ಪುಟ:ಹಗಲಿರುಳು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು ಜಂಬುಕ:- ಬುದ್ದಿ, ಹೇಳುತ್ತೇನೆ, ಆದರೆ ಹಿಂದಿದ್ದರೆ ತೊತ್ತು, ಮುಂದಿದ್ದರೆ ತುತ್ತು' ಎಂಬುದು ಹೆಚ್ಚಾಗಿ ಈಗಿನ ಅರಸರ ರೀತಿ, ಅದರಿಂದ, ಕಂಡು ದನ್ನು ಕಂಡಂತೆ ಹೇಳಲಿಕ್ಕೆ ಸ್ವಲ್ಪ ಭಯವಾಗುತ್ತದೆ. ಸಿಂಹ:- ಅದೇನೂ ಇಲ್ಲ, ನಿನ್ನ ಪೂರ್ವಜರಂತೆ, ನೀನೂ ಬಗೆಬಾಯಿಗಳಿಂದ ಸಹಾಯಕನಾಗಲೇ ಬೇಕು, ಕೆಲಸದ ಬಂಡಾರಕ್ಕೆ ಎಣಿಕೆಯ ಬೀಗದ ಕೈಯಲ್ಲವೆ ? ಜಂಬುಕ:- ಇದೀಗ ಕೋಲುಬೇಲಿಯಿಲ್ಲದ ರಾಜಮಾರ್ಗವು, ಕೇಳು, ಮೊದಲು ನಮ್ಮೆಣಿಕೆಯನ್ನೆ ಬಲಪಡಿಸಿಕೊಳ್ಳಬೇಕು ಎಂದರೆ-ಆಡಳಿತದ ರೀತಿ, ಪ್ರಜೆ ಗಳೆಲ್ಲರಿಗೂ ಮೆಚ್ಚಿಕೆಯಾಗಿರಬೇಕು, ಮೇಲಾಳುಗಳಿಗೆ, ಎಲ್ಲರಲ್ಲಿ ಯ ಸಮದೃಷ್ಟಿಯಿದ್ದರೇ ಅದು ಸಾಗುವುದು ಹಾಗಿಲ್ಲದೆ, ಈ ಕೆಲಸದಲ್ಲಿ ಮಾತ್ರ ನೀವು ನಮಗೆ ಸಹಾಯಕರಾಗಬೇಕು' ಎಂದರೆ, ಆ ಕೀಳುತರಗತಿ ಯವರು ಒಪ್ಪುವರೆ ? ಕಷ್ಟ ಕಾಲದಲ್ಲಿ ಕೈಗೊಟ್ಟವನನ್ನು, ಇಷ್ಟವೊದಗಿದಾಗ, ಸಮ್ಮಾನದ ಹಿಟ್ಟಾಗಿಸಬಾರದು, ಐಕಮತ್ಯವೆಂಬುದು, ಒತ್ತಾಯದಿಂದ ಕಡೆ ಸಾಗದು, ಒಳಗೊಳಗಿನ ಬಿರುಕಿಗೆ ಮಣ್ಣು ಮತ್ತದೆ, ಮೇಲುಮೇಲಿಂದ ಸಾರಣೆಮಾಡಿದರೆ ಹೇಗಾದೀತು? ನಿನ್ನ ಉದಾರಮತದಂತೆ, ದೊರೆಯಾದ ಅಂಧಕಾರನ ಅಭಿಪ್ರಾಯವೂ ಇರುವುದಾದರೆ ಕಾರ್ಯಸಿದ್ಧಿ ಕೈಗೆ ಬಂದಂತೆ ಯೇ ಸರಿ. ಅಂಧಕಾರ:- ಹೌದು, ನನ್ನೊಳಗಿನ ಪ್ರಜೆಗಳೆಲ್ಲ ರೂ, ತಾಯಮಡಿಲ ಮಕ್ಕಳಂತೆ, ಅವರವರ ಯೋಗ್ಯತಾನುಸಾರವಾಗಿ, ಏಕರೀತಿಯಿಂದ ಸುರಕ್ಷಿತರಾಗಬೇಕು. ವ್ಯಾಘ್ರ:- (ಕೋಪಿಸಿ) ದೊರೆಯೆ, ಭೇದಬುದ್ದಿ ಯ ಬೀಜವಾದ, ಈ ನರಿಯ ಮಾತಿಗೆ ಏನೆಂದು ಹೇಳಬೇಕು! ಸಮಭಾವವೆಂಬುದು, ನಮ್ಮಲ್ಲಿ ಈಗಲ್ಲ ಆಗಲ್ಲ ; ಆದಿ ಯಿಂದಲೆ ಹುಟ್ಟಿರುವುದು, ಲೋಕದ ಆ ಪಕ್ಷಪಾತಬುದ್ದಿಯ ನಿಗ್ರಹ ಕಾಗಿಯೆ, ನಾವು ಇಷ್ಟೆಲ್ಲ ಯೋಚಿಸುವುದು, ಪ್ರಜೆಗಳಿಗೆ ಅಸಂತೋಷ ವುಂಟಾಗಬಾರದೆಂದು, ನಾವು ಕೈಲಾದಷ್ಟು ಪ್ರಯತ್ನಿಸುತ್ತೇವೆ. ಸುಲಭ ವಾಗಿ ಒದಗತಕ್ಕ ಕಾಡಜಂತುಗಳನ್ನೂ ಬಿಟ್ಟು ನಾಡವುಗಳನ್ನೆ ತಿನಿಸಿಗಾಗಿ ಆರಿಸುವುದು ಮತ್ತೇಕೆ ? ನನ್ನಾಕೆ, ಈ ಪ್ರಜೆಗಳ ಹಿತಕ್ಕಾಗಿ, ಹುಟ್ಟಿದ