ಪುಟ:ಹಗಲಿರುಳು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು ಎದುರೆದುರು ದಂಡೋಪಾಯದಿಂದ ಹೋರಾಡುತ್ತಿದ್ದರು. ಈ ನೀಚನು, (ಒಳಹೊಕ್ಕುರಕಡಿವ' ಮರೆಮೋಸದ ಭೇದವನ್ನೆ ಪ್ರಯೋಗಿಸಿದ್ದಾನೆ. ಅದರಿಂದ ಲೋಕಮತವನ್ನೂ, ಈ ರಾಜಮತವನ್ನೂ ಖಂಡಿಸಿ, ನಮ್ಮ ಕತ್ತ ಲೆಯ ರಾಜ್ಯವನ್ನೆ ಅಖಂಡವಾಗಿ ಸ್ಥಾಪಿಸುವುದು ಆದ್ಯ ಕರ್ತವ್ಯವು, (ತಿರುಗಿ) ಪ್ರಿಯರಾದ ವ್ಯಾಘ್ರ ಪ್ರಮುಖರೆ, ನಮ್ಮೊಳಗೆ, ಮತಭೇದಗಳು ಇದ್ದ ರೂ ಇರಬಹುದು, ಅದು ಪ್ರಕೃತಿಯ ಕಟ್ಟಳೆ, ಮರಗಳು, ಕುಂಜಗಳು, ಗವಿ ಗಳು ಹಲವಾದರೂ, ನಮ್ಮ ನೆಲೆಮನೆಯಾದ ಈ ಕಾಡೊಂದೇ ಅಲ್ಲವೆ? ಅದರಿಂದ, ಎಲ್ಲರೂ ಒಕ್ಕಟ್ಟಾಗಿ ಮೊದಲು ಲೋಕವನ್ನೂ ನಕ್ಷತ್ರಪತಿ ಯನ್ನೂ ಬಗ್ಗು ಬಡಿಯಬೇಕು. ವ್ಯಾಘ್ರ:-( ಭೂಮಿ ಬಾಯಿಬಿಡುವಂತೆ ಬಾಯಿಬಿಟ್ಟು ) ಸಿಂಹರಾಜನ, ಅದ ಕ್ಕೇನು ಸಂದೇಹವು ? ಆ ನಾಡವರು, ನಮಗೆ ಕೊಡುತ್ತಿರುವ ಕೋಟಲೆ ಯೆಂದರೆ ಕೋಟಿ ಕೋಟಿ, ನಮ್ಮ ಮೃಗಜಾತಿಗೆ ಸೇರಿದ, ನಮ್ಮ ಹಲವು ಮಂದಿ ಬಂಧುಬಾಂಧವರನ್ನು, ಮೊದಲೆ ಸೆರೆಯ ಲ್ಲಿಟ್ಟವರು ಯಾರು ? ಪಾಪ ಬಹುಕಾಲ ಮೊದಲ್ಗೊಂಡು ಮನಮೆಚ್ಚಿದಂತೆ ಪಳಗಿಸಿ, ಸ್ವಾತಂತ್ರದ ದೈವೀ ಪ್ರಸಾದವನ್ನೆ ಮರೆಯಿಸಿ, ಅವರನ್ನು ಕೈಮರಿಗಳನ್ನಾಗಿ ಮಾಡಿದವರಾರು !? ಎಲ್ಲ ಆ ನೀಚಲೌಕಿಕರೆ, ಕಡೆಗೆ, ಆ ನಮ್ಮವರಿಗೆ 'ನಾಡಜಂತುಗಳು' ಎಂಬ ಹೆಸರಿಟ್ಟಿದ್ದಾರೆ. ಆದರೆ, ಆ ನಾಡಲ್ಲಿ ಯ ಅವರಿಗೆ ಇನ್ನೂ ಬಿಡುಗಡೆ ಇಲ್ಲ, ದನ, ನಾಯಿ, ಒಂಟಿ, ಕುದುರೆ ಮೊದಲಾದ ನಮ್ಮವರು ಅವರ ಊಳಿಗವನ್ನು ಮಾಡುತ್ತಿರುವುದೆಂದರೇನು ! ಇರಲಿ, ಸ್ವಾತಂತ್ರವಾದರೂ ಇದ್ದರೆ, ಮೆಣಸಿನ ಕಾರವನ್ನು ಸಕ್ಕರೆಯ ಸಿಹಿಯಿಂದ ಸೈಸುವಂತೆ ಇರ ಬಹುದಿತ್ತು, ಅದೊಂದಕ್ಕೂ ಎಡೆಯಿಲ್ಲ, ಇನ್ನು ಆ ವಂಚಕರಲ್ಲಿ ಹಲವರು (ಗೋವುಗಳೆಂದರೆ ನಮ್ಮ ದೇವತೆಗಳು' ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪಾಲಿನ ವಿಷಯವು ಬಂದೊಡನೆ, ಆ ದೇವತೆಗಳ ಕರುಗಳ ಕೊರಳಿಗೆ ಹಗ್ಗವೆ ದೇವತಾರಾಧನೆ, ಇಷ್ಟಲ್ಲದೆ ಗೋಹತ್ಯಕಾರರ' ಎಂದು ನಮ್ಮಲ್ಲಿ ಬೇರೊಂದು ಆಕ್ಷೇಪವಿದೆ. ಅದರಿಂದ, ನಮ್ಮನ್ನು, ಗುಂಡಿನ ಬಾಯಿಗೆ ಕಟ್ಟುತ್ತಾರೆ. ಆಗಾಗ ನಮ್ಮ ಈ ಮನೆಯನ್ನು ನುಗ್ಗಿ, ಸೂರೆಮಾಡುವುದಲ್ಲದೆ, ನಮ್ಮ ಮರಿಮಕ್ಕಳನ್ನೂ ಹಿಡಿದುಕೊಂಡು ಹೋಗುತ್ತಾರೆ, ನಮ್ಮ ಈ ಕಾಂಡೆಂಬ ಮನೆಯನ್ನು ಮುರಿದು ತಮ್ಮ ಮನೆಗಟ್ಟುತ್ತಾರೆ. ಇದೆಂಥ ಅನ್ಯಾಯ ?