸ್ಸೆಂದಿತು, ದರ್ಭಾದಿಗಳಲ್ಲಿ ಆವರಿಸಿ ಅನ್ವಳಿಸುವ ಸಪ್ತ ಜಿಹ್ವ (ಅಗ್ನಿ) ನಂತೆ, ಮಿಂಚಿನ ಕೇಸರಗಳು ಕಳಚಳಿಸಿದುವು. ತೇಜಸ್ವಿಯ ದ್ವೇಷಿಗಳಾ ದರೂ ದಾರಿಗಾಣಬೇಕಾದರೆ, ಅವನ ಸಹಾಯವೇ ಬೇಕೆಂಬಂತೆ ಮೊರೆ ಕಿಚ್ಚಿನ ಅಚ್ಚಾಗಿತ್ತು. ಹಗೆಗಳನ್ನು ಹೊಕ್ಕು ಹೊಡೆಯಬೇಕೆಂಬ ಮಾತಿ ಗನುಸಾರವಾಗಿ, ತೇಜಸ್ವಿ ಆ ಸಿಂಹರಾಜನ ಮುಖವನ್ನು ಸೇರಿರಬಹುದು, ಹಾವಿಗೆ ಹಾಲೆರೆದರೆ ನಿಷವೆ ಏರುವುದು; ನೀಚರಿಗೆ ವಿದ್ಯಾಭ್ಯಾಸದಿಂದ ದುರ್ಬುದ್ಧಿಯೆ ಪ್ರಬಲವಾಗುವುದು ; ಹಾಗೆಯೆ, ಆ ಘಾತುಕ ಜಂತುಗಳಿಗೆ ತೇಜಸ್ಸಿನ ಕಣ್ಣಿನಿಂದಲೂ ಕಾಡುದಾರಿಯ ಕಾಣವುದು. ] ಸಿಂಹರಾಜ ಒಡೆಯನೆ, ತನ್ನ ಶಕ್ತಿಯನ್ನೆಲ್ಲ, ಪ್ರಜೆಗಳಾದ ನಮ್ಮನ್ನು ಕತ್ತೆರೆ ಯಿಸಿ ನಡೆಯಿಸುವುದಕ್ಕಾಗಿ ಉಪಯೋಗಿಸಿ ತ್ಯಾಗರಾಜನಾಗಿರುವ ನಿನ್ನ ಉದಾರಭಾವವನ್ನು ಎಷ್ಟು ಹೊಗಳಿದರೂ ಕಡಮೆಯೆ, ಇರಲಿ, ಜೀವದ ಬೇನೆ ದೇಹಕ್ಕೆ ತಟ್ಟುವಂತೆ ದೊರೆಯ ಅವಮಾನವು ಪ್ರಜೆಗಳಿಗೂ ಮೀಸಲು, ಈಗ, ಲೋಕದಿಂದಾಗಿ ನಿನಗೆ ಅಪಮಾನವೆಂದರೆ, ಕತ್ತಲೆಯ ಮೂಲಕ ವಾಗಿ, ಆ ಕತ್ತಲೆಯೆ ನಮ್ಮೆಲ್ಲರ ಕಣ್ಣಿಗೆ ಕಾಡಿಗೆ, ಅದು ಎಷ್ಟೆಷ್ಟು ಅಳಿವುದೊ, ಅಷ್ಟಷ್ಟೂ ನಮ್ಮ ನೋಟಕ್ಕೆ ಕಾಟವು, ಆ ಕಾಟವೆ ಗತಿ ಗೆಡಿಸುವ ಮಂತ್ರದ ಮಾಟವು, ಹಾಗೆ ಗತಿಗೆಟ್ಟರೆ, ನಮ್ಮ ಇನಿಬರ ಬಾಯಿಯೂ ಕಟ್ಟಿತು, ಆ ಮೇಲೆ, ನಮ್ಮನ್ನು ಒಂದು ನಾಡನಾಯಾದರೂ ಲೆಕ್ಕಿ ಸದು. ಎಂದಮೇಲೆ, ಈಗಿನ ನಿನ್ನ ಅವಮಾನವೆಂಬುದು, ನಮ್ಮ ಉದ್ದಾರದ ಉದ್ದೇಶದಿಂದ ಹುಟ್ಟಿದೆಯೆಂದಾಯಿತು, ಈ ತಲೆಹೋಪಾಗ ಬಾರದ ಕೈಯನ್ನು ಕೇಸರವೋಸರಿಸುವಾಗ ನೀಡುವುದೆ ? ಬೆನ್ನಿಗೆ ಬಡಿದರೆ ಭಳಿರೆ' ಎನ್ನುವ ಮೂಢನೂ ಹೊಟ್ಟೆಗೆ ಹೊಡೆದರೆ ಒಟ್ಟು' ಎಂದು ಭಾವಿಸುವನೆ ? ಆ ಬಿಳಿಮೋರೆಯ ರಾಜತ್ವಕ್ಕೆ ಮರುಳಾಗಿ, ನಮ್ಮ ಕರಿಮಣಿಯ ರಾತ್ರಿಯನ್ನು ಅವನ ಕೈವಿಡಿಸಿದುದೆ ದೊಡ್ಡ ತಪ್ಪು, ಆರ್ಯಮತದವರಾದರೂ, ನಮ್ಮಲ್ಲಿ