ಪುಟ:ಹಗಲಿರುಳು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜುಲಾಯಿ ೧೯೧೮. ಬಂಧುಗಳನ್ನು ಮರೆತು ಹಗೆಗಳಲ್ಲಿ ಆಳಾಗಿ, ನಮ್ಮ ವಂಶಕ್ಕೇ ಕಳಂಕವನ್ನು ತರುವ ಆ ದನಗಳನ್ನು ಶಿಕ್ಷಿಸುವುದು ನಮ್ಮದೆ ಧರ್ಮವು, ಹೊಳೆನೀರಿಗೆ ದೊಣ್ಣೆಯ ಅಪ್ಪಣೆಯೇನು ? ಅದೂ ಬೇಡ, ಅವರೊಳಗೇ ಹಲವರು ಆ ದೇವತಾಸ್ವರೂಪಿಗಳಾದ ಗೋವುಗಳನ್ನು ಕಡಿದು, ಬಾಯಿಗೆ ಗಿಡಿಯುತ್ತಿರುವು ದನ್ನು, ಆ ಧರ್ಮರಕ್ಷಕರು ಯಾಕೆ ಕಂಡೂ ಕಾಣದಂತಿರುವುದು? ಅದರಿಂದ, ಅವರ ಧರ್ಮಾಚರಣೆಯೆಂದರೆ ಬಗ್ಗಿ ದವನಿಗೆ ಒಂದು ಗುದ್ದು ಹೆಚ್ಚು' ಎಂಬಂತೆಯೆ ಸರಿ, ಅಂಥ ದುಷ್ಟ ಲೋಕವನ್ನು ಮುರಿದುಬಡಿಯಲೆ ಬೇಕು. ಅದಕ್ಕೆ ಹಲವರೇಕೆ ? ಅಪ್ಪಣೆಯಾದರೆ, ಕೂಡಲೆ ಊರಿಗೆ ದಾಳಿಯಿಟ್ಟು, ಆ ಮನುಷ್ಯರನ್ನು ಕೊಂದುಕೂಗಿ ತಿಂದುತೇಗಿದ ಜಯಭೇರಿಯೊಡನೆ ಬರುತ್ತೇನೆ. ಜಂಬುಕ:- ಜೀಯ, ನಿಮ್ಮ ಪಣೆಗಟ್ಟಿನ ಎಣಿಕೆಗೆ ಎಣೆಯಿಲ್ಲ, ಆದರೂ ಹಿತ ದೃಷ್ಟಿಯ ನನ್ನದೂ ಒಂದು ಅಭಿಪ್ರಾಯವಿದೆ. ಆನೆಗರುಳಿನ ಸವಿ ಬೇರೆ. ಆಡಿನ ಅಡಗಿನ ಕಂಪು ಬೇರೆ. ಅವರಂತೆ, ನನ್ನ ಮಾತಿನಲ್ಲಿ ಯ ಬೆಲೆ ಯಿದ್ದರೆ ಕೇಳಬಹುದಷ್ಟೆ.. ಅಪ್ಪಣೆಯಾದರೆ ಹೇಳುತ್ತೇನೆ. ಸಿಂಹ:- ಹುಂ, ಅದೇನು ? ಜಂಬುಕ:- ಬುದ್ಧಿ, ನಿಮ್ಮ ಉದ್ಯೋಗಶಕ್ತಿಗಳ ಬಲುಮೆ ತಕ್ಕಷ್ಟು೦ಟು. ಆದರೆ, ಶಕ್ತಿ ನೆಲೆಗೊಳ್ಳಬೇಕಾದರೆ, ಯುಕ್ತಿಯೋಚನೆಗಳ ಅಡಿಗಟ್ಟು ಅಚ್ಚು ಗಟ್ಟಾ ಗಿರಬೇಕು, ಹೇಗೆಂದರೆ--ಎಣಿಕೆಯ ನೂಲನ್ನು ಯುಕ್ತಿಯ ಮಗ್ಗ ಕ್ಕೆ ಸುತ್ತುವ ಮೊದಲೆ, ಅದು ಗಟ್ಟಿಯಾಗಿದೆಯೋ ಎಂದು ಪರೀಕ್ಷಿಸಬೇಕು, ಆ ಉಪಾಯದ ಮಗ್ಗವನ್ನು , ಶಕ್ತಿಗನುಸಾರವಾಗಿ ಉದ್ಯೋಗದ ಬಟ್ಟೆ ಯಲ್ಲಿ ಎಸೆಯಬೇಕು. ಹಾಗಾದರೇ ಬಟ್ಟೆ ಬಯಲಿಗೆ ಬಂದು ಮಾನಕ್ಕಾ ಗುವದು, ಇದು ಸ್ವಕಪೋಲಕಲ್ಪಿತವಲ್ಲ ; ನಿಮ್ಮ ಪೂರ್ವಿಕರ ಪ್ರಿಯ ಮಂತ್ರಿಗಳಾಗಿದ್ದ, ನನ್ನ ಹಿರಿಯರಾದ ಕರಟಕದಮನಕರ ಬಾಯಿಂದ ಬಿದ್ದ ಬಂಗಾರದ ಮಾತು. ಅದರಿಂದ, ಎಲ್ಲದಕ್ಕೂ ತಳಗಲ್ಲಾದ ಯುಕ್ತಿಯನ್ನೆ ಮೊದಲು ಪರೀಕ್ಷಿಸಬೇಕು. ವ್ಯಾಘ್ರ:-ಆಗಲಿ, ಅದೇನು ಪರೀಕ್ಷೆ?